ಸಾಧಕ ವಿದ್ಯಾರ್ಥಿಗಳು ಪ್ರೇರಕರೂ ಆಗಬೇಕು*  — ಅಶೋಕ್ ಕಾಮತ್

ಸಾಧಕ ವಿದ್ಯಾರ್ಥಿಗಳು ತಾವು ಸಾಧನೆಯ ಪಥದಲ್ಲಿ ನಿರಂತರವಾಗಿ ಸಾಗುವುದಲ್ಲದೆ ಮುಂದಿನ ವಿದ್ಯಾರ್ಥಿಗಳಿಗೂ ಪ್ರೇರಕ ರಾಗ ಬೇಕು ಎಂದು ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 2021-22 ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಕು | ಗಾಯತ್ರಿ ಯನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.ಕಾಲೇಜಿನ ಪ್ರಾಂಶುಪಾಲ ರುದ್ರಗೌಡರು ಅಧ್ಯಕ್ಷತೆ ವಹಿಸಿ ಹೆಚ್ಚು ಹೆಚ್ಚು ವಿದ್ಯಾರ್ಥಿನಿಯರು ಸಾಧಕರಾಗಿ ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿಯನ್ನು ತರಬೇಕೆಂದು ಹೇಳಿ ಶುಭಹಾರೈಸಿದರು. ಸಾಧಕ ವಿದ್ಯಾರ್ಥಿನಿಯ ತಾಯಿ ವಸಂತಿ ಅಧ್ಯಾಪಕರನ್ನು ಅಭಿನಂದಿಸಿದರು

ಹಿರಿಯ ಶಿಕ್ಷಕಿ ಜಯಲಕ್ಷ್ಮಿ ಸ್ವಾಗತಿಸಿದರು. ಶಿಕ್ಷಕ ಶೇಖರ ಬೋವಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಗೈದರು.

Leave a Reply