ಕಾಲೇಜು ವಾರ್ಷಿಕಾಂಕ ಸ್ಪರ್ಧೆ – ಯು.ಪಿ.ಎಂ.ಸಿ ಯ ‘ಸುಪ್ರಭಾ’ ದ್ವಿತೀಯ

ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ 2020-21 ರ ವಾರ್ಷಿಕಾಂಕ ಸ್ಪರ್ಧೆಯ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ಜೂನ್ 16 ರಂದು ವಿವಿ ಯ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಜರಗಿದ ಶೈಕ್ಷಣಿಕ ಮಂಡಳಿಯ ಮಹಾಸಭೆಯಲ್ಲಿ ನಡೆಯಿತು.
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ‘ಸುಪ್ರಭಾ’ ಸಂಚಿಕೆಯು ಪ್ರಸ್ತುತ ವರ್ಷ ದ್ವಿತೀಯ ಬಹುಮಾನವನ್ನು ಗಳಿಸಿದ್ದು ನಿರಂತರ 13ನೇ ವರ್ಷದ ಪ್ರಶಸ್ತಿಯು ಇದಾಗಿರುತ್ತದೆ.
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್ ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯರವರು ಪ್ರಶಸ್ತಿಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ರವರಿಗೆ ಹಸ್ತಾಂತರಿಸಿದರು ವಿವಿಯ ಕುಲಸಚಿವರಾದ ಡಾ.ಕಿಶೋರ್ ಕುಮಾರ್, ಪರಿಕ್ಷಾಂಗ ಕುಲಸಚಿವ ಪ್ರೊಫೆಸರ್ ಪಿ.ಎಲ್.ಧರ್ಮ, ಹಣಕಾಸು ಸಚಿವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಚಿಕೆಯ ವಿದ್ಯಾರ್ಥಿ ಪ್ರತಿನಿಧಿಗಳಾದ ತೃತೀಯ ಬಿ.ಕಾಂ ನ ರಂಗಪ್ಪ ಪರಸಪ್ಪ ಕುರಿ, ತೃತೀಯ ಬಿಬಿಎ ನ ಸಚಿನ್, ಶರತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 
 
 
 
 
 
 

Leave a Reply