ಎಂದೂ ಮಾಸದ ಕ್ಯಾಲೆಂಡರ್ ಕೊಡವೂರ ರಿಮೈಂಡರ್ 

ಇದೊಂದು ವಿಭಿನ್ನ ಲೇಖನ ಓದಿರಿ, ಕಾರಣ ಎಲ್ಲರೂ ಒಂದು ವರ್ಷವಿಡೀ ಬಳಸಿ ನಂತರ ಮರೆಯೋದು ಯಾವು ದನ್ನ ಅಂದರೆ ದಿನ ಸೂಚಿಸೋ ಕ್ಯಾಲೆಂಡರ್ ಗಳನ್ನು. ಪಾಪ ನಮ್ಮ ದೈನಂದಿನ ಜೀವನದ ದಿಕ್ಸೂಚಿಯಾದ ಈ ಕ್ಯಾಲೆಂಡರ್ ಗಳು ಪ್ರತೀ ವರ್ಷ ಮುಗಿದಂತೆ ಕಸದ ಬುಟ್ಟಿ ಸೇರೋದು. ಮೊದಲೆಲ್ಲಾ ಚೆಂದವಾಗಿ ಪುಸ್ತಕಗಳಿಗೆ ಬೈಂಡ್ ಹಾಕೋದು ಅಥವಾ ಅಂಗಡಿಗಳಲ್ಲಿ ಪೊಟ್ಟಣ ಕಟ್ಟಲು ಬಳಕೆಯಾಗುತ್ತಿತ್ತು. ಕೆಲವೊಂದು ಕ್ಯಾಲೆಂಡರ್ ಗಳ ತಳಭಾಗ ದಿನಸೂಚಿಯನ್ನು ಮಾತ್ರ ಹರಿದು, ಮೇಲೆ ದೊಡ್ಡದಾಗಿ ಇರೋ ಒಳ್ಳೆಯ ಚಿತ್ರಗಳಾದ ದೇವರ ಫೋಟೋ, ಉತ್ತಮ ಸೀನರೀಸ್, ಕುಂಚಕಲೆ ಹೀಗೆ ಇವುಗಳನ್ನು ಮಾತ್ರ ಇಟ್ಕೋತಾರೆ. ಇವೆಲ್ಲವೂ ಹೀಗೆಲ್ಲಾ ಆದರೆ, ನಾ ಬರೆ ಯಲು ಹೊರಟ ಲೇಖನದ ಕ್ಯಾಲೆಂಡರ್ ಅದೊಂದು ಕ್ಯಾಲೆಂಡರ್ ಆಗದೆ ಎನ್ಸೈಕ್ಲೋಪೀಡಿಯಾ ಆಗಿದೆ.ನಮ್ಮನ್ನೆಲ್ಲಾ ಅಗಲಿದ ಕೀರ್ತಿಶೇಷ ಜನನಿ ಭಾಸ್ಕರ ಭಟ್ ಅಗ್ರಹಾರ, ಕೊಡವೂರು, ಇವರ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ಕೊಡವೂರು ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನದ ವಾರ್ಷಿಕ ಕ್ಯಾಲೆಂಡರ್. ಅಬ್ಬಾ ಈ ಕ್ಯಾಲೆಂಡರ್ ಯಾರಾದ್ರೂ ಬಿಸಾಡಿದ್ರೆ ಅವರು ಖಂಡಿತವಾಗಿ ಏನನ್ನೋ ಕಳೆದು ಕೊಳ್ಳುತ್ತಾರೆ, ಕಾರಣ ವಿವಿಧ ವಿಚಾರಗಳ ರಸ ಧಾರೆ ಇದರಲ್ಲಿ ಅಡಕವಾಗಿದೆ.

