​​ವೇಣು ವಿದ್ವಾನ್ ಸುಂದರ ಉಡುಪಿಯವರಿಗೆ ಅಭಿನಂದನೆ

 
ಶ್ರೀ ಮಹಾಮಾಯಾ ಭಜನಾ ಮಂಡಳಿ ಈಶ್ವರ ನಗರ ಮಣಿಪಾಲ ಮತ್ತು ಮುಕ್ತಾoಜಲಿ  ನೃತ್ಯ ಸಂಸ್ಥೆ ಈಶ್ವರ ನಗರ ಮಣಿಪಾಲ ಜಂಟಿ ಆಶ್ರಯದಲ್ಲಿ ಶ್ರೀಮತಿ ಮಾಯಾ ಕಾಮತ್  ಈಶ್ವರ ನಗರ ಮಣಿಪಾಲ ಇವರ  ನೇತೃತ್ವದಲ್ಲಿ ಶುಕ್ರವಾರ ಸಂಜೆ  ಸರಸ್ವತಿ ಶಾಲೆಯ ಸಭಾಂಗಣದಲ್ಲಿ ಕೊಳಲು ಮತ್ತು ನೃತ್ಯ ತರಬೇತಿಯ  ಉದ್ಘಾಟನೆಯನ್ನು ಶ್ರೀಮತಿ ಶಾಂತಿ ಲತಾ (ಮುಖ್ಯಉಪಾಧ್ಯಾಯಿನಿ ಸರಸ್ವತಿ ಶಾಲೆ  ಉಡುಪಿ) ಸರಸ್ವತಿ ಶಾಲೆಯ ಸಭಾಂಗಣದಲ್ಲಿ ದೀಪವನ್ನು ಬೆಳಗಿಸುವ ಮೂಲಕ  ಉದ್ಘಾಟಿಸಿದರು. 
 
ಮುಖ್ಯ ಅತಿಥಿಗಳಾದ  ವೀಣಾ ಶ್ರುತಿ ಶೆಣ್ಯೇ , (ಆಡಳಿತ ಪಾಲುದಾರರು ಆಶ್ಲೇಷ ಹೋಟೆಲ್ ಮಣಿಪಾಲ ), ನಾಗರಾಜ್ ಕಾಮತ್ (ಅಸಿಸ್ಟೆಂಟ್ ಪ್ರೊಫೆಸರ್ MIT ), ಶ್ರೀಮತಿ ಸವಿತಾ ಶೆಟ್ಟಿ  ಈಶ್ವರ ನಗರ ಮಣಿಪಾಲ ( ಶಿಕ್ಷಕಿ, ಮಿಲಾಗಿರ್ಸ್ ಹೈಸ್ಕೂಲ್ ಕಲ್ಯಾಣಪುರ ), ಸತೀಶ್ N  ಮಣಿಪಾಲ ( TMA ಪೈ ಪೊಲಿಟ್ಚ್ನಿಕ್  ಈಶ್ವರ ನಗರ ಮಣಿಪಾಲ ), ಸಹನಶೀಲ ಪೈ ( ಜಿಲ್ಲಾ ಅಧ್ಯಕ್ಷರು : ವರ್ತಕ  ಸಂಘ  ಉಡುಪಿ ),  ಶ್ರೀಮತಿ  ಕುಸುಮಾವತಿ ವಾಗ್ಲೇ ಬೆಂಗಳೂರು, ಶ್ರೀಮತಿ ಸುಗುಣ ಶೆಟ್ಟಿ(ಉಮಾಶಂಕರಿ  ಭಜನಾ ಮಂಡಳಿ  ಅಂಬಾಗಿಲು) ಶ್ರೀಮತಿ ರಮ್ಯಾ ಮಲ್ಯ ( ಅಧ್ಯಕ್ಷರು,ಮಹಾಮಾಯಾ ಭಜನಾ ಮಂಡಳಿ ಮಣಿಪಾಲ ), ಹಾಗೂ ಸಂಪನ್ಮೂಲ ವ್ಯಕ್ತಿಗಳಾದ  ಶ್ರೀಮತಿ ಮುಕ್ತಾ ನಾಗೇಶ್, ಸಂಸ್ಥೆಯ ವತಿಯಿಂದ  ನೂರಾರು ವಿದ್ಯಾರ್ಥಿಗಳಿಗೆ  ಕೊಳಲು ವಾದನ  ತರಬೇತಿ ನೀಡುತ್ತಿರುವ   ಸುಂದರ ಉಡುಪಿ (ವೇಣು ವಿದ್ವಾನ್ ) ಗೌರವಿಸಲಾಯಿತು.  
 
ವೇದಿಕೆಯಲ್ಲಿ  ಶ್ರೀಮತಿ ಮೋಹಿನಿ ಭಟ್, ವಿದ್ಯಾ ಶರ್ಮಾ, ಶ್ರೀಮತಿ ನಂದಿನಿ  ಶೆಣ್ಯೇ , ನಾಗರತ್ನ ಕಟಪಾಡಿ ಉಪಸ್ಥಿತರಿದ್ದರು. ಏಕ ಕಾಲದಲ್ಲಿ ವಿವಿಧ ಭಜನಾ  ಮಂಡಳಿಯವರಿಂದ  ಭಜನಾ ಕಾರ್ಯಕ್ರಮವು ಜರಗಿತು.
 
 
 
 
 
 
 
 
 
 
 

Leave a Reply