ಕರ್ನಾಟಕದ ಸಿಂಗಂ ಈಗ ‘ಸ್ಟೆಪ್ಪಿಂಗ್​ ಬಿಯಾಂಡ್​ ಖಾಕಿ’

ಬೆಂಗಳೂರು: ತನ್ನ ಕಾರ್ಯ ವೈಖರಿಯಿಂದ ಅಪರಾಧಿಗಳ ಭಯ ಹುಟ್ಟಿಸಿದ್ದ ಕರ್ನಾಟಕದ ಸಿಂಗಂ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಹೆಸರು ಕೇಳಿದರೆ ಇಂದಿಗೂ ಅದೇಷ್ಟೋ ಅಪರಾಧಿಗಳು ಹೆದರುತ್ತಾರೆ.

2019ರಲ್ಲಿ ಅಣ್ಣಾಮಲೈ ರವರು, ನನ್ನ ಪ್ರಕಾರ ಪೊಲೀಸ್ ಕೆಲಸ ದೇವರಿಗೆ ಬಹಳ ಹತ್ತಿರವಾದ ಹಾಗೂ ಅತೀ ಜವಾಬ್ದಾರಿಯ ಕೆಲಸ. ಈ ಕೆಲಸದಲ್ಲಿ ನಾನು ಸಾಕಷ್ಟು ಜನರ ಪ್ರೀತಿ ಗಳಿಸಿದ್ದೇನೆ. ಕುಟುಂಬದ ಜತೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣ ನೀಡಿ, ಕೆಲಸಕ್ಕೆ ರಾಜೀನಾಮೆ ನೀಡಿದರು . ನಂತರ ಬಿಜೆಪಿಯಿಂದ ಪ್ರಭಾವಿತರಾಗಿ ಪಕ್ಷಕ್ಕೆ ಸೇರ್ಪಡೆಯಾದರು.

ಇದೀಗ ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಕಂಡು- ಕೇಳಿದ ಅನುಭವದ ಎಳೆಯನ್ನು ‘ಸ್ಟೆಪ್ಪಿಂಗ್​ ಬಿಯಾಂಡ್​ ಖಾಕಿ’ ಎಂಬ ಪುಸ್ತಕದಲ್ಲಿ ಅಣ್ಣಾಮಲೈ ತೆರೆದಿಟ್ಟಾರೆ. ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣಸಹೇಗೆ ಮಾನವೀಯ ನೆಲೆಗಟ್ಟಿನಲ್ಲಿ ಅವರನ್ನು ತಂದುನಿಲ್ಲಿಸಿತು? ಕೆಲವೇ ವರ್ಷಗಳಲ್ಲಿ ತಾವು ಹೇಗೆ ‘ಕರ್ನಾಟಕದ ಸಿಂಗಂ’ ಆಗಿರುವುದು ಎಂಬ ಮಾಹಿತಿಗಳು ಈ ಪುಸ್ತಕದಲ್ಲಿ ಲಭ್ಯವಿದೆ ಎನ್ನಲಾಗಿದೆ.

ಇನ್ನು ತಾನು ನಾಚಿಕೆ ಸ್ವಭಾವದವನಾಗಿದ್ದರೂ, ಸರಳ ಹಳ್ಳಿಯ ಹುಡುಗ ಸಾರ್ವಜನಿಕ ಸೇವೆಗೆ ಅರ್ಪಿಸಿಕೊಂಡದ್ದು ಹೇಗೆ? ಕರ್ನಾಟಕದಲ್ಲಿನ ಒಂದು ದಶಕದ ವೃತ್ತಿ ಜೀವನದಲ್ಲಿ ಅವರು ಇಷ್ಟೆಲ್ಲಾ ಗೌರವ ಗಳಿಸಲು ಹೇಗೆ ಸಾಧ್ಯವಾದುದು ಹೇಗೆ? ಅವರ ವೃತ್ತಿ ಜೀವನದಲ್ಲಿ ಎದುರಾದ ಪ್ರಶ್ನೆಗಳು ಏನು ಎಂಬುದರ ಜತೆಗೆ, ರಾಜಕಾರಣಿಗಳು ಕೆಟ್ಟವರೇ? ಮತ್ತು ಉತ್ತಮ ನಡತೆಯುಳ್ಳ ಜನರು ರಾಜಕೀಯ ಪ್ರವೇಶ ಮಾಡಲು ಭಯ ಪಡುವುದು ಏಕೆ. ಹೀಗೆ ಅನೇಕ ಮಾಹಿತಿಗಳು ಈ ಪುಸ್ತಕದಲ್ಲಿ ಇರಲಿದೆ. ಈ ಪುಸ್ತಕ ಇದೇ ಜನವರಿಯಲ್ಲಿ 18ರಂದು ಬಿಡುಗಡೆಗೊಳ್ಳಲಿದೆ.

 
 
 
 
 
 
 
 
 
 
 

Leave a Reply