ರಿಯಲ್ ಲೈಫ್ ಸುಲ್ತಾನ್ ಸೂಪರ್ ಬಾಕ್ಸರ್ ಸತೀಶ್ ಕುಮಾರ್ ~ ಕಿರಣ್ ಪೈ ಮಂಗಳೂರು.

ವಿಶ್ವ ನಂ1 ಮೇರಿ ಕೋಮ್, ಅಮಿತ್ ಪಾಂಗಲ್ ತಮ್ಮ ವಿಭಾಗದಲ್ಲಿ ಸೋತು ಅಚ್ಚರಿ ಮೂಡಿಸಿದ ನೆನಪು ಹಸಿಯಾಗಿರುವಾಗ, ಈ ಸಲ ಒಲಿಂಪಿಕ್ಸ್ ನಲ್ಲಿ ತನ್ನ ವೀರತೆ, ಶೌರ್ಯ ಪ್ರದರ್ಶಿಸಿದ ಉತ್ತರ ಪ್ರದೇಶದ ಬುಲಂದ್ ಶಹರ್ ಮೂಲದ ಸತೀಶ್ ಕುಮಾರ್ ಭಾರತೀಯ ಬಾಕ್ಸಿಂಗ್ ಪ್ರೀಯರ ಗಮನ ಸೆಳೆದಿದ್ದಾರೆ.

ಭಾರತೀಯ ಸೇನೆಯಲ್ಲಿ ಸುಬೇದಾರ್ ಮೇಜರ್,ಅರ್ಜುನ ಪ್ರಶಸ್ತಿ ವಿಜೇತ 32 ವರ್ಷದ ಸತೀಶ್ ಕುಮಾರ್ ಸೂಪರ್ ಹೇವಿ ವೆಯ್ಟ್ ವಿಭಾಗದ ಕ್ವಾರ್ಟರ್ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದ ಕ್ಷಣ ಈ ಸಲ ಒಲಿಂಪಿಕ್ಸ್ ನ ಒಂದು ಅವಿಸ್ಮರಣೀಯ ಘಟನೆ.

ಟೋಕಿಯೋ: 2020 ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಸೂಪರ್‌ ಹೆವಿವೇಟ್‌ ಸ್ಪರ್ಧೆಯ ಕ್ವಾರ್ಟರ್‌ ಫೈನಲ್‌ ಸ್ಪರ್ಧೆಯಲ್ಲಿ ಭಾರತದ ಬಾಕ್ಸರ್ ಸತೀಶ್ ಕುಮಾರ್ ಹೋರಾಟ ಅಂತ್ಯವಾಗಿದೆ. ಉಜ್ಬೇಕಿಸ್ತಾನದ ವಿಶ್ವ ನಂ.1 ಬಾಕ್ಸರ್ ಬಖೋದಿರ್ ಜಲೊಲೌ ಎದುರು ಕೆಚ್ಚೆದೆಯ ಹೋರಾಟ ನಡೆಸಿಯೂ 5-0 ಅಂಕಗಳ ಅಂತರ ದಲ್ಲಿ ಸತೀಶ್ ಸೋಲು ಕಂಡಿದ್ದಾರೆ. 

ಇದರೊಂದಿಗೆ  ಬಾಕ್ಸಿಂಗ್ ನಲ್ಲಿ ಭಾರತದ ಈ ಒಲಿಂಪಿಕ್ಸ್ ಪುರುಷ ಸ್ಪರ್ಧಿಗಳ ಹೋರಾಟ ಅಂತ್ಯವಾಗಿದೆ. ಮಹಿಳಾ ವಾಲ್ಟರ್ ವೇಟ್ ವಿಭಾಗದಲ್ಲಿ ಲೊವಿನಾ  ಬೊರ್ಗೊಯಿನ್ ಪದಕದ ಆಸೆ ಜೀವಂತವಿರಿಸಿದ್ದಾರೆ. ಜಮೈ ಕಾದ ರಿಕಾರ್ಡೊ ಬ್ರೌನ್ ಎದುರು 4-1 ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದ ಸತೀಶ್‌ ಕುಮಾರ್‌ಗೆ ಪ್ರಬಲ ಪೈಪೋಟಿ ಎದುರಾಯಿತು.
ಈ ಹಿಂದಿನ ಎರಡು ಮುಖಾಮುಖಿಯಲ್ಲಿಯೂ ಉಜ್ಬೇಕಿ ಸ್ತಾನದ ಬಾಕ್ಸರ್‌ಗೆ ಶರಣಾಗಿದ್ದ ಸತೀಶ್‌ ಮತ್ತೊಮ್ಮೆ ಸೋಲು ಕಾಣಬೇಕಾಯಿತು. ಮೊದಲ ಸುತ್ತಿ ನಿಂದಲೇ ಉಬ್ಬೇಕಿಸ್ತಾನದ ಬಖೋದಿರ್ ಜಲೊಲೌ ಭಾರತದ ಬಾಕ್ಸರ್ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು.

ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ತೀವ್ರ ಗಾಯಕ್ಕೊಳಗಾಗಿದ್ದ ಸತೀಶ್ ದೇಶಕ್ಕಾಗಿ ಪದಕ ಗೆಲ್ಲಲು ಶಕ್ತಿ ಮೀರಿ ಯತ್ನಿಸಿದರು. ಆದರೆ ಸತೀಶ್‌ ಮೇಲುಗೈ ಸಾಧಿಸಲು ಉಜ್ಬೇಕಿಸ್ತಾನದ ವಿಶ್ವ ನಂ.1 ಬಾಕ್ಸರ್ ಅವಕಾಶ ನೀಡಲಿಲ್ಲ.

ಹಣೆ, ಗಲ್ಲದಲ್ಲಿ ಎರಡು ಸ್ಟಿಚ್ ಹಾಕಿಯೂ ಬಾಕ್ಸಿಂಗ್ ರಿಂಗ್ ನಲ್ಲಿ ತಾನೊಬ್ಬ ವೀರ ಹುಲಿ ಎಂದು ತೋರಿಸಿ ಇತಿಹಾಸ ನಿರ್ಮಿಸಿದ ಭಾರತೀಯ ಪ್ರಥಮ ಸೂಪರ್ ಬಾಕ್ಸರ್ (91+ ತೂಕ ವಿಭಾಗದಲ್ಲಿ).ಒಂದು  ಕಡೆ ರಕ್ತ ಜಿನುಗುತ್ತಿತ್ತು,ಇನ್ನೊಂದೆಡೆ ನಗುಮುಖ, ಆತ್ಮವಿಶ್ವಾಸದಿಂದ  ಛಲದಂಕ ಮಲ್ಲನಂತೆ ಹೋರಾಡುವ ಮೂಲಕ ಸತೀಶ್‌ ಗಮನ ಸೆಳೆದರು.

ತನಗಾದ ಪೆಟ್ಟು, ಗಾಯ ಲೆಕ್ಕಿಸದೆ  ಬೈ ಕೊಡದೆ, ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವ ನಂ1 ಬಾಕ್ಸರ್ ಗೆ ಕಠಿಣ ಸವಾಲೆಸುವ ಮೂಲಕ ಭಾರತೀಯರ ಪ್ರೀತಿಗೆ, ಪ್ರಶಂಸೆಗೆ ಪಾತ್ರರಾಗಿದ್ದಾರೆ.ಇಂತಹ ಕ್ರೀಡಾಪಟುಗಳು  ನಿಜಕ್ಕೂ ನಮಗೆಲ್ಲರಿಗೂ ಸ್ಪೂರ್ತಿ.

ಸಾಮಾಜಿಕ ಜಾಲತಾಣಗಳಲ್ಲಿ ಸತೀಶ್ ಕುಮಾರ್ ಗೆ ಜನರು ಹಾಡಿ ಹೊಗಳಿದ್ದಾರೆ.ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಸತೀಶ್ ಕುಮಾರ್ ಸಾಧನೆ ಬಗ್ಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.ರಿಯಲ್ ಲೈಫ್ ಸುಲ್ತಾನ್ ಸೂಪರ್ ಬಾಕ್ಸರ್ ಸತೀಶ್ ಕುಮಾರ್ ಸದಾ ನೆನಪಲ್ಲಿರುವರು.

ಸತೀಶ್ ಸಾಧನೆ: 2014 ಏಷ್ಯನ್ ಗೇಮ್ಸ್ ಕಂಚು, 2015 ಮತ್ತು 2019 ಏಷ್ಯನ್ ಚಾಂಪಿಯನ್ಶಿಪ್ ಕಂಚು,2018 ಕಾಮನ್ವೆಲ್ತ್ ಬೆಳ್ಳಿ ಮತ್ತು ಒಲಿಂಪಿಕ್ಸ್ 2020 ಪ್ರಪ್ರಥಮ ಭಾರತೀಯ ಕ್ವಾರ್ಟರ್ ಫೈನಲ್ (91+ ವಿಭಾಗ).

 
 
 
 
 
 
 
 
 
 
 

Leave a Reply