ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರತಿಕ್ಷ – ಪ್ರಥಮ ಹಾಗೂ ರಾಜ್ಯಮಟ್ಟದ ಸ್ಟ್ರಾಂಗ್ ವುಮೆನ್ ಬಹುಮಾನ ಗಳಿಸಿದ್ದು, ಐಶ್ವರ್ಯ – ಪ್ರಥಮ, ರಶ್ಮಿತ – ದ್ವಿತೀಯ, ಋತು- ದ್ವಿತೀಯ, ಸೌಮ್ಯ – ತೃತೀಯ ಬಹುಮಾನ ಗಳಿಸಿರುತ್ತಾರೆ. ಇವರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿ ಎಸ್., ದೈಹಿಕ ಶಿಕ್ಷಣ ಬೋಧಕರಾದ ಡಾ. ರಾಮಚಂದ್ರ ಪಾಟ್ಕರ್ ಹಾಗೂ ಬೋಧಕ, ಬೋಧಕೇತರ ವರ್ಗದ ಪರವಾಗಿ ಅಭಿನಂದನೆಗಳು.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.