ಅಮ್ಮನಿಗೆ ಪ್ರಣಾಮ~ಭಾಗ್ಯಶ್ರೀ ಕಂಬಳಕಟ್ಟ

ಮಾತೆ ಕಣ್ಣಾರೆ ಕಾಣುವ ದೇವತೆ ಸ್ವರೂಪ
ತಾನುರಿದು ಬೆಳಕು ನೀಡುವ ನಂದಾದೀಪ
ಅನುಭವಿಸುವಳು ಮಹಾದುರಿತಗಳ ಕೂಪ
ಮನವ ನೋಯಿಸಿ ಗಳಿಸದಿರಿ ಮಹಾಪಾಪ

ತಾನೊಬ್ಬಳೇ ಎಲ್ಲಾ ನೋವನು ಸಹಿಸುತ
ಸರ್ವರೆದುರು ಮರೆಮಾಚಲು ನಗುನಗುತ
ಮನೆಯ ಒಳಗೂ ಹೊರಗೂ ದುಡಿಯುತ
ಬಯಸುವಳು ಸದಾಕಾಲ ಸಂಸಾರದ ಹಿತ

ಒಡಲಲಿ ಪ್ರೀತಿ ಕರುಣೆಗಳ ಸಮಾಗಮ
ವಾತ್ಸಲ್ಯಮಯಿಯಾದ ಮಾತೆ ಅನುಪಮ
ಪಾವನ ತಾಯಿಯಿಂದ ದೊರೆತ ಜನುಮ
ಜನನಿಗೆ ಈ ಜಗದಲಿ ಯಾರು ಸರಿಸಮ?

ಪಡೆದಿದೆ ಈ ಜೀವ ಅವಳಿಂದಲೇ ಜನನ
ಹೆತ್ತಬ್ಬೆಗೆ ಮುಡಿಪಾಗಿಡುವೆ ನನ್ನೀ ಜೀವನ
ತಾಯಂದಿರಿಗೆ ಸಲ್ಲಿಸುವೆ ಕೋಟಿ ನಮನ
ಮಮತಾಮಯಿಗೆ ಅರ್ಪಿಸುವೆ ಈ ಕವನ.

 

 
 
 
 
 
 
 
 
 
 
 

Leave a Reply