ಉಡುಪಿಯ ಎಸ್ ಡಿಎಂ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಮಮತಾ ಕೆ.ವಿ ಅಧಿಕಾರ ಸ್ವೀಕಾರ 

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸಂಸ್ಥೆಯಾದ ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿಗೆ ಪ್ರಾಂಶುಪಾಲರನ್ನಾಗಿ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಹಾಗೂ ಉಡುಪಿಯ ಪ್ರಸಿದ್ಧ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ತಜ್ಞೆ ಡಾ. ಮಮತಾ ಕೆ.ವಿ ಅವರನ್ನು ಆಯ್ಕೆ ಮಾಡಿದ್ದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಪರವಾಗಿ ಎಕ್ಸಿಕ್ಯೂಟಿವ್ ಆಫೀಸರ್ ಶ್ರೀ ಶಶಿಧರ ಶೆಟ್ಟಿಯವರು ಪ್ರಾಚಾರ್ಯ ಹಾಗೂ ಮುಖ್ಯ ವೈದ್ಯಕೀಯ ಅಧಿಕಾರಿಯ ಪದವಿಯನ್ನು ಡಾ. ಮಮತಾ ಕೆ.ವಿ.ಯವರ ಕೈಗೊಪ್ಪಿಸಿದರು.
ಡಾ. ಮಮತಾ ಕೆ.ವಿಯವರು ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ಬಿ.ಎ.ಎಮ್.ಎಸ್. ಪದವಿ ಪಡೆದು, ಬಂಗಾರದ ಪದಕವನ್ನು ಗಳಿಸಿರುತ್ತಾರೆ. ಸ್ನಾತಕೋತ್ತರ ಪದವಿಯನ್ನು ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ರೋಗ ವಿಭಾಗದಲ್ಲಿ ಬನಾರಸ್ ಹಿಂದೂ ಯೂನಿವರ್ಸಿಟಿ, ವಾರಣಾಸಿಯಲ್ಲಿ ಹಾಗೂ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಆಯುರ್ವೇದ, ಜೈಪುರದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದಿರುತ್ತಾರೆ.
ಡಾ. ಮಮತಾ ಕೆ.ವಿಯವರು ಅನೇಕ ರಾಷ್ಟ್ರೀಯ  ಹಾಗೂ ಅಂತರಾಷ್ಟ್ರೀಯ  ಆಯುರ್ವೇದ ಸಮ್ಮೇಳನಗಳನ್ನು ಆಯೋಜಿಸಿದ್ದು ಅನೇಕ ಪ್ರಬಂಧಗಳನ್ನು ಮಂಡಿಸಿದ್ದು, ಅಂತಾರಾಷ್ಟ್ರೀಯ  ಖ್ಯಾತಿಯನ್ನು ಪಡೆದಿರುತ್ತಾರೆ.
ಮಾಹೆ ಯೂನಿವರ್ಸಿಟಿ, ಮಣಿಪಾಲದ ಅಸಿಸ್ಟೆಂಟ್ ಡೈರೆಕ್ಟರ್ (ಪರ್ಚೇಸ್ ವಿಭಾಗ) ಶ್ರೀ ನವೀನ್ ಕುಮಾರ್ ಇವರ ಪತ್ನಿಯಾದ ಡಾ. ಮಮತಾ ಕೆ.ವಿ.ಯವರು ಕಾರ್ಕಳದ ನಿವೃತ್ತ  ಪ್ರಾಂಶುಪಾಲರಾದ ಶ್ರೀ ಕೆ.ವಿ. ಭಂಡಾರಿ ಹಾಗೂ ಶ್ರೀಮತಿ ಶಾಂತ ದಂಪತಿಯವರ ಪುತ್ರಿಯಾಗಿರುತ್ತಾರೆ.
ಇದೇ ಸಂದರ್ಭದಲ್ಲಿ ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸೈಟಿ  ಉಜಿರೆ, ಇದರ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಯವರು ಶುಭ ಹಾರೈಸಿದ್ದಾರೆ.
 
 
 
 
 
 
 
 
 
 
 

Leave a Reply