Janardhan Kodavoor/ Team KaravaliXpress
26 C
Udupi
Sunday, March 7, 2021

ಕೊರೋನಾದೊಂದಿಗೆ ಬದುಕು ಮಿತವಾಗಿರಲಿ~ಕವಾ೯ಲು 

     

ಕೊರೋನಾದೊಂದಿಗೆ ಬದುಕು ಮಿತವಾಗಿರಲಿ

ಕೊರೊನಾ ಎಂಬ ಈ ಹೆಸರು ಕೇಳಿದರೆ ಈಡೀ ವಿಶ್ವವೇ ಗಾಬರಿಯಾಗುವ ಪರಿಸ್ಥಿತಿಯಿದೆ. ಸೋಂಕಿತರ ಪ್ರಮಾಣ ಹೆಚ್ಚಿದರೂ ಈವರೆಗೆ ಸರಿಯಾದ ಮದ್ದು ಬಂದಿಲ್ಲ.ಉದ್ಯಮಿಯಿಂದ ಕೂಲಿ ಕಾಮಿ೯ಕರಿಗೆ ಅದೇ ರೀತಿ ಶ್ರೀಮಂತರಿಂದ ಬಡವವರಿಗೂ ಯಾರನ್ನು ಬಿಟ್ಟಿಲ್ಲ ಹೀಗಾಗಿ ಈಗ ಎಲ್ಲರೂ ಸಮಾನ ದುಃಖಿಗಳಾಗುವ ಪರಿಸ್ಥಿತಿ ಎದುರಾಗಿದೆ. ಸಕಾ೯ರಗಳು ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡರೂ ನಾವೆಲ್ಲರೂ ಜೀವ ಮತ್ತು ಜೀವನದ ಈ ಹೋರಾಟದಲ್ಲಿ ಗೆದ್ದು ಬರಬೇಕಾಗಿದೆ ಹೀಗಾಗಿ ಇನ್ನು ಮುಂದೆ ನಾವು ಸಿಂಪಲ್ಲಾಗಿ ಜೀವನದ ಚಕ್ರವನ್ನು ಓಡಿಸಬೇಕಾಗಿದೆ.
 *ದುಂದು ವೆಚ್ಚ ಬೇಡ:* – ಮದುವೆ ಸಮಾರಂಭ’ ಪಾಟಿ೯ ಚಿನ್ನಾಭರಣ ಅಗತ್ಯಕ್ಕಿಂತ ಹೆಚ್ಚು ಹೆಚ್ಚು ಖಚು೯ ಮಾಡದೆ ಜೀವನ ಸಾಗಲಿ ಗೆಳೆಯರೇ,
 ಸರಳವಾದ ಕಾಯ೯ಕ್ರಮ ಮಾಡೋಣ: -ಹಬ್ಬ ಹರಿದಿನಗಳು’ಶುಭ ಸಮಾರಂಭ’ ಭೂರಿ ಬೋಜನ, ಅಲಂಕಾರ ಮುಂತಾದ ಕಾಯ೯ಗಳನ್ನು ಸರಳವಾಗಿ ಮಾಡೋಣ.     ಧಾಮಿ೯ಕ ಕಾಯ೯ಕ್ರಮ:- ಪೂಜೆ, ಪುನಸ್ಕಾರ ಜಾತ್ರೆ ಮುಂತಾದ ಧಾಮಿ೯ಕ ಕಾಯ೯ಗಳನ್ನು ಸರಳವಾಗಿ ಮಾಡಲು ಸಾಧ್ಯ.ಹೀಗಾಗಿ ಖಚು೯ ಕಡಿಮೆ ಇರಲಿ ಭಕ್ತಿ ಹೆಚ್ಚಿರಲಿ.
