ಅಪ್ಪನ ಪ್ರಿತಿ~ ಕೆ.ಪುಂಡಲೀಕ ನಾಯಕ್

ಅಪ್ಪ ಅನ್ನುವ ಪದದಲ್ಲಿ
ಅದೆಂತಹ ಗತ್ತು
ಅದೆಂತಹ ಗಾಂಭಿರ್ಯ
ಅಪ್ಪನದು ಬರಿಗೈ ಅದರೂ
ಆ ಪದಕ್ಕೆ ಸಾವಿರ ಆನೆಬಲ
ದರ್ಪ..ಕೋಪ…ಶಿಸ್ತು..ಅನುಮಾನ …ಇವಲ್ಲದರ ಸಮ್ಮಿಶ್ರಣ

ಅರ್ಥವಾಗದು ಅಪ್ಪನ ಪ್ರೀತಿ
ಅನುಸರಿಸಬೇಕು ಅವನ ನೀತಿ
ತೋರು ಬೆರಳು ಹಿಡಿದು
ಸಂತೆಯಲ್ಲಿ ಓಲೆ ಕೊಡೆ ಕೊಡಿಸಿದವನು
ಸಣ್ಣ ಸ್ಲೇಟು ಬಳಪ ಹಿಡಿದು
ರೊಬಿನ್ ಹುಡ್ ಬೈಸಿಕಲ್ ವರೆಗೆ ತನ್ನ ಶಕ್ತಿಯನುಸಾರ ಕೊಡಿಸಿದನು

ಅಪ್ಪನೆಂದರೆ ಪರಿಪೂರ್ಣತೆಯ
ಪ್ರತಿಬಿಂಬ
ನಂಬಿಕೆಯ ಬುನಾದಿ
ಆತ್ಮವಿಶ್ವಾಸಕ್ಕೆ ನಾಂದಿ
ಮುಗ್ಧತೆಯ ಸಾಕಾರ ಮೂರ್ತಿ
ಸಾತ್ವಿಕ ಸರಳ ಸಜ್ಜನ…

ಬದಲಾಗುತ್ತಿರುವ
ಕಾಲಮಾನದಲ್ಲೂ
ಅಪ್ಪನ ಪ್ರೀತಿ
ಚಿರ ನೂತನ
✍️ ಕೆ.ಪುಂಡಲೀಕ ನಾಯಕ್, ನಾಯ್ಕನಕಟ್ಟೆ, ಬೈಂದೂರು.

 
 
 
 
 
 
 
 
 
 
 

Leave a Reply