ಈ ಕ್ಯಾಲೆಂಡರ್ ನಂಗೆ ಸಿಕ್ಕ ಬಗ್ಗೆ ಕಿರುವಾಗಿ ಹೇಳ್ತೇನೆ, 2016-17 ನೇ ಸಾಲಿನ ನಮ್ಮ ಕಾಲೇಜಿನ ಎನ್.ಎಸ್ .ಎಸ್ ವಾರ್ಷಿಕ ವಿಶೇಷ ಶಿಬಿರವು ಕೊಡವೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತ್ತು, ಆ ಸಮಯದಲ್ಲಿ ಕೊಡವೂರು ದೇವಸ್ಥಾನದ ಶುಚಿತ್ವ ಮತ್ತು ಕೊಡವೂರಿನ ಪೇಜಾವರ ಮಠದ ಗೋ ಶಾಲೆಯಲ್ಲಿಯೂ ಶ್ರಮದಾನ ಮಾಡಿದ್ದೆವು. ಈ ಶಿಬಿರದ ಸಮಾರೋಪ ಭಾಷಣಕ್ಕೆ ಭಾಸ್ಕರ ಭಟ್ ಅವರೇ ಮುಖ್ಯ ಅತಿಥಿಗಳಾಗಿದ್ದರು, ಅಂದು ನಮಗೆ 2017 ಇಸವಿಯ ಕೊಡವೂರು ಬ್ರಾಹ್ಮಣ ಮಹಾಸಭಾ(ರಿ) ನ ಕ್ಯಾಲೆಂಡರ್ ಹಸ್ತಾಂತರಿದ್ದರು, ಅಂದಿನಿಂದ ಇಂದಿನವರೆಗೆ ನಾಲ್ಕು ಕ್ಯಾಲೆಂಡರ್ ಇನ್ನೂ ನನ್ನ ಹತ್ರ ಇದೆ, ಯಾಕಿದೆ ಅಂದ್ರೆ ಈಗ ನಿಮಗೆ ತಿಳಿಯ ಪಡಿಸುತ್ತೇನೆ.