ಸಕಾ೯ರಿ ಶಾಲೆಗಳತ್ತ ಗಮನ ನೀಡೋಣ : – ಇಂದು ನಮ್ಮ ಪ್ರತಿಷ್ಟೆಯ ಪಣದಿಂದ ನಾವು ಹೆಚ್ಚಿನವರು ಲಕ್ಷಾ೦ತರ ರೂಪಾಯಿ ಶುಲ್ಕ ನೀಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಾತಿ ಮಾಡುತ್ತೇವೆ .ಯಾಕೆ ನಾವು ನಮ್ಮ ಮಕ್ಕಳನ್ನು ಸಕಾ೯ರಿ ಶಾಲೆಗಳಿಗೆ ಸೇರಿಸಬಾರದು ಯೋಚನೆ ಮಾಡೋಣ ಅತೀ ಕಡಿಮೆ ಶುಲ್ಕದಲ್ಲಿ ಶಿಕ್ಷಣ ಪಡೆಯಲು ಸಾಧ್ಯ.
ಸ್ವದೇಶಿ ವಸ್ತುಗಳಿಗೆ ಆದ್ಯತೆ ನಿಡೋಣ: -ಪ್ರಧಾನಿಯವರು ಕರೆ ನೀಡಿದಂತೆ ಮೊಕಲ್ ಫಾರ್ ಲೋಕಲ್ ಎಂಬಂತೆ ವಿದೇಶಿ ವಸ್ತುಗಳ ಬಳಕೆ ಕಡಿಮೆ ಮಾಡೋಣ .ನಮ್ಮ ದೇಶದಲ್ಲಿ ಅದರಲ್ಲಿಯೂ ನಮ್ಮ ಹಳ್ಳಿಯಲ್ಲಿ ತಯಾರಾಗುವ ವಸ್ತುಗಳನ್ನು ಖರೀದಿ ಮಾಡಿ ಅದಕ್ಕೆ ಪ್ರೋತ್ಸಾಹ ನೀಡೋಣ ಇದರಿಂದ ದೇಶದಲ್ಲಿ ನಮ್ಮ ಖರೀದಿಯಿಂದ ಹೊಸ ಉದ್ಯೋಗ ಸೃಷ್ಠಿಯಾಗಲು ದಾರಿಯಾಗುತ್ತದೆ. ಯಾಕೆ ನಾವೆಲ್ಲರೂ ಈ ನಿಟ್ಟಿನಲ್ಲಿ ಮುನ್ನುಡಿ ಬರೆಯಬಾರದು?
ತಿಂಗಳ ಖಚು೯ ಕಡಿಮೆ ಮಾಡಿ: ಹೆಚ್ಚಿನವರಿಗೆ ನಿತ್ಯ ಪೇಟೆಗೆ ಹೋಗಿ ಏನಾದರೂ ವಸ್ತುವನ್ನು ಅಗತ್ಯವಿಲ್ಲದಿದ್ದರೂ ಖರೀದಿ ಮಾಡುವುದು ರೂಡಿಯಾಗಿದೆ ಇದರಿಂದ ನಮ್ಮ ಆಧಾಯದ ದೊಡ್ಡ ಪಾಲು ನಷ್ಟವಾಗುತ್ತದೆ. ಹೀಗಾಗಿ ಖಚು೯ ಬದಲು ಉಳಿತಾಯ ಮಾಡೋಣ.
ಮಿತವಾಗಿ ಬಳಸಿ: – ನೀರು, ವಿದ್ಯುತ್, ಇಂಧನ ಮುಂತಾದ ನೈಸಗಿ೯ಕ ಸಂಪನ್ಮೂಲಗಳ ಬಳಕೆ ಕಡಿಮ ಇರಲಿ .