ಶ್ರೀ ವಿಶ್ವೇಶ ತೀರ್ಥರ ವಿಶ್ವ ದರ್ಶನ-  ಡಾ.ಮಧುಸೂದ ನಾಚಾರ್ಯರಿಂದ ಅನುಭವಾಮೃತ.


ವಸುಧೆಯೊಳು ಸುಧೆಯ ಸಾಧನೆಗೈದ ಪರಮ ಸಾಧಕರಿಗೊಂದು ನುಡಿನಮನ ಎಂಬ ವಿಶೇಷ ಕಾರ್ಯಕ್ರಮವನ್ನು ಪೇಜಾವರ ಯತಿಗಳಾದ ಶ್ರೀ ಶ್ರೀ ವಿಶ್ವ ಪ್ರಸನ್ನತೀರ್ಥರ ಅನುಗ್ರಹದಿಂದ ವಿಶ್ವಸಂತ ಶ್ರೀ ಶ್ರೀ ವಿಶ್ವೇಶತೀರ್ಥರ ಭೌಮ ವ್ಯಕ್ತಿತ್ವವನ್ನು ಪರಿಚಯಿಸಲು ಹಾಗು ಗುರುಗಳ ಜೊತೆಗಿನ ಒಡನಾಟದ ವಿಶೇಷ ಅನುಭವಗಳನ್ನು ಹಂಚಿಕೊಳ್ಳಲು ಈ ಬಾರಿ ವಿದ್ಯಾಪೀಠದ ವಿದ್ವಾಂಸರು ಉಡುಪಿಯ ಕುಂಜಿಬೆಟ್ಟುವಿನ ಉಪೇಂದ್ರ ಪೈ ಮೆಮೊರಿಯಲ್ ಕಾಲೇಜಿನ ಪ್ರಾಚಾರ್ಯರು ಹಾಗು ಸಂಸ್ಕೃತ ವಿದ್ವಾನ್ ಡಾ.ಮಧುಸೂದನ್ ಭಟ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ.

ಭಾನುವಾರ (13/09/2020) ಸಂಜೆ 7 ಗಂಟೆಗೆ ಸರಿಯಾಗಿ ಆನ್ಲೈನ್ ಮುಖೇನ ವಿಶ್ವೇಶವಾಣಿ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಇದರ ಫೇಸ್‌ಬುಕ್‌ ಪೇಜ್, ವಿಶ್ವೇಶವಾಣಿ ಯೂಟ್ಯೂಬ್ ಹಾಗು ಗೂಗಲ್ ಮೀಟ್ ನಲ್ಲಿ ಲೈವ್ ಅಂದರೆ ನೇರ ವೀಕ್ಷಿಸಲು ಅವಕಾಶ ನೀಡಲಾಗಿದೆ.

ಇದರ ಸದುಪಯೋಗ ಪಡಿಸಿಕೊಂಡು ಶ್ರೀಗಳ ಆಶೀರ್ವಾದವನ್ನು ಪಡೆಯಬೇಕೆಂದು ಕೋರಲಾಗಿದೆ.

Leave a Reply