25 C
Udupi
Tuesday, October 20, 2020

ಪ್ರೊ.ಯು ಎಲ್ ಆಚಾರ್ಯರ ಜನ್ಮ ಶತಮಾನೋತ್ಸವಕ್ಕೆ ವಿಶೇಷ ಅಂಚೆ ಲಕೋಟೆ ಬಿಡುಗಡೆ.

ಒಬ್ಬ ವಿಶಿಷ್ಟ ವ್ಯಕ್ತಿಯನ್ನು ನೆನಪಿಸಿಕೊಳ್ಳುವ,​ ​ವಿಶೇಷ ಸಂದರ್ಭವನ್ನು ಚಿರಸ್ಮರಣೀಯಗೊಳಿಸುವ,​ ​ಒಂದು ಸ್ಥಳದ ವಿಶೇಷತೆಯ ವಿವರ ನೀಡಲು ಭಾರತೀಯ ಅಂಚೆ ಇಲಾಖೆ  ಗ್ರಾಹಕರಿಗೆ ​ನೀಡುವ  ಒಂದು ವಿನೂತನ ಕೊಡುಗೆ ವಿಶೇಷ ಅಂಚೆ ಲಕೋಟೆ ಎಂದು  ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಹರ್ಷ ಎನ್ ರವರು ಅಭಿಪ್ರಾಯಪಟ್ಟರು. 
ಅವರು  ಮಂಗಳೂರು ಅಂಚೆ ವಿಭಾಗ ಲೋಕಾರ್ಪಣೆ ಗೊಳಿಸಿದ  ಉಡುಪಿಯ​ ಉಡುಪಿ ಎಮ್ ಜಿ ಎಮ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ರಾಗಿ ಸೇವೆ ಸಲ್ಲಿಸಿದ್ದ​​​ ಪ್ರಾಧ್ಯಾಪಕ,  ದಾರ್ಶನಿಕ, ಚಿಂತಕ ಪ್ರೊ. ಉಡುಪಿ ಲಕ್ಷ್ಮೀನಾರಾಯಣ ಆಚಾರ್ಯ ರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಪಾಂಡೇಶ್ವರ ಅಂಚೆ ಕಚೇರಿ ಯಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿ ಶತಮಾನೋತ್ಸವ ಚಿರಸ್ಮರಣೀಯ ಗೊಳಿಸಲು ಇಂತಹ ಪರಿಕಲ್ಪನೆಯನ್ನು ಆಯ್ಕೆ ಮಾಡಿಕೊಂಡದ್ದಕ್ಕಾಗಿ ಸಂಬಂಧಪಟ್ಟ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿ​ಸಿದರು. 