ವಿಚಾರಧಾರೆಗಳು ಇಂತಿವೆ, ತುಳು, ಕನ್ನಡ, ಗ್ರಾಮ್ಯ ಕನ್ನಡ, ಸಾಹಿತ್ಯ, ಔಷಧೀಯ ಗುಣ, ಮನೆಮದ್ದು ಹೀಗೆ ಹತ್ತು ಹಲವು ಸೇರಿದೆ, ಮುಖ್ಯವಾಗಿ ಮಕ್ಕಳ ಆರೋಗ್ಯ ನಿರ್ವಹಣೆ, ನೀತಿ ಬೋಧೆ, ಪರೋಪಕಾರಿ ಕರಿಬೇವು, ಅಮೃತ ಸಮಾನ ಅಮೃತ ಬಳ್ಳಿ,  ವಿವಿಧ ಸಿಹಿ ತಿಂಡಿ ಮಾಡೋ ವಿಧಾನ, ತುಳಸಿ ಮಹಾತ್ಮೆ-ಔಷಧೀಯ ಗುಣಗಳು, ದೊಡ್ಡ ಪತ್ರೆ, ನೆಲನೆಲ್ಲಿಯ ವಿಶೇಷತೆ, ಸ್ನೇಹ ಸಲಹೆ, ಕಷಾಯದ ಹುಡಿ, ಯಾವ ರೋಗ-ಯಾವ ಯೋಗ, ವಾರದಿನಗಳ ವಿಶೇಷತೆ, ಮೆದುಳಿಗೆ ಮೇವು, ಹಬ್ಬಹರಿದಿನಗಳ ಮಹತ್ವ, ಕುರುಡು ಮೋಹ, ಅಡುಗೂಲಜ್ಜಿ ಮದ್ದು, ನಿಮಗಿದು ತಿಳಿದಿರಲಿ.
ಆತ್ಮ ನಿವೇದನೆ, ನವರಾತ್ರಿ ವಿಶೇಷತೆ, ತಾರಾಬಲ ಕೋಷ್ಟಕ, ಅಮ್ಮನ ದ್ವಾದಶ ರೂಪಗಳು, ಅಮ್ಮಾ ನಿನ್ನ ತೋಳಿನಲ್ಲಿ, ವಿವಾಹ ಸಂಸ್ಕಾರ, ಏಕಾದಶಿವ್ರತ ಮಹಾತ್ಮೆ, ರೋಗವಾಹಕ ದುಡ್ಡು, ದೇವಸ್ಥಾನದಲ್ಲಿ ಅನು ಸರಿಸಬೇಕಾದ ಪಂಚದಶ ಸೂತ್ರಗಳು, ಜೈ ಗೋಮಾತೆ, ದೇವರ ದರ್ಶನ, ಧರ್ಮೋ ರಕ್ಷತಿ ರಕ್ಷಿತಃ, ಬದುಕು, ವಾಹನ ಚಾಲಕರೇ ನಿಮಗಿದು ತಿಳಿದಿರಲಿ, ಸರ್ಕಾದ ವಿವಿಧ ಜನೋಪಯೋಗಿ ಯೋಜನೆಗಳು, ಸರ್ವಶಕ್ತಿಶಾಲಿ ಮಹಾಮೃತ್ಯುಂಜಯ ಮಂತ್ರ.
ಮೊಬೈಲ್ ಗೆ ನಮೋ ನಮಃ, ಮೊಡವೆಗೇಕೆ ನಮ್ಮ ಗೊಡವೆ, ಕೃತಕ ಸೌಂದರ್ಯ ಸಾಧನಗಳಿಗೆ ಬಲಿಯಾಗದಿರಿ, ಜೀವನದ ಕಟು ಸತ್ಯ, ನಿಂಬೆ ನಿನ್ನ ಮಹಿಮೆಯ ಏನೆಂಬೆ, ಅಸ್ತಮಾ ನೀಗಿಸಿ, ನುಡಿಮುತ್ತು, ಮೊಬೈಲ್ ಮೋಹ, ಮರ್ಯಲದ ಗೊಬ್ಬುಲು, ಚಾತುರ್ಮಾಸ್ಯ ವ್ರತ, ಬರ್ಸ ಬನ್ನಗ ನಾಲಾಯಿ ಕೇನುಂಡು ತೇವುದು ಚಟ್ನಿ, ಅಂತೋಣಿ ಮಾಸ್ಟ್ರೆನ ಸಾಂತಾಣಿ, ಆಟಿದ ಅಮಾಸೆ ಪಾಲೆದ ಮರ್ದ್, ಹೃದಯಾ ಮೃತ, ಗೌರಿ ಪರ್ಬೊಗು-ಪತ್ರೋಡೆ, ಹಲ್ಲೇ ನಿನ್ನ ನೋವು ಒಲ್ಲೆ, ಬಾಯಿಹುಣ್ಣು ತಿನ್ನಿ ಬಾಳೆಹಣ್ಣು, ಸಕಲ ರೋಗ ನಿವಾರಕ ನಾಮತ್ರಯ ಜಪಯಜ್ಞ, ರಾಸಾಯನಿಕ ಮುಕ್ತ ಕೇಶತೈಲ.