ಕಾರಿನ ಬದಲು ಬೈಕ್ ಇರಲಿ ಯಾಕೆಂದರೆ ನಾವು ಇದರಿಂದಾಗಿ ಬಹಳಷ್ಟು ಇಂಧನ ಉಳಿಸಬಹುದಾಗಿದೆ. ಕಚೇರಿಗಳಿಗೆ ಖಾಸಗಿ ಕೆಲಸಕ್ಕೆ ನಿತ್ಯ ಸ್ವಂತ ವಾಹನದಲ್ಲಿ ಓಡಾಡುದಕ್ಕೆ ದಿನಕ್ಕೆ 400 – 500 ರೂ.ಖಚು೯ ಮಾಡುವರಿದ್ದಾರೆ ಹೀಗಾಗಿ ಇದನ್ನ ಉಳಿಸಲು ಸಕಾ೯ರಿ ಸಾರಿಗೆ ಬಳಕೆ ಮಾಡೋಣ ಇದರಿಂದಾಗಿ ಇಂಧನಕ್ಕಾಗಿ ಖಚು೯ ಮಾಡುವ ಮೊತ್ತವನ್ನು ಉಳಿಸಬಹುದಾಗಿದೆ.
 ಮನೆಯಲ್ಲಿ ತಿಂಡಿ ತಿನಸು ತಯಾರಿಸೋಣ :- ಪ್ರತಿಯೊಂದಕ್ಕೆ ಹೊಟೇಲ್ ಗೆ ಕಾಯುವ ಸ್ಥಿತಿ ನಮಗೆ ಬೇಡ ನಮಗೆ ಬೇಕಾದ ಅಡುಗೆಯನ್ನು ನಾವು ತಯಾರಿಸಿದರೆ ಉತ್ತಮ ಆರೋಗ್ಯ ಅಲ್ಲದೆ ಹಣವನ್ನು ಉಳಿಸ ಬಹುದಾಗಿದೆ.
 ಮನೆಗೆ ಬೇಕಾದ ತರಕಾರಿ ನಾವು ಬೆಳೆಸೋಣ . – ಪ್ರತಿಯೊಂದು ತರಕಾರಿಗೆ ಮತ್ತೊಬ್ಬರನ್ನು ಅವಲಂಬಿಸುದನ್ನು ಬಿಟ್ಟು ನಮ್ಮ ಮನೆಗೆ ಬೇಕಾದ ತರಕಾರಿ ಯಾಕೆ ನಾವು ಬೆಳೆಸಬಾರದು. ಪ್ಲಾಟ್ ನಲ್ಲಿ ವಾಸ ಮಾಡುವವರು ಗೋಣಿ ಚೀಲದಲ್ಲಿ ತರಕಾರಿ ಮಾಡಬಹುದು. ಕಿಚನ್ ಗಾಡ೯ನ ಮಾಡುದರಿಂದ ಮಾನಸಿಕ ನೆಮ್ಮದಿ, ವ್ಯಾಯಾಮ ಅದೇ ರೀತಿ ತರಕಾರಿಗೆ ತಿಂಗಳಲ್ಲಿ ಖಚು೯ ಮಾಡುವ ಸಾವಿರಾರು ರೂ. ಉಳಿತಾಯ ಮಾಡಬಹುದು. ಹೈನುಗಾರಿಕೆ, ಮಲ್ಲಿಗೆ ಬೇಸಾಯ ಮಾಡಿದರೆ ಮನೆಯ ಖಚು೯ ಇದರಿಂದ ಗಳಿಸಬಹುದು.
ದುಶ್ಚಟದಿ೦ದ ದೂರ ಸಾಗೋಣ: – ಮಧ್ಯಪಾನ, ಬೀಡಿ ಸಿಗರೇಟ್ ಇತ್ಯಾದಿ ಚಟದಿಂದ ವಿಮುಕ್ತಿಯಾಗಬೇಕು. ಇತ್ತಿಚೆಗೆ ಡೌನ್ ಸಮಯದಲ್ಲಿ ಮಧ್ಯ ಬಂದ್ ಆಗಿತ್ತು ನಂತರ ದ ದಿನದಲ್ಲಿ ಓಪನ್ ಆದಾಗ ಜನರು ಚೀಲ ಹಿಡಿದು ನೂರಾರು ಮೀಟರ್ ಸರದಿ ಸಾಲಲ್ಲಿ ಕಾದು ಮಧ್ಯ ಪಡೆದ ಉದಾ : ನಮ್ಮ ಮುಂದೆ ಇದೆ ಹೀಗಾಗಿ ಈ ಚಟ ಕೆ ಹಾಕುವ ಹಣವನ್ನು ಆರೋಗ್ಯಕ್ಕೆ ಬಳಕೆ ಮಾಡೋಣ.
