ಆಧುನಿಕ ಭಾರತದ ಸೂತ್ರಕಾರರು ಭಾಷ್ಯಕಾರರು ವ್ಯಾಖ್ಯಾನಕಾರರು ಟೀಕಾಕಾರರು ಟಿಪ್ಪಣಿಕಾರರು ಅನುವಾದಕರು ಡಾ .ಬನ್ನಂಜೆ ಮಾತ್ರ- ವಿ| ವಿಜಯಸಿಂಹ ತೋಂಟತಿಲ್ಲಾಯ

ಪ್ರಾಚೀನ ಭಾರತ ಸಂಸ್ಕೃತ ಭಾಷೆಯಲ್ಲಿ ಅನೇಕ ಸೂತ್ರಕಾರರು , ವ್ಯಾಖ್ಯಾನಕಾರರು, ಭಾಷ್ಯಕಾರರು, ಟೀಕಾಕಾರರು ಟಿಪ್ಪಣಿಕಾರರು ಮತ್ತು ಅನುವಾದಕಾರರನ್ನು ಕಂಡಿದೆ . ಆದರೆ ಆಧುನಿಕ ದೇಶದಲ್ಲಿ ನಮ್ಮ ನಡುವಿದ್ದ ಅಂಥಹ  ಔನ್ನತ್ಯ ವನ್ನು ಸಾಧಿಸಿದ ಅಸದೃಶ ಧೀಮಂತರು ಓರ್ವರು ಮಾತ್ರ, ಅದು ಡಾ ಬನ್ನಜೆ ಗೋವಿಂದಾಚಾರ್ಯರು ಮಾತ್ರ. ಅಷ್ಟೇ ಅಲ್ಲದೇ ತಮ್ಮ ವಿಭಿನ್ನ ಚಿಂತನೆಗಳಿಂದಲೂ ಡಾ ಬನ್ನಂಜೆಯವರು ವಿದ್ವತ್ಪ್ರಪಂಚದಲ್ಲಿ ಅನನ್ಯರಾಗಿ ಕಾಣುತ್ತಾರೆ ಎಂದು ವಿದ್ವಾನ್ ವಿಜಯಸಿಂಹ ತೋಂಟತಿಲ್ಲಾಯರು ಅಭಿಪ್ರಾಯಪಟ್ಟರು.

ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ದ್ವಿತೀಯ ಪುಣ್ಯತಿಥಿಯ ಸಂದರ್ಭದಲ್ಲಿ ಈಶಾವಾಸ್ಯ ಪ್ರತಿಷ್ಠಾನ ಉಡುಪಿ ಇದರ ಆಶ್ರಯದಲ್ಲಿ ಆಚಾರ್ಯರ ಸ್ವ ಗೃಹ ಉಡುಪಿ ಅಂಬಲಪಾಡಿಯ ಈಶಾವಾಸ್ಯಂ ನಲ್ಲಿ ಹಮ್ಮಿಕೊಂಡ ದಿನಪೂರ್ತಿ ಕಾರ್ಯಕ್ರಮದಲ್ಲಿ ” ಟೀಕಾ ಮತ್ತು ವ್ಯಾಖ್ಯಾನ ಪ್ರಪಂಚಕ್ಕೆ ಬನ್ನಂಜೆಯವರ ಕೊಡುಗೆ ” ಎಂಬ ವಿಷಯ ದಲ್ಲಿ ವಿಜಯ ಸಿಂಹಾಚಾರ್ಯರು ಸಂಸ್ಕೃತದಲ್ಲಿ ವರ್ಚುವಲ್ ಉಪನ್ಯಾಸ ಮಂಡಿಸಿದರು .

ವಿ ರಾಮನಾಥ ಆಚಾರ್ಯ, ವಿ .ಕೃಷ್ಣರಾಜ ಕುತ್ಪಾಡಿ, ಆಚಾರ್ಯರ ಸುಪುತ್ರ ವಿನಯಭೂಷಣ ಆಚಾರ್ಯ, ಅಭಿರಾಮ ತಂತ್ರಿ, ವಿಘ್ನೇಶ್ ಮೊದಲಾದವರ ಸಂಯೋಜನೆಯಲ್ಲಿ ಕಾರ್ಯಕ್ರಮಗಳು ಸಂಯೋಜಿತವಾಗಿವೆ.

“ನಿರ್ಣಯ ಭಾವಚಂದ್ರಿಕಾಯಾಂ ಗೋವಿಂದ ಪಂಡಿತಾಚಾರ್ಯಾಣಾಂ ನವೋನ್ಮೇಷಾ “ಎಂಬ ವಿಷಯದ ಮೇಲೆ ಟೊರಂಟೊ ವಿವಿಯ ಧಾರ್ಮಿಕ ಅಧ್ಯಯನ ವಿಭಾಗದ ಸಂಶೋಧಕಿ ಅನುಷಾ ಸುಧೀಂದ್ರರಾವ್, ಮತ್ತು ” ಭಾಗವತದಲ್ಲಿ ಉಲ್ಪೇಖಗೊಂಡ ಘಟೀಪಾತ್ರ ” ಎಂಬ ವಿಷಯದಲ್ಲಿ ಬೆಂಗಳೂರಿನ ಎನ್ ಎ ಎಲ್ ನ ಪ್ರಧಾನ‌ ಸಂಶೋಧಕ ರಮೇಶ ವಾಸುದೇವ ರಾವ್ ಉಪನ್ಯಾಸ ಮಂಡಿಸಿದರು .

ವಿದ್ವಾನ್ ಗುರುರಾಜ ಮಾರ್ಪಳ್ಳಿಯವರು ಯಕ್ಷಸಂಗೀತ ಮುರಳಿ ವಾದನ – ಭಾವನಮನ (ಬನ್ನಂಜೆ ಹಾಡುಗಳ ಭಾವಲಹರಿ) ನಡೆಸಿಕೊಟ್ಡರು. ಡಾ ಬನ್ನಂಜೆಯವರ ನೂರಾರು ಅಭಿಮಾನಿಗಳು ಶಿಷ್ಯರು ಉಪಸ್ಥಿತರಿದ್ದರು.

Leave a Reply