 ​ಮಂದಿನ ಪೀಳಿಗೆಗೆ ಹಿಂದಿನ ತಲೆಮಾರಿನ ವ್ಯಕ್ತಿಗಳ ಬಗ್ಗೆ ಅರಿವು ಮಾಡಲು ಇಂದು ನಾವು ಮಾಡುವ ಇಂತಹ ಕಾರ್ಯಗಳು ಮಾರ್ಗದರ್ಶನವಾಗುತ್ತವೆ ಎಂದರು .ಆಚಾರ್ಯರ ಭಾವಚಿತ್ರದ ಮುಂದೆ ದೀಪ ಬೆಳಗಿ ಗೌರವ ಸಲ್ಲಿಸಲಾಯಿತು۔ಈ ವಿಶೇಷ ಲಕೋಟೆಯ  ರೂವಾರಿ ಡಾ.ನಂದಿನಿ ಶಿವಾನಂದ್ ಸ್ವಾಗತಿಸಿದರು. ಹಿರಿಯ ಪುತ್ರ ಯು. ರಾಘವೇಂದ್ರಾಚಾರ್ಯರುವರು ಯು ಎಲ್ ಆಚಾರ್ಯರ  ಪರಿಚಯ  ನಡೆಸಿಕೊಟ್ಟರು۔ಕೋವಿಡ್ ಸಮಸ್ಯೆ ಯಿಂದಾಗಿ ಅನುಪಸ್ಥಿತರಾದ ಮುಖ್ಯ ಅತಿಥಿ  ಪದ್ಮ ಭೂಷಣ ಬಿ ಎಂ. ಹೆಗಡೆಯವರು ವಿಡಿಯೋ ಮೂಲಕ ಅನಿಸಿಕೆಗಳನ್ನು ಹಂಚಿಕೊಂಡರು.
ಮಂಗಳೂರು ಪಾಂಡೇಶ್ವರ ಅಂಚೆಕಚೇರಿಯ ಹಿರಿಯ ಅಂಚೆ ಪಾಲಕ ಕೆ ಸುಬ್ರಾಯ ಪೈ ಉಪಸ್ಥಿತರಿದ್ದರು.  
ಸ್ಪೆಷಲ್ ಕವರ್ ಡಿಸೈನ್ ಮಾಡಿದ ಡಾ.ಪೂರ್ಣಿಮಾ ನಾಯರ್  ಹಾಗೂ ಎನ್ಐಟಿಕೆ ಸುರತ್ಕಲ್ ನ ಪ್ರಾಧ್ಯಾಪಕ ಶ್ರೀಕೃಷ್ಣ ಭಟ್ ರವರು  ನುಡಿನಮನ ಸಲ್ಲಿಸಿದರು .ಪುತ್ರಿ ಜಯಂತಿ ರಾವ್ ರವರು ವಿಡಿಯೋ ಮೂಲಕ ಅನಿಸಿಕೆ ಹಂಚಿಕೊಂಡರು.ಕಿರಿಯ ಪುತ್ರ ಹರಿದಾಸ ಆಚಾರ್ಯ ಧನ್ಯವಾದವಿತ್ತರು.ಮಂಗಳೂರು ಅಂಚೆ ವಿಭಾಗದ ಸಿಬ್ಬಂದಿ  ಸೀಮಾ ಮತ್ತು ಜಯಲಕ್ಷ್ಮಿ ಸಹಕರಿಸಿದರು.
ಈ ಸಂದರ್ಭದಲ್ಲಿ ಕೋವಿಡ್ ಬಗ್ಗೆ ಜಾಗೃತಿ ಕಾರ್ಯಕ್ರಮ‌ ನಡೆಸಿಕೊಟ್ಟ  ಹಿರಿಯ ಫಿಲಾಟಲಿಸ್ಟ್ , ಆರೋಗ್ಯ ತಜ್ಞ,ರೊ. ಡಾ.ಲಕ್ಷ್ಮಣ್  ಪ್ರಭುರವರನ್ನು ಇಲಾಖೆಯ ಪರವಾಗಿ ಅಭಿನಂದಿಸಲಾಯಿತು.  ಉಡುಪಿ ಅಂಚೆ ವಿಭಾಗದ  ಮಾರುಕಟ್ಟೆ ಕಾರ್ಯನಿರ್ವಾಹಕಿ ಪೂರ್ಣಿಮ ಜನಾರ್ಧನ್ ​ನಿರೂಪಿಸಿದರು .
​​
- Advertisement -

ಸಂಬಂಧಿತ ಸುದ್ದಿ

1 COMMENT

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ನವರಾತ್ರಿ-೪ ~ ಎಲ್ಲೂರಿನ ‘ಅಮ್ನೂರು’~ಕೆ.ಎಲ್.ಕುಂಡಂತಾಯ

ಪಾರಂಪರಿಕ ಸಂಪ್ರದಾಯ, ಶಿಷ್ಟಾಚಾರ, ಒಡಂಬಡಿಕೆ, ಒಪ್ಪಿಗೆಗಳೊಂದಿಗೆ ಕರಾವಳಿಯಲ್ಲಿ ಅಭಿವೃದ್ಧಿಗೊಂಡ ದೇವಾಲಯ ಸಂಸ್ಕೃತಿಯ ಮಾದರಿಯಾಗಿ ಪ್ರಸಿದ್ಧಿಯನ್ನು ಪಡೆದ ದೇವಾಲಯಗಳಲ್ಲಿ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವ ಸ್ಥಾನ ಒಂದು. ಇಲ್ಲಿಯ ಉಪಸ್ಥಾನ ಸನ್ನಿಧಿಯಾಗಿ "ಅಮ್ನೂರು"...

ಇಂಜಿನಿಯರಿಂಗ್ ಗೆ ಆಸರೆಯಾದ ಹೈನುಗಾರಿಕೆ.

ಗಂಡು ದಿಕ್ಕಿಲ್ಲದ ಕುಟುಂಬವೊಂದಕ್ಕೆ ಹೈನುಗಾರಿಕೆ ಆಸರೆಯಾಗಿ, ಹೆಣ್ಣು ಮಕ್ಕಳ ಭವಿಷ್ಯ ಒಂದು ಹಂತ ತಲುಪಲು ಸಹಕಾರಿಯಾಗಿದೆ. ನೀರೆ ಬೈಲೂರಿನ  ಸುಜಾತ ಪ್ರಭು ಮತ್ತು ದಿವಂಗತ ಸುಬ್ರಾಯ ಪ್ರಭು ದಂಪತಿಗೆ ನಾಲ್ವರು ಹೆಣ್ಣುಮಕ್ಕಳು. ಕ್ಯಾನ್ಸರ್...

ಮುಗಿಯದು ಮುಂದಿನ ದಾರಿ~Click:Ashok Donderangadi

ಮುಗಿಯದು ಮುಂದಿನ ದಾರಿ ಸಾಗಿದಷ್ಟೂ ಇದೆ ಬಯಲು..! ಸಾಗಬೇಕು ಸಂತಸದಿ ಸದಾ ಮೊಗಾರವಿಂದ ಅರಳಿದಂತೆ..! ಸಾಗುವುದು ಬದುಕ ಪಥ ಹೀಗೆಯೇ ಎಂದಿನಂತೆ...!! ಎತ್ತಿನ ಗಾಡಿಯನೇರಿ ಸಾಗುವಾಗ ಕೇಳಿಸುವ ಗಾಲಿಯ ಶಬ್ದ, ಗೊರಸುಗಳು ನೆಲಕ್ಕೆ ಬಲವಾಗಿ ಊರಿದಾಗ ಬರುವ ಗತ್ತಿನ ಸದ್ದು,ಗಾಡಿಗೆ ಕಟ್ಟಿದ...

ಉಡುಪಿಯಲ್ಲಿ 50ಕ್ಕೂ ಅಧಿಕ ದಲಿತರು ಬೌದ್ಧ ಧರ್ಮಕ್ಕೆ ಮತಾಂತರ

ಉಡುಪಿ: ಭಾನುವಾರದಂದು ಉಡುಪಿ ಜಿಲ್ಲಾ ಬೌದ್ಧ ಮಹಾಸಭಾ ವತಿಯಿಂದ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್‌ರವರ 64ನೇ ದಮ್ಮ ಚಕ್ರ ಪ್ರವರ್ತನಾ ದಿನಾಚರಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಜಿಲ್ಲೆಯ ಸುಮಾರು 50ಕ್ಕೂ ಅಧಿಕ ದಲಿತರು...

ಹೆಲ್ಮಟ್ ಹಾಕದೆ ವಾಹನ ಚಾಲನೆ, ಮೂರೂ ತಿಂಗಳ ಪರವಾನಿಗೆ ರದ್ದು

ಬೆಂಗಳೂರು: ಇನ್ನು ಮುಂದೆ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಕೇವಲ ದಂಡ ಮಾತ್ರವಲ್ಲ ಬದಲಾಗಿ ಮೂರು ತಿಂಗಳು ಚಾಲಕನ ಪರವಾನಗಿ ಅಮಾನತು ಮಾಡಲು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇದೀಗ ರಾಜ್ಯ ಸರ್ಕಾರ ಈ...
error: Content is protected !!