ಸುದ್ದಿಯ ನಿಖರತೆಯೊಂದಿಗೆ ಯುವ ಪ್ರತಿಭೆಗಳಿಗೊಂದು ಕರಾವಳಿ ಎಕ್ಸ್ಪ್ರೆಸ್ ಉತ್ತಮ ವೇದಿಕೆ ~ಭಾವನಾ ಕೆರೆಮಠ

ರಾಜ್ಯಮಟ್ಟದಲ್ಲಿ ನಡೆದ ಸುದ್ದಿಗಳು ಬೇಗನೇ ಎಲ್ಲರ ಗಮನ ಸೆಳೆಯುತ್ತದೆ ಆದರೆ ಸಣ್ಣ ಗ್ರಾಮ ಜಿಲ್ಲೆಗಳಲ್ಲಿ ಈಗ ತಾನೆ ಹೊರಹೊಮ್ಮುತ್ತಿರುವ ಹಲವಾರು ಸಂಘ-ಸಂಸ್ಥೆಗಳ ಕಾರ್ಯಗಳನ್ನು ಹೊಸ ಪ್ರತಿಭೆಗಳನ್ನು ಪರಿಚಯಿಸಿವಂತಹ ಆಗಬೇಕು. ಅದರಂತೆ ಕರಾವಳಿ ಎಕ್ಸ್ಪ್ರೆಸ್ ತನ್ನ ಹೆಸರಿಗೆ ತಕ್ಕಂತೆ  ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುದ್ದಿಗಳನ್ನು ವಿಶೇಷ ವಿಷಯಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. 
ಇದರೊಂದಿಗೆ ರಾಜ್ಯದ ದೇಶದ ಹಾಗೆ ಅಂತರರಾಷ್ಟ್ರೀಯಮಟ್ಟದಲ್ಲಿ ನಡೆಯುವಂತಹ ವಿಚಾರಗಳನ್ನು, ಸುದ್ದಿಗಳನ್ನು ಪ್ರತಿಯೊಬ್ಬರ ಅಂಗೈಗೆ ತಂದುಕೊಟ್ಟಿದೆ. ಸಾಮಾಜಿಕ ಮೌಲ್ಯಗಳನ್ನು ತಿಳಿಸುವಂತಹ ಲೇಖನಗಳು, ನೆರವು ಅಪೇಕ್ಷಿಸುವ ಅನೇಕ ಕುಟುಂಬಗಳ ಕುರಿತಾದ ವಿಷಯಗಳನ್ನು ಜನರೆಡೆಗೆ ಕೊಂಡೊಯ್ದು ಅಂತವರಿಗೆ ಸಹಾಯ ಮಾಡುವಲ್ಲೂ ಸಹಕಾರಿಯಾಗಿದೆ.
 ಹೀಗೆ ಪ್ರಾರಂಭವಾದ ಒಂದೇ ವರ್ಷದಲ್ಲಿ 4,50,000 ಜನರನ್ನು ತನ್ನ ಆಕರ್ಷಿಸಿದ ಕರಾವಳಿ ಎಕ್ಸ್ಪ್ರೆಸ್ ಗೆ ಪ್ರಥಮ ವರ್ಷದ ಶುಭಾಶಯಗಳು. ಹೀಗೆ ಇನ್ನೂ ಅನೇಕ ವರ್ಷಗಳ ಕಾಲ ಸಾಮಾಜಿಕ ಕಳಕಳಿಯೊಂದಿಗೆ ಬೇರೆ ಎಲ್ಲವುದಕ್ಕಿಂತ ವಿಭಿನ್ನವಾಗಿ ಕರಾವಳಿ ಎಕ್ಸ್ಪ್ರೆಸ್ ಮೂಡಿ ಬರಲಿ.

ಯಾವುದೇ ಪ್ರಕಾರದ ಬರವಣಿಗೆಯ ಮೇಲೆ ಆಸಕ್ತಿ ಇರುವ ಪ್ರತಿಯೊಬ್ಬ ಬರಹಗಾರರಿಗೂ ಅದನ್ನು ಓದುಗರಿಗೆ ಮುಟ್ಟಿಸಲು ಸೂಕ್ತ ವೇದಿಕೆ ಸಿಗಬೇಕೆಂಬುದು ಬಹುದೊಡ್ಡ ಹಂಬಲವಾಗಿರುತ್ತದೆ ಅಂತಹ ಅನೇಕ ಯುವ ಬರಹಗಾರರಿಗೆ ಪ್ರೋತ್ಸಾಹಿಸಿ, ಪದಗಳ ಮಿತಿಯನ್ನು ಮೀರಿ ಬರಹಗಳ ಪ್ರಕಾರವನ್ನು ದಾಟಿ ಹಲವಾರು ಬರಹಗಾರರಿಗೆ ತಮ್ಮನ್ನು ತಾವು ಅವಲೋಕಿಸಿಕೊಳ್ಳಲು ಅವಕಾಶ ನೀಡಿದೆ.

ಅಂತೆಯೇ ಛಾಯಾಚಿತ್ರಗ್ರಾಹಕರಿಗೆ ಉತ್ತಮ ವೇದಿಕೆಯಾಗಿದೆ. ಕರಾವಳಿ ಎಕ್ಸ್ಪ್ರೆಸ್ ನ ವಿಶೇಷವೆಂದರೆ ಕೇವಲ ಕ್ಯಾಮರಾದಲ್ಲಿ ತೆಗೆದಂತಹ ಫೋಟೋಗೆ ಮಾತ್ರವಲ್ಲದೆ ಮೊಬೈಲ್ ನಲ್ಲಿ ತೆಗೆದರು ಕೂಡ ಅದು ಉತ್ತಮ ಫೋಟೋ ಅದಾಗಿದ್ದರೆ ಅದನ್ನು ಪ್ರಕಟಿಸಲು ಅವಕಾಶ ನೀಡಿದೆ.
 ಇದು ಬಹಳಷ್ಟು ಜನರಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದೆ. ಹೀಗೆ ಯುವ ಪ್ರತಿಭೆಗಳನ್ನು ಸಮಾಜದ ಮುಖ್ಯ ಭೂಮಿಕೆಗೆ ಸದಾ ಪರಿಚಯಿಸುತ್ತಿರಲಿ ಎನ್ನುವುದು ನನ್ನ ಆಶಯ.
 
 
 
 
 
 
 
 
 
 
 

Leave a Reply