ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ ಶಿರಿಬೀಡು ಉಡುಪಿ ಇದರ ನಿವೃತ್ತ ಶಿಕ್ಷಕಿ ಶ್ರೀಮತಿ ಗುಲಾಬಿ ಬಾಯಿ ಇವರನ್ನು skpa ಉಡುಪಿ ವಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಗುಲಾಬಿ ಟೀಚರ್ ಈ ಸನ್ಮಾನ ತನಗೆ ಸಂತಸ ತಂದಿದೆ.ವಲಯದ ಎಲ್ಲಾ ಸದಸ್ಯರನ್ನು ದೇವರು ಕಾಪಾಡಲಿ ಎಂದು ಆಶೀರ್ವದಿಸಿದರು.


ಸಮಾರಂಭದಲ್ಲಿ ಗೌರವಾಧ್ಯಕ್ಷ ಶಿವ ಕೆ ಅಮೀನ್, ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರು, ಪ್ರದಾನ ಕಾರ್ಯದರ್ಶಿ ಸುಕೇಶ್ ಕೆ.ಅಮೀನ್, ಸುರಭಿ ಸುಧೀರ್ ಶೆಟ್ಟಿ, ರತನ್ ಶೆಟ್ಟಿ, ಜಯಕರ್ ಸುವರ್ಣ, ಪ್ರವೀಣ್ ಕೊರೆಯಾ, ಸಂತೋಷ್ ಕೊರಂಗ್ರಪಾಡಿ, ಚಂದ್ರ ಶೇಖರ್ ಹಿರಿಯಡಕ, ವಾಮನ್ ಪಡುಕರೆ, ಮಹೇಶ್ ಸುವರ್ಣ, ರಾಘವೇಂದ್ರ ಶೇರಿಗಾರ್, ಮಂಜುನಾಥ ದೇವಾಡಿಗ ಉಪಸ್ಥಿತರಿದ್ದರು.

ಪ್ರಕಾಶ್ ಕೊಡಂಕೂರು ಸ್ವಾಗತಿಸಿದರು. ಸುಕೇಶ್ ಕೆ.ಅಮೀನ್ ವಂದಿಸಿದರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು.