ವಾ ಪೊರ್ಲುಯಾ ಈ ತುಳುನಾಡ್ ಯಾ, ಮನೆಗೊಂದು ತುಳಸಿಗಿಡ, ನಿಂಬೆ ಸಿಪ್ಪೆ ಕಸವಲ್ಲ ರಸ, ಜೇನಿನ ಚಮತ್ಕಾರ, ಆಹಾ ಎಂಥಾ ಚಹಾ, ಆರ್ಥರೈಟಿಸ್ ಹೀಗೆ ಒಂದೇ ಎರಡೇ, ಹೇಗೆ “ಆಡು ಮುಟ್ಟದ ಸೊಪ್ಪಿಲ್ಲ~ ಭಾಸ್ಕರ್ ಭಟ್ಟರ ಕ್ಯಾಲೆಂಡರ್ ನಲಿ ಬರೆಯದ ವಿಷಯವಿಲ್ಲ“. ನಾ ಕಣ್ಣಾರೆ ಕಂಡಂತೆ ಇವರ ಈ ಕ್ಯಾಲೆಂಡರ್ ನಮ್ಮ ಪರಿಚಯ ಒಬ್ಬರಿಗೆ ಕ್ಯಾನ್ಸರ್ ನಿಂದ ಕಿಮೋ ಥೆರಪಿಯಾಗಿ ತಲೆಕೂದಲು ಸಂಪೂರ್ಣ ಉದುರಿಹೋಗಿತ್ತು ಆದರೆ ಅವರಿಗೆ ಈ ಕ್ಯಾಲೆಂಡರ್ ಕೊಟ್ಟಿದ್ದೆ ಅವರು ಅದರಲ್ಲಿ ಇದ್ದ ‘ರಾಸಾಯನಿಕ ಮುಕ್ತ ಕೇಶತೈಲ ಮತ್ತು ಕರಿಬೇವಿನ ಮಹತ್ವ’ ಎರಡೂ ಅಂಕಣ ಓದಿ ಎಣ್ಣೆ ತಯಾರಿಸಿ ಈಗ ಅವರ ತಲೆ ಕೂದಲು ಮೊದಲಿನಂತೆಯೇ ಬಂದು ಕ್ಯಾನ್ಸರ್ ಮುಕ್ತರೂ ಆಗಿದ್ದಾರೆ, ಈಗ ನಾವು ಭದ್ರಮುಷ್ಠಿ, ನೆಲನೆಲ್ಲಿ, ಅಮೃತ ಬಳ್ಳಿ ಅಂತ ಹುಡುಕ್ತಾ ಇದ್ರೆ ಇವರ ಕ್ಯಾಲೆಂಡರ್ ಲಿ ಅದರ ಮಹತ್ವ 2017 ರಲ್ಲಿ ಮುದ್ರಿತವಾಗಿದೆ.

ಬರೆಯುತ್ತಾ ಹೋದರೆ ಇನ್ನೂ ಇದೆ. ಸ್ನೇಹಿತರೇ ಇದೊಂದು ಕ್ಯಾಲೆಂಡರ್ ಅಲ್ಲವೇ ಅಲ್ಲ ಮತ್ತೊಮ್ಮೆ ಹೇಳೋ ದಾದರೆ ಇದೊಂದು ಜೀವನದ ದಾರಿ ತೋರಿಸೋ ಮಾರ್ಗಸೂಚಿ, ಪ್ರತೀ ವರ್ಷ ನನಗೆ ನಮ್ಮ ಕಾಲೇಜಿಗೆ ಬಂದು ವಿಶೇಷವಾಗಿ ಭಾಸ್ಕರ ಭಟ್ಟರು ತಂದು ಕೊಡ್ತಾ ಇದ್ರು, ಆದರೆ ಈಗ ನಮ್ಮೊಂದಿಗಿಲ್ಲ, ಮುಂದೆಯೂ ಅವರ ನೆನಪಿ ನಲ್ಲಿ, ಅವರ ಆದರ್ಶಗಳನ್ನು ಮಾದರಿಯಾಗಿ ಇದೇ ತರದ ಕ್ಯಾಲೆಂಡರ್ ಗಳು ಮೂಡಿ ಬರಲಿ, 2020 ರ ಕ್ಯಾಲೆಂಡರ್ ಡಿಸೆಂಬರ್ ತಿಂಗಳಲ್ಲಿ ಶ್ರೀಕೃಷ್ಣನ ಸನ್ನಿಧಾನದಲ್ಲಿ ಪಲಿಮಾರು ಸ್ವಾಮಿಗಳಿಂದ ಅನಾವರಣ ಮಾಡಿಸಿ ಮಾರನೇ ದಿನವೇ ತತ್ ಕ್ಷಣದ ಹೃದಯಾಘಾತದಿಂದ ನಿಧನರಾದರು. ಜೈ ಶ್ರೀಶಂಕರಣರಾಯಣ

 

 
 
 
 
 
 
 
 
 
 
 

Leave a Reply