 ತಿಂಗಳ ಬಜೆಟ್ ಮಾಡಿ ಅ ದರಂತೆ ಜೀವನ ಸಾಗಿಸೋಣ:-  ಯಾವ ರೀತಿ ಕಂಪೆನಿಗಳು ಸಕಾ೯ರ ಬಜೆಟ್ ಮಾಡುತ್ತಾವೆ ಯೋ ಅದೇ ರೀತಿ ನಾವು ತಿಂಗಳ ಆಧಾಯ ಮತ್ತು ಖಚು ೯ ಪಟ್ಟಿ ತಯಾರಿಸಿ ಅದರಂತೆ ಕಾಯ೯ ನಿವ೯ಹಿಸೋಣ. ಈ ರೀತಿ ಮಾಡಿದಾಗ ಅನಾವಶ್ಯಕ ಖಚು೯ಗಳಿಗೆ ಬ್ರೇಕ್ ಹಾಕಬಹುದು. ಅಲ್ಲದೆ ಉಳಿತಾಯವನ್ನು ಮೊದಲು ಮಾಡಿ ನಂತರ ಖಚಿ೯ನ ಬಾಪ್ತಿಗೆ ಹಣ ಹೊಂದಾಣಿಕೆ ಮಾಡಬಹುದು. ಸುಂದರ ಜೀವನಕ್ಕೆ ಬಜೆಟ್ ದಾರಿಯಾಗಲು ಸಾಧ್ಯ.
 ಸಕಾ೯ರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ:– ಸಕಾ೯ರ ದ ವಿವಿಧ ಯೋಜನೆಗಳು ಕೇವಲ ಕಾಗದ ಪತ್ರಗಳಿಗೆ ಸೀಮಿತವಾಗಿದೆ ಇದರ ಪ್ರಯೋಜನ ನಾವು ಕಾನೂನು ನಿಯಮಗಳಿಗೆ ಒಳಪಟ್ಟು ಪಡೆಯಬೇಕು. ಉದಾ..ಆಯುಷ್ಮಾನ್ ಭಾರತ, ಉಜ್ವಲ ,ಪಡಿತರ ಯೋಜನೆಗಳ ಲಾಭ ಪಡೆಯಬೇಕು. ಬ್ಯಾಂಕ್ ಖಾತೆಯನ್ನು ಹೊಂದುವ ಮೂಲಕ ಈ ಯೋಜನೆಯನ್ನು ಪಡೆಯಬಹುದು. ಪಡಿತರದ ದುರುಪಯೋಗ ಮಾಡದೆ ಇದನ್ನು ಸದ್ಬಳಕೆ ಮಾಡಬೇಕು.
 ಉಳಿತಾಯಕ್ಕೆ ಇರುವ ದಾರಿಯನ್ನು ಹುಡುಕಿ :- ಈ ಕೊರೋನಾ ನಮಗೆ ಉಳಿತಾಯದ ಮಹತ್ವ ತಿಳಿಸಿದೆ. ನಮ್ಮ ಉಳಿತಾಯವನ್ನು ಸುರಕ್ಷಿತ ಯೋಜನೆಯಲ್ಲಿ ತೊಡಗಿಸಬೇಕು. ಉದಾ.. ಜೀವವಿಮೆ, ಅಂಚೆ ಕಚೇರಿ, ಬ್ಯಾಂಕ್ ಮುಂತಾದ ಸಂಸ್ಥೆಯಲ್ಲಿ ಲಭ್ಯವಿರುವ ಉಳಿತಾಯ ಯೋಜನೆಯಲ್ಲಿ ಹಣ ತೊಡಗಿಸಬೇಕು ಇದರಿಂದ ನಮ್ಮ ಹಣಕ್ಕೆ ಸರಿಯಾದ ಮೌಲ್ಯ ಸಿಗಲು ಸಾಧ್ಯ.ಬಡ್ಡಿಯ ಆಸೆಗೆ ಬೇರೆ ಅಸುರಕ್ಷಿತ ಮೂಲದಲ್ಲಿ ಉಳಿತಾಯ ಹೊಡಿಕೆ ಮಾಡಿದರೆ ನಮ್ಮ ಹಣ ಮತ್ತೊಬ್ಬರ ಪಾಲಾಗಬಹುದು.
ಸ್ವಉದ್ಯೋಗಕ್ಕೆ ಗಮನ ನೀಡಿದರೆ ನಾವು ಹಲವಾರು ಜನರಿಗೆ ಉದ್ಯೋಗ ನೀಡಬಹುದು. ಉದಾ. ಹೈನುಗಾರಿಕೆ, ಕೃಷಿ ಸಂಬಂಧಿಸಿದ ಕೈಗಾರಿಕೆಗಳು ಕೃಷಿಯನ್ನು ಸಕಾ೯ರದಿಂದ ಲಭಿಸುವ ಬಾಡಿಗೆ ಆಧಾರಿತ ಯಂತ್ರ ಗಳ ಮೂಲಕ ಆಧುನಿಕ ಮಾದರಿಯಲ್ಲಿ ಮಿಶ್ರ ಬೆಳೆ ಕೃಷಿ ಮಾಡಿದರೆ ಉತ್ತಮ ಲಾಭ ಗಳಿಸಲು ಸಾಧ್ಯ. ಅಲ್ಲದೆ ನಾವು ಬೆಳೆದ ವಸ್ತುಗಳನ್ನು ನಾವೇ ಮಾರಾಟ ಮಾಡಿದಾಗ ಉತ್ತಮ ಬೆಲೆ ಸಿಗಲು ಸಾಧ್ಯ.ಈಗಾಗಲೇ ಎ.ಪಿ.ಎಂಸಿಯಲ್ಲಿ ಯಾರು ಬೇಕಾದರೂ ತಮ್ಮ ಕೃಷಿ ವಸ್ತುವನ್ನು ಮಾರಾಟ ಮಾಡಲು ಸಕಾ೯ರ ಅವಕಾಶ ನೀಡಿದೆ.
ಅದೇ ರೀತಿ ಸಾಮಾಜಿಕ ಜಾಲ ತಾಣಗಳ ಬಳಕೆ ಮಾಡಿಯೂ ವಿವಿಧ ರೀತಿಯ ವಸ್ತುಗಳನ್ನಾ ಮಾರಾಟ ಮಾಡುವ ವ್ಯವಹಾರ ಮಾಡಬಹುದು.ಡೋರ್ ಡೆಲಿವರಿ ವ್ಯವಹಾರ, ಹೊಸ ತನದ ವ್ಯವಹಾರವು ಮುಂದೆ ಹೊಸ ಬದುಕು ಸಾಗಿಸಲು ಪ್ರೇರಣೆ ಒದಗಿಸಲು ಸಾಧ್ಯವಾಗಬಹುದು.
    ಈ ಕೊರೋನಾ ನಮಗೆ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಅವಕಾಶ ನೀಡಿದೆ.ಕವಿ ವಾಣಿಯoತೆ ನಡೆ ಮುoದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ” ಎಂಬಂತೆ ಜೀವನಕ್ಕಾಗಿ ಹೋರಾಟ ನಡೆಸಿ ಕರೋನಾದೊಂದಿಗೆ ಸಾಗೋಣ

.

ರಾಘವೇಂದ್ರ ಪ್ರಭು,ಕವಾ೯ಲು 
ಯುವ ಲೇಖಕ
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕೊಡವೂರು ಗರಡಿಮಜಲಿ ನಲ್ಲಿ ಐಸಿರಿ ಸೂಪರ್ ಸ್ಟೋರ್ ಶುಭಾರಂಭ

ಕೊಡವೂರು ಗರಡಿ ಮಜಲಿನ ಆಸುಪಾಸಿನ ಜನತೆಗೆ ಶುಭ ಸುದ್ಧಿ. ದಿನ ಬಳಕೆಯ ಗ್ರಹೋಪಯೋಗಿ  ವಸ್ತುಗಳ ಪರಿಶುದ್ಧ ಹಾಗು ಪರಿಪೂರ್ಣ ಭಂಡಾರ " ಐ ಸಿರಿ ಸೂಪರ್ ಸ್ಟೋರ್" ಇದೀಗ ನಿಮ್ಮೂರಿನಲ್ಲಿ.. ಸ್ನೇಹಮಯಿ ಸೇವೆಯೊಂದಿಗೆ, ಆಕರ್ಷಕ ದರದೊಂದಿಗೆ,...

ಡಾ| ಮೋಹನ್ ಆಳ್ವ ಮಡಿಲಿಗೆ  ‘ವಿಶ್ವ ಪ್ರಭಾ’ ಪುರಸ್ಕಾರ

ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಂದ ಉದ್ಘಾಟನೆಗೊಂಡ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ ಸಾಹಿತ್ಯ, ಸಂಗೀತ, ಚಿತ್ರಕಲೆ, ಸಾಕ್ಷಾಚಿತ್ರ , ನಾಟಕ, ನೃತ್ಯ, ಲಲಿತ ಕಲೆಗಳು ಹೀಗೆ ಯುವಪೀಳಿಗೆಯ ಹೃದಯದಲ್ಲಿ ಸೌಂದರ್ಯ ಪ್ರಜ್ಞೆ...

ಬನ್ನಂಜೆ ಶ್ರೀ ಶನಿಕ್ಷೇತ್ರದಲ್ಲಿ ವಾರ್ಷಿಕ ಶನೈಶ್ವರ ಉತ್ಸವ ಸಂಪನ್ನ

ಉಡುಪಿ ​: ​ ಬನ್ನಂಜೆ ಗರಡಿ ರಸ್ತೆ  ಶ್ರೀ ಶನಿಕ್ಷೇತ್ರ ಬನ್ನಂಜೆ ಮಠದ ಕರ್ನಾಟಕದ ಅತೀ ದೊಡ್ಡ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ಮೂರ್ತಿ ಸನ್ನಿಧಾನದಲ್ಲಿ  ವಾರ್ಷಿಕ ಶನೈಶ್ವರ ಉತ್ಸವವು...

  ನವೀನ್ ಕೆ.ಶೆಟ್ಟಿಬೆಟ್ಟು​ರವರ “ಅನಾವರಣ​”​ ​ಕೃತಿ ಲೋಕಾರ್ಪಣೆ 

ಉಡುಪಿ :- ಇತ್ತೀಚೆಗಿನ ದಿನಗಳಲ್ಲಿ ಬರೆಯುವ ಮನೋಭಾವನೆ ಕಡಿಮೆಯಾಗುತ್ತಿದೆ ಇದು ಸರಿಯಲ್ಲ ಬರೆಯುವಿಕೆ ಮತ್ತು ಓದುವಿಕೆಯು ಮನುಷ್ಯನನ್ನು ಒತ್ತಡಗಳಿಂದ ದೂರ ಮಾಡಬಲ್ಲದು ಎಂದು ಬಡಗಬೆಟ್ಟು ಕ್ರೆ.ಕೋ. ಸೋಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ...

ಒಡಿಯೂರು ಶ್ರೀ ಗುರುದೇವದತ್ತಾ ಸಂಸ್ಥಾನದ  ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಷಷ್ಟ್ಯಬ್ಧ ಸಂಭ್ರಮದ ಆಚರಣೆ

ಉಡುಪಿ: ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತಾ ಸಂಸ್ಥಾನಮ್, ಶ್ರೀಗಳ ಷಷ್ಟ್ಯಬ್ಧ ಸಂಭ್ರಮದ ಆಚರಣೆಯ ಪ್ರಯುಕ್ತ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಉಡುಪಿಯಲ್ಲಿ ಕೂಡಾ ಷಷ್ಟ್ಯಬ್ಧ ಸಮಿತಿ ರಚಿಸಲಾಗಿದೆ.  ಉಡುಪಿ...
error: Content is protected !!