ಶ್ರೀ ವೇದವ್ಯಾಸ ಸಂಶೋಧನ ಕೇಂದ್ರದ ವತಿಯಿಂದ ‘ಕ್ಷೇಮಂ ವಿಧಾಸ್ಯತಿ ಸ ನಃ ‘ಕರೋನ’ತೋಪಿ” ಪುಸ್ತಕ ಬಿಡುಗಡೆ

 ಸುಬ್ರಹ್ಮಣ್ಯಮಠದ ವೇದವ್ಯಾಸ ಸಂಶೋಧನ ಕೇಂದ್ರದಿಂದ ಪ್ರಕಟಿತವಾದ, ಪ್ರೊ. ಸಗ್ರಿ ರಾಘವೇಂದ್ರ ಉಪಾಧ್ಯಾಯರು ಸಂಪಾದಿಸಿರುವ, ‘ಕ್ಷೇಮಂ ವಿಧಾಸ್ಯತಿ ಸ ನಃ ‘ಕರೋನ’ತೋಪಿ” ಎಂಬ ಪುಸ್ತಕವನ್ನು ಪಲಿಮಾರು ಮಠಾಧೀಶರಾದ ಪರಮಪೂಜ್ಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀಪಾದರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.

‘ಕೊರೋನ; ರೋಗದ ಪರಿಹಾರಕ್ಕೆ ಹೇಗೆ ಆಧ್ಯಾತ್ಮಿಕ ಮಾರ್ಗಗಳನ್ನು, ಅನುಸಂಧಾನಗಳನ್ನು ತಾಳಬಹುದು ಎಂಬುದನ್ನು ಈ ಹೊತ್ತಗೆಯಲ್ಲಿ ವಿಮರ್ಷಿಸಲಾಗಿದೆ. ಅದರೊಂದಿಗೆ ಜೌತಿಷ ಹಾಗೂ ಆಯುರ್ವೇದದ ದೃಷ್ಟಿಯಲ್ಲಿ ಕೊರೋನದ ಬಗ್ಗೆ ಲೇಖನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುತ್ತಿರುವ ರಾಮನವಮಿ ಉತ್ಸವದ ಅಂಗವಾಗಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನೆರವೇರಿತು. ವಿದ್ವಾಂಸರಾದ ಪ್ರೊ. ಲಕ್ಷ್ಮೀನಾರಾಯಣ ಭಟ್ಟ, ಅವಧಾನಿ ಸುಬ್ರಹ್ಮಣ್ಯ ಭಟ್, ಶ್ರೀ ರವೀಂದ್ರ ಭಟ್ ಹೆರ್ಗ ಹಾಗೂ ವೇದವ್ಯಾಸ ಸಂಶೋಧನ ಕೇಂದ್ರದ ಗೌರವ ಸಂಪಾದಕರಾದ ಡಾ. ಎಸ್ ಆನಂದತೀರ್ಥ ಮೊದಲಾದವರು ಉಪಸ್ಥಿತರಿದ್ದರು. ಪುಸ್ತಕದ ಅಪೇಕ್ಷೆ ಉಳ್ಳವರು ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು – 9743449915 ಅಥವಾ 9964025922

 
 
 
 
 
 
 
 
 
 
 

Leave a Reply