ಥೈಲ್ಯಾಂಡ್ ನ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಶಿವಾನಿ ಶೆಟ್ಟಿ ಹೆಬ್ರಿ ಆಯ್ಕೆ

ಅಂತಾರಾಷ್ಟ್ರೀಯ ಯೂತ್ ಯೋಗಿಕ್ ಸೈನ್ಸ್ ಫೆಡರೇಷನ್ ಮತ್ತು ವರ್ಷಿಣಿ ಯೋಗ ಎಜುಕೇಷನ್ ಸಂಸ್ಥೆಗಳು, ಗವರ್ನಮೆಂಟ್ ಆಫ್ ಆಯುಷ್ & ಯೂತ್ ಸ್ಪೋರ್ಟ್ಸ್ ಸರ್ವಿಸಸ್ ಸಹಭಾಗಿತ್ವದೊಂದಿಗೆ ಆಯೋಜಿಸಿದ
ರಾಷ್ಟ್ರೀಯ ಮಟ್ಟದ ಎಂಟನೇ ಯೋಗಾಸನ ಸ್ಪರ್ಧೆ 2022ರಲ್ಲಿ ದಿನಾಂಕ 15/04/2022 ರಂದು ಗೋವಾದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ 8 ರಿಂದ 10 ವರ್ಷದೊಳಗಿನ ವಯೋಮಾನ ವಿಭಾಗದಲ್ಲಿ ಭಾಗವಹಿಸಿದ ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿಯ 5ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶಿವಾನಿ ಶೆಟ್ಟಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.
ಈಕೆ ಬೇಳಂಜೆ ಶ್ರೀ ಶಿವಾನಂದ ಶೆಟ್ಟಿ ಹಾಗೂ ಹೆಬ್ರಿ ಶ್ರೀಮತಿ ಸುಜಾತ ಶೆಟ್ಟಿ ದಂಪತಿಗಳ ಸುಪುತ್ರಿಯಾಗಿದ್ದು,ಯೋಗ ಗುರು ಕೆ ನರೇಂದ್ರ ಕಾಮತ್ ಕಾರ್ಕಳ ಇವರ ಶಿಷ್ಯೆಯಾಗಿರುತ್ತಾಳೆ.

ಈ ಮೊದಲು ಜಿಲ್ಲೆ,ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿಯೂ ಹಾಗೂ ಇತ್ತೀಚೆಗೆ ನಡೆದ ಮಲೇಷಿಯಾ ದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗಿದ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನಿಯಾಗಿ ಪುರಸ್ಕೃತಳಾಗಿದ್ದಾಳೆ.

ಇವಳ ಈ ಸಾಧನೆಯನ್ನು ಮೆಚ್ಚಿ ಹಲವಾರು ಸಂಘ ಸಂಸ್ಥೆಗಳು, ಹಿರಿಯ ವ್ಯಕ್ತಿಗಳು ಅಭಿನಂದಿಸಿ ಉಜ್ವಲ ಭವಿಷ್ಯವನ್ನು ಬಯಸಿರುತ್ತಾರೆ.

ಅಲ್ಲದೇ ಈಕೆ ಇದೇ ಮೇ
ತಿಂಗಳ ಕೊನೆಯ ವಾರದಲ್ಲಿ ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ 10 ವರ್ಷದೊಳಗಿನ ವಯೋಮಿತಿಯಲ್ಲಿ ಆಯ್ಕೆಯಾಗಿರುತ್ತಾಳೆ.

 
 
 
 
 
 
 
 
 
 
 

Leave a Reply