ಪ್ರತಿಭಾ ಸಂಪನ್ನರು ನಮ್ಮೀ ತಂತ್ರೀ ಸಹೋದರಿಯರು 

ತೊಟ್ಟಂ​ ನಿವಾಸಿ ಮಧುಸೂದನ ತಂತ್ರಿ ಹಾಗೂ ಅಕ್ಷ​ತಾ ತಂತ್ರಿಯ​ವಾರ ಪುತ್ರಿಯರಾದ ಅನ್ವಿತಾ ತಂತ್ರಿ​ ಹಾಗು ​ಅರ್ಪಿತಾ ತಂತ್ರಿ ​ನಮ್ಮ ಇಂದಿನ ಹೀರೋಯಿನ್ ಗಳು. ಶಾಲೆಯಲ್ಲಿ ಪಾಠ​ ​ಪುಸ್ತಕಗಳಿಂದ ಕಲಿಯೋದು ಕೇವಲ 10% ಮಾತ್ರ ಎಂಬುದನ್ನು ಸರಿಯಾಗಿ ಮನಗಂಡ ಅಕ್ಷತಾ ಮಧು ಸೂದನ ದಂಪತಿಗಳು ತಮ್ಮ ಮಕ್ಕಳಿಗೆ ಸಾಮಾನ್ಯ​ ​ಜ್ಞಾನ, ಪರಿಸರ ಜಾಗೃತಿ,​ ​ದೇಶ ಪ್ರೇಮ,​ ​ಸಾಮಾಜಿಕ ಕಳಕಳಿ,​ ​ಸಹ ಬಾಳ್ವೆ,​ ​ಸಹಕಾರ,​ ​ನಾಯಕತ್ವದ ಗುಣಲಕ್ಷಣಗಳು,​ ​ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಪ್ರೋತ್ಸಾಹ ವನ್ನು ಕೊಟ್ಟು ಒತ್ತಡ ಹೇರದೇ,​ ​ಕಲಿಯುವ ಪ್ರಕ್ರಿಯೆಯಲ್ಲಿ ಮಕ್ಕಳ ಹಕ್ಕಿಗೆ ಪ್ರಾಧಾನ್ಯತೆ ನೀಡಿ, ಜೀವನ​ ಪಾಠ ಕಲಿಸುವುದರ ಮೂಲಕ ಮಕ್ಕಳೊಂದಿಗೆ ತಾವು ಬೆರೆತು​ ​ಕೊಂಡಿದ್ದಾರೆ.
ತಂತ್ರಿ ಸಹೋದರಿಯರು ಭರತನಾಟ್ಯದಲ್ಲಿ ಕೊಡವೂರು ನೃತ್ಯ​ ​ನಿಕೇತನದ ​ವಿದ್ವಾನ್ ಸುಧೀರ್ ರಾವ್ ಹಾಗೂ ವಿದುಷಿ  ಮಾನಸಿ ರವರ ನೇತೃತ್ವದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಅತ್ಯುನ್ನತ  ಶ್ರೇಣಿಯನ್ನು ಪಡೆದಿದ್ದಾರೆ.​ ​ಶಿರಸಿಯ ಶ್ರೀಪಾದ್ ಭಟ್ ರವರ ನಿರ್ದೇಶನದ ಮತ್ತು​ ​ಸುಧಾ ಆಡುಕಳರವರ ಅನುವಾದಿತ​ ​“ಚಿತ್ರಾ” ಹಾಗೂ ಅಭಿಲಾಶ ಎಸ್ ರವರ ನಿರ್ದೇಶನದ “ಮಳೆ ಬಂತು ಮಳೆ”ಎಂಬ ನೃತ್ಯ ನಾಟಕದಲ್ಲೂ ಅಭಿನಯಿಸಿ  ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ​ವಿವಿಧ ಕಡೆಗಳಲ್ಲಿ ನೂರಾರು ನೃತ್ಯ ಕಾರ್ಯಕ್ರಮ ಗಳನ್ನು ನೀಡಿ, ಪ್ರತಿಭಾ ಕಾರಂಜಿಯಲ್ಲಿಯೂ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.​ ​​ವಿದ್ವಾನ್ ಭವಾನಿಶಂಕರ್ ರವರ ನಿರ್ದೇಶನದಲ್ಲಿ “ಮೈಮೆದ ಬಬ್ಬು”​ ​ಎಂಬ ತುಳು ನೃತ್ಯ ನಾಟಕದಲ್ಲಿಯೂ ಅಭಿನಯಿಸಿದ್ದಾರೆ.
ಕರಾವಳಿಯ ಗಂಡು ಕಲೆ ​ಯಕ್ಷಗಾನದ ​ಬಗ್ಗೆ ಹೆಚ್ಚಿನ ಆಸಕ್ತಿ. ಬಡಗು ಹಾಗು ತೆಂಕುತಿಟ್ಟಿನ ಯಕ್ಷಗಾನ ಕಲಿಕೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಬಡಾನಿಡಿಯೂರು ಕೇಶವ ರಾವ್ ರವರ ಸನ್ಯಾಸಿಮಠ ಮಕ್ಕಳ ಮೇಳಕ್ಕೆ ಸೇರಿ ಬಡಗುತಿಟ್ಟು ಯಕ್ಷಗಾನ ಹಾಗೂ ಯಕ್ಷಗಾನ ಕೇಂದ್ರದ ಗುರುಗಳಾದ ಸುಬ್ರಹ್ಮಣ್ಯ & ಶೈಲೇಶ್ ರವರ ಬಳಿ ಕಲಿತು ರುಕ್ಮಿಣಿ ಸ್ವಯಂವರದ ರುಕ್ಮಿಣಿ,ಮಾರೀಚಾ ನಂದನೇಯ ಮದನಾಕ್ಷಿ,​ ​ಶ್ವೇತ ಕುಮಾರ ಚರಿತ್ರೆಯ ರಂಭೆ,​ ​ಈಶ್ವರ,​ ​ಕಂಸವಧೆಯ ಕಂಸ,​ ​ರುಚಿಮತಿ,​ ​ಮಹಿಷಾಸುರ ವಧೆಯ ಮಾಲಿನಿ,​ ​ಬಬ್ರುವಾಹನ ಕಾಳಗದ ಅರ್ಜುನ,ಅ​ ​ಭಿಮನ್ಯು ಕಾಳಗದ ಅಭಿಮನ್ಯು, ಮೈಂದ ದ್ವಿವಿದದ ಮೈಂದ,​ ​ಗರುಡ ಹೀಗೆ ಹಲ ವಾರು ಪ್ರಮುಖ ಪಾತ್ರಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ.ಹಾಗೆಯೇ ತೆಂಕುತಿಟ್ಟಿನ ಯಕ್ಷಗಾನದಲ್ಲೂ ಅರ್ಜುನ ಕಾಳಗದ ಪ್ರದ್ಯುಮ್ನ,​ ​ಯವನಾಶ್ವ,​ ​ಸೀತಾಕಲ್ಯಾಣದ ಲಕ್ಷ್ಮಣ,​ ​ಪಾತ್ರಗಳೂ ಕೂಡ ಗುರುಗಳಾದ ರಾಕೇಶ್ ರೈ ಅಡ್ಕರವರ ನೇತೃತ್ವದಲ್ಲಿ ಪ್ರೇಕ್ಷಕರ ಮನಸೂರೆಗೊಂಡಿದ್ದವು.
ಯಕ್ಷಗಾನದಲ್ಲಿ