Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಇಂದು ವಿಶ್ವ ಎಡಚರ ದಿನಾಚರಣೆ

ವರ್ಷದಲ್ಲಿ ಬಹುತೇಕ  ದಿನಗಳು ಒಂದಲ್ಲ ಒಂದು ರೀತಿಯಲ್ಲಿ ವಿಶೇಷ ದಿನಗಳಾಗಿವೆ. ಇಂದು (ಆಗಸ್ಟ್ 13) ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಎಡಚರ (ಎಡಗೈಯವರು)ದಿನ ಅಥವಾ International Left Handers’ Day.

ಪ್ರತಿಯೊಂದು ಕೆಲಸಕ್ಕೂ ಬಲಗೈ ಬಳಕೆಗೆ ಆದ್ಯತೆ ನೀಡುವವರ ನಡುವೆ ಎಡಗೈಗೆ ಪ್ರಾಧಾನ್ಯತೆ ನೀಡುವವರೂ ಅನೇಕರಿದ್ದಾರೆ.

ಎಡಗೈ ಬಳಸುವವರ ಅನುಕೂಲ, ಅನನುಕೂಲತೆ ಬಗ್ಗೆ ಅರಿವು ಮೂಡಿಸಲು 1976ರಲ್ಲಿ ಡೀನ್ ಆರ್‌ ಕ್ಯಾಂಪ್ ಬೆಲ್ ಎಂಬವರು ಅಂತಾರಾಷ್ಟ್ರೀಯ ಎಡಗೈ ಬಳಸುವವರ ದಿನ ಆರಂಭಿಸಿದರು.

ಪ್ರಪಂಚದಲ್ಲಿ ಸುಮಾರು 10 ಪ್ರತಿಶತ ಜನರು ತಮ್ಮ‌ ಹೆಚ್ಚಿನ‌ ಕೆಲಸ ಕಾರ್ಯಗಳಿಗಾಗಿ ಎಡಗೈ ಬಳಸುವವರಾಗಿದ್ದಾರೆ.  ಅವರಲ್ಲಿ ಅನೇಕರು ಸೃಜನಶೀಲರು, ಕ್ರಿಯಾಶೀಲರು,  ಪ್ರತಿಭಾ ಸಂಪನ್ನರು,  ಶ್ರೀಮಂತರು ಹಾಗೂ ಕ್ರೀಡಾ ಪಟುಗಳಾಗಿ ಖ್ಯಾತರಾದವರೂ ಇದ್ದಾರೆ.

ವಿಶ್ವದ ಪ್ರಮುಖ ವಿಜ್ಞಾನಿಗಳಾದ ಆಲ್ಬರ್ಟ್ ಐನ್ ಸ್ಟೀನ್, ಐಸಾಕ್ ನ್ಯೂಟನ್, ಮೇರಿ ಕ್ಯೂರಿ,  ಸಮಾಜದ ವಿವಿಧ ಕ್ಷೇತ್ರಗಳ ಖ್ಯಾತರಾದ ಚಾರ್ಲಿ ಚಾಪ್ಲಿನ್, ರಾಣಿ ವಿಕ್ಟೋರಿಯಾ, ಬರಾಕ್ ಒಬಾಮ, ನೆಲ್ಸನ್ ಮಂಡೇಲಾ…. ಹೀಗೆ ಎಡಗೈ ಬಳಸುವ ಹಲವು ಖ್ಯಾತನಾಮರಿದ್ದಾರೆ.

ಮಾತ್ರವಲ್ಲದೆ ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮದರ್ ತೆರೆಸಾ, ರಜನೀಕಾಂತ್, ರತನ್ ಟಾಟಾ, ಸಚಿನ್ ತೆಂಡೂಲ್ಕರ್, ರವಿ ಶಾಸ್ತ್ರಿ, ಅಮಿತಾಭ್ ಬಚ್ಚನ್, ಹರಿಪ್ರಸಾದ್ ಚೌರಾಸಿಯಾ ಮೊದಲಾದವರೂ ಎಡಚರರೇ ಆಗಿದ್ದಾರೆ.

ಎಡಗೈ ಬಳಸುವ ಪುರುಷರ ಸಂಖ್ಯೆ ಮಹಿಳೆಯರ ಸಂಖ್ಯೆಗಿಂತ ಜಾಸ್ತಿ ಇದೆ.

ಈ ವರ್ಷ ವಿಶ್ವ ಎಡಚರ  44ನೇ ದಿನವನ್ನಾಗಿ  ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!