ಸ್ವಚ್ಛ ಭಾರತ್ ಫ್ರೆಂಡ್ಸ್ ಮುಕುಟಕ್ಕೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ   

ಸ್ವಚ್ಛ ಭಾರತ, ಸ್ವಸ್ಥ ಭಾರತ, ಗ್ರಾಮ ಭಾರತ ಮತ್ತು ಡಿಜಿಟಲ್ ಭಾರತ ಎಂಬ ನಾಲ್ಕು ವಿಭಾಗಗಳ ಅಡಿಯಲ್ಲಿ ಅಕ್ಟೋಬರ್ 2, 2014 ರಿಂದ ಕಾರ್ಯನಿರ್ವಹಿಸುತ್ತಿರುವ ಉಡುಪಿಯ ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಸ್ಥೆಗೆ ಸಂಘ ಸಂಸ್ಥೆಗಳಿಗೆ ಸಮಾಜಸೇವೆಯ ವಿಭಾಗದಡಿಯಲ್ಲಿ 2020ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಕರಾವಳಿ ಎಕ್ಸ್ಪ್ರೆಸ್ ನೊಂದಿಗೆ ಮಾತನಾಡಿದ ಸ್ವಚ್ಛ ಭಾರತ್ ಫ್ರೆಂಡ್ಸ್ ಸ್ಥಾಪಕ ಸಂಚಾಲಕ ಗಣೇಶ್ ಪ್ರಸಾದ್, ಇದೊಂದು ಅವಿಸ್ಮರಣೀಯ ಕ್ಷಣವಾಗಿದೆ. ಕಳೆದ 6 ವರ್ಷಗಳಿಂದ ಪರಿಸರ ರಕ್ಷಣೆ, ಶಿಕ್ಷಣಕ್ಕೆ, ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುವಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ.ವಿಕೋಪಗಳು ಸಂಭವಿಸಿದಾಗ ಸ್ಥಳಕ್ಕೆ ತೆರಳಿ ನೆರವನ್ನು ನೀಡಲಾಗಿದೆ. ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ಮೂಲಕ ಕನ್ನಡ ಕಲಿಕೆಗೆ ಸಂಬಂಧಿಸಿದಂತೆ ಅಭಿಯಾನ, ಕೋವಿಡ್ ಜಾಗೃತಿಗೆ ಸಂಬಂಧಿಸಿದಂತೆ ಎಸ್.ಎಮ್.ಎಸ್. ಕಳುಹಿಸುವ ಅಭಿಯಾನ, ಕನ್ನಡ ಮಾಧ್ಯಮ ಶಾಲೆಗಳಿಗೆ ಕಿರು ಗ್ರಂಥಾಲಯ, ಗ್ರಾಮ ಪಂಚಾಯತ್ ಸದಸ್ಯರಿಗೆ ಸಾಮಾಜಿಕ ಜಾಲತಾಣ ಬಳಸುವ ಕಾರ್ಯ ಗಾರ.

ಸಾವಯವ ಕೃಷಿ ಮತ್ತು ಹೈನುಗಾರಿಕೆ ನಡೆಸುವವರಿಗೆ ಗುರುತಿಸಿ ಗೌರವ ಈ ರೀತಿ ಹಲವಾರು ಚಟುವಟಿಕೆಗಳು ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಸ್ಥೆ ನಡೆಸುತ್ತಿದೆ. ಕಡಲ ಕಿನಾರೆಗಳಲ್ಲಿ 50 ವಾರಗಳ ಕಾಲ ಸ್ವಚ್ಛತಾ ಅಭಿಯಾನ, ರೈಲ್ವೆ ಇಲಾಖೆಯ ಜೊತೆಗೂಡಿ ಸ್ವಚ್ಛತಾ ಅಭಿಯಾನ ಈ ರೀತಿ ಕಳೆದ 6 ವರ್ಷಗಳಿಂದ ಹಲವಾರು ಕಡೆಗಳಲ್ಲಿ ಸ್ವಚ್ಛತಾ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಲಾಗಿದೆ.ಈ ಪ್ರಶಸ್ತಿಯು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿದೆ ಮತ್ತು ಮುಂದಿನ ದಿನಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ಸಹಭಾಗಿತ್ವದಲ್ಲಿ ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದರು. ಕಳೆದ 6 ವರ್ಷಗಳಿಂದ ಸ್ವಚ್ಛ ಭಾರತ್ ಫ್ರೆಂಡ್ಸ್ ಒಟ್ಟಿಗೆ ಬೆನ್ನೆಲುಬಾಗಿ ನಿಂತಿರುವ ಪ್ರತಿಯೊಬ್ಬರಿಗೂ ಮತ್ತು ವಿಶೇಷವಾಗಿ ಉಡುಪಿ ಜಿಲ್ಲೆಯ ಎಲ್ಲಾ ಮಾಧ್ಯಮಗಳು ಸ್ವಚ್ಛ ಭಾರತ್ ಫ್ರೆಂಡ್ಸ್ ತಂಡದ ಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡಿ ಜನರಲ್ಲಿ ಜಾಗೃತಿ ಮೂಡಿಸಿವೆ ಎಂದು ಸಂಚಾಲಕ ಗಣೇಶ್ ಪ್ರಸಾದ್ ತಿಳಿಸಿದರು.
ಹಲವಾರು ಸಂಘಸಂಸ್ಥೆಗಳ ಮತ್ತು ಸರ್ಕಾರಿ ಇಲಾಖೆಗಳ ಜೊತೆಗೂಡಿ ಕಳೆದ 6 ವರ್ಷಗಳಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್ ದೀರ್ಘ ಕಾಲಿಕ ಪರಿಣಾಮಗಳನ್ನು ಇರುವಂತಹ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿದೆ ಎಂದು ಸಂಯೋಜಕ ರಾಘ ವೇಂದ್ರ ಪ್ರಭು ಕರ್ವಾಲು ತಿಳಿಸಿದರು.  

 
 
 
 
 
 
 
 
 
 
 

Leave a Reply