ನಿಮ್ಮ ಆಸೆ, ನಿಮ್ಮ ಮಕ್ಕಳಿಂದ ದೊಡ್ಡದಾಗದಿರಲಿ~ ಡಾ. ಶಶಿಕಿರಣ್ ಶೆಟ್ಟಿ

♦️ಹೃದಯ ಗಟ್ಟಿ ಇದ್ದವರಷ್ಟೇ ಈ ಕಥೆ ಓದಿ..

ತಂದೆಯ ಕಣ್ಣುಗಳು ಮಂಜಾ ಗುತ್ತಿದ್ದವು, ಮಗ ಬರೆದು ಕಳಿಸಿದ್ದ ಕೊನೆಯ ವಾಟ್ಸಪ್ ಸಂದೇಶ ಓದುತಿದ್ದರು. ಈ ದಿನದ 77 ನೆಯ ಬಾರಿ ಓದುತಿದ್ದಾರೆ ಈ ನತದೃಷ್ಟ ಅಪ್ಪ. ನಾಳೆಗೆ ಸರಿಯಾಗಿ 60 ದಿನ ಕಳೆಯುತ್ತದೆ puc ರಿಸಲ್ಟ್ ಅನೌನ್ಸ್ ಆಗಿ. ದಿನಗಳಲ್ಲಿ 2000 ಬಾರಿ ಓದಿದ್ದರು ಇದುವರೆಗೆ ಮಗನ ಆ ಸಂದೇಶ..

ಮಗನ ವಾಚ್ ಅನ್ನು ಬಳಿಯಲ್ಲೇ ಇಟ್ಟಿದ್ದರು ಅದು 12 ಗಂಟೆಗೆ ನಿಂತಿತ್ತು. ಒಬ್ಬನೇ ಮಗನನ್ನು MBBS ವೈದ್ಯನ್ನಾಗಿಸುವ ಒಂದೇ ಕನಸಿತ್ತು ಆ ತಂದೆಗೆ ಅದಕ್ಕಾಗಿ ಕಷ್ಟಪಟ್ಟು ಓದಿಸಿದ್ದರು. ಮಗನೂ ಚಾಲೆಂಜ್ ಸ್ವೀಕರಿಸಿದ್ದ ಅಪ್ಪ ನಿನ್ನ ಕನಸನ್ನು ನನಸಾಗಿಸುತ್ತೇನೆ ಎಂದು. ಮಗ ರೆಸಿಡೆನ್ಸಿಯಲ್ ಸ್ಕೂಲ್ ಅಲ್ಲಿ ಓದುತಿದ್ದ. ಆ ದಿನ ಬಂದೇ ಬಿಟ್ಟಿತು ರಿಸಲ್ಟ್ ದಿನ.

ಮಗ 95% ಗಿಂತ 5 ಅಂಕ ಗಳು ಕಡಿಮೆ ತೆಗೆದಿದ್ದ. ತಂದೆ ಊರಲ್ಲಿ ರಿಸಲ್ಟ್ ನೋಡಿದ್ದರೆ ಮಗ ಶಾಲೆಯ ಪಕ್ಕ ರಿಸಲ್ಟ್ ನೋಡಿದ್ದ ಅವನಿಗೂ ಬೇಸರವಾಗಿತ್ತು. ಮೆಡಿಕಲ್ ಸೀಟ್ ತಪ್ಪಿದ್ದಕ್ಕೆ, ತಂದೆಗೆ ಕೊಟ್ಟ ಮಾತು ತಪ್ಪಿದ್ದಕ್ಕೆ, ತಂದೆಗಂತೂ ಆಕಾಶವೇ ಕಳಚಿ ಬಿದ್ದಂತಾಗಿತ್ತು. ತನ್ನೆಲ್ಲ ಕನಸಿನ ಗೋಪುರ ಹಾಳುಮಾಡಿದ ಮಗನ ಬಗ್ಗೆ ಬೇಸರಕ್ಕಿಂತ ಹೆಚ್ಚು ಸಿಟ್ಟಿತ್ತು ಅವರಲ್ಲಿ.

ಮಗನಿಗೂ ಗೊತ್ತಿತ್ತು ಅಪ್ಪ ರಿಸಲ್ಟ್ ನೋಡಿರುತ್ತಾರೆ ಬೇಸರದಲ್ಲಿರುತ್ತಾರೆ ಎಂದು ಸಮಯ 11.30… ಅಪ್ಪನಿಗೊಂದು ವಾಟ್ಸಪ್ ಸಂದೇಶ ಕಳಿಸಿದ್ದ.. ಅಪ್ಪ ಸಿಟ್ಟಲ್ಲಿ ಕುದಿಯುತಿದ್ದ, ಮಾನಗೆಟ್ಟವ ಮಾತಾಡೋ ದಮ್ ಇಲ್ಲದವ ಮೆಸೇಜ್ ಮಾಡಿದ್ದಾನೆ ದರಿದ್ರದವ ಎಂದು ಮೆಸೇಜ್ ನೋಡದೆ ಸಿಟ್ಟಲ್ಲಿ ಕೂತಿದ್ದರು ಮುಂದಿನ ಅರ್ಧಗಂಟೆ.  ಅದೆಷ್ಟೋ ಬಾರಿ ಅವರ ಒಳಮನಸ್ಸು ಕೇಳುತಿತ್ತು ಮಗನಿಗೆ ಫೋನ್ ಮಾಡಬೇಕೆಂದು ಸಿಟ್ಟು ಅದೆಲ್ಲವನ್ನೂ ಮರೆಸಿತ್ತು.ಅಲ್ಲೊಂದು ಆಘಾತಕಾರಿ ಸುದ್ದಿ ಇತ್ತು.

ಮನೆಯೆದುರು ಆಂಬುಲೆನ್ಸ್ ಬಂದಾಗಲೇ ತಿಳಿದದ್ದು ಮಗ ನದಿಗೆ ಹಾರಿ ಆತ್ಮಹತ್ಯೆ ಮಾಡಿದ್ದ ಎಂದು. ಸ್ತಬ್ದರಾಗಿ ಹೋದರು ತಂದೆ. ಆಗ ಆಕಾಶ ತಲೆ ಮೇಲೆ ಬಿದ್ದ ಅನುಭವ ವಾಗಿದ್ದರೆ, ಈಗ ಭೂಮಿ ಬಾಯಿ ತೆರೆದ ಅನುಭವ. ಅವನ ಉಸಿರಿಲ್ಲದ ದೇಹದ ಮೇಲೆ ಒಂದಷ್ಟು ಹೊತ್ತು ಗೊಳೋ ಎಂದು ಅತ್ತರು ಕೈಯಲ್ಲಿದ್ದ ವಾಚ್ 12ಕ್ಕೆ ನಿಂತಿತ್ತು. ನೀರಲ್ಲಿ ಮುಳುಗಿ ಅದರೊಳಗೆ ನೀರು ಹೋಗಿತ್ತು.

ಮತ್ತೆ ಹಳೆಯ ನೆನಪಿಂದ ಹೊರಬಂದರು. ಆ ಕೊನೆಯ ಸಂದೇಶ ಸರಿಯಾಗಿ 11.30 ಕ್ಕೆ ಬಂದಿತ್ತು ಅದನ್ನು ಓದಿ ರಿಪ್ಲೈ ಮಾಡಿದ್ದರೆ ಬಹುಷಃ ಮಗ ಉಳಿಯುತಿದ್ದ, ಯೋಚಿಸುತ್ತಿದ್ದಂತೆ ಮತ್ತೆ ಕಣ್ಣುಗಳು ಮಂಜಾಗಿದ್ದವು.. ಇಗೀಗ ಇದೇ ಅವರ ದಿನಚರಿ ಯಾಗಿತ್ತು. ಕೊನೆಯ ಸಂದೇಶ ಮತ್ತೊಮ್ಮೆ ಓದಿದರು. ಇದು 2001 ನೆಯ ಬಾರಿ. ಮಗ ಬರೆದಿದ್ದ ” ಪೊಪ್ಪ ಚಾಲೆಂಜ್ ಅಲ್ಲಿ ಸೋತೆ, ಜೀವನದಲ್ಲಿ ಗೆಲ್ಲುತ್ತೆನೆ ಒಂದು ಅವಕಾಶ ಕೊಡು ಪೊಪ್ಪ, ಸೋರಿ ಪೊಪ್ಪ. ಮತ್ತೆ ಕಣ್ಣುಗಳು ಮಾಂಜಾದವು.

ಆದರೆ ಸಿಟ್ಟು ಅವಕಾಶ ಕೊಡುವುದಿರಲಿ, ಅವನ ಮೆಸೇಜ್ ಓದಲು ಕೂಡಾ ಬಿಟ್ಟಿರಲಿಲ್ಲ ಅಂದು. ಈಗ ಅದೇ ಸಂದೇಶ ವನ್ನು ಬಾರಿ ಬಾರಿ ಓದುತ್ತಿದ್ದಾರೆ ಅಂದು ಮಾಡಿದ ತಪ್ಪಿಗಾಗಿ.

ನೆನಪಿರಲಿ sslc, puc.. ಕೇವಲ ಬದುಕೆಂಬ ಪುಸ್ತಕದ ಒಂದೊಂದು ಪೇಜ್ ಅಷ್ಟೇ, ಅದೇ ಬದುಕಲ್ಲ ಹಾಗೇ ಪರೀಕ್ಷೆಯಲ್ಲಿ ಫೇಲ್ ಆದಾಕ್ಷಣ ಬದುಕಲ್ಲಿ ಫೇಲ್ ಆಗಬೇಕೆಂದೇನೂ ಇಲ್ಲ, ಹಾಗೇ ನಿಮ್ಮ ಸಿಟ್ಟು ನಿಮ್ಮ ಜೀವನ, ನಿಮ್ಮವರ ಜೀವನವನ್ನು ಹಾಳು ಮಾಡದಿರಲಿ. ಯಾಕೆಂದರೆ ವಸ್ತು ಕಳಕೊಂಡರೆ ಸಿಗಬಹುದು, ಜೀವ ಕಳಕೊಂಡರೆ ಮತ್ತೆ ಸಿಗದು. ನೆನಪಿಡಿ. ನಿಮ್ಮ ಆಸೆ… ನಿಮ್ಮ ಮಕ್ಕಳಿಂದ ದೊಡ್ಡದಾಗದಿರಲಿ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply