ವಿಶ್ವ ಸುಂದರಿ – 2021 ಕಿರೀಟಕ್ಕೆ ಮುತ್ತಿಕ್ಕಿದ ಭಾರತದ ಹರ್ನಾಜ್ ಸಂಧು

ವಿಶ್ವ ಸುಂದರಿ – 2021 ಕಿರೀಟವನ್ನು ಭಾರತದ ಹರ್ನಾಜ್ ಸಂಧು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2000 ರಲ್ಲಿ ಲಾರಾ ದತ್ತಾ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ 21 ವರ್ಷಗಳ ನಂತರ ಮತ್ತೊಮ್ಮೆ ಈ ಕಿರೀಟವನ್ನು ಈಕೆ ಭಾರತಕ್ಕೆ ತಂದುಕೊಟ್ಟಿದ್ದಾರೆ. ಜಾಗತಿಕವಾಗಿ ಲೈವ್-ಸ್ಟ್ರೀಮ್ ಈವೆಂಟ್‌ನಲ್ಲಿ ಮೆಕ್ಸಿಕೊದ ಮಾಜಿ ವಿಶ್ವ ಸುಂದರಿ 2020 ರ ಆಂಡ್ರಿಯಾ ಮೆಜಾ ಅವರು ಸಂಧು ಅವರಿಗೆ ಕಿರೀಟವನ್ನು ನೀಡಿದರು.

ವೃತ್ತಿಯಲ್ಲಿ ಮಾಡೆಲ್ ಆಗಿರುವಂತಹ ಹರ್ನಾಜ್ ಮೂಲತಃ ಪಂಜಾಬ್‌ನ ಚಂಡೀಗಢದವರು. ತಮ್ಮ ಆರಂಭಿಕ ಶಿಕ್ಷಣವನ್ನು ಚಂಡೀಗಢದ ಶಿವಾಲಿಕ್ ಪಬ್ಲಿಕ್ ಸ್ಕೂಲ್‌ನಲ್ಲಿ ಈಕೆ ಮಾಡಿದ್ದು ಬಳಿಕ ಚಂಡೀಗಢದಲ್ಲಿಯೇ ಪದವಿಯನ್ನು ಪಡೆದ ನಂತರ, ಹರ್ನಾಜ್ ಪ್ರಸ್ತುತ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.

ಚಂಡೀಗಢದ ಮಾಡೆಲ್ ಹರ್ನಾಜ್ ಸಂಧು ತಮ್ಮ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ 2017ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ, 2018ರಲ್ಲಿ ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್, 2019 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪಂಜಾಬ್ ಮತ್ತು 2021ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಪ್ರಶಸ್ತಿಗಳೂ ಕೂಡಾ ಸೇರಿವೆ.

 

 

 
 
 
 
 
 
 
 
 
 
 

Leave a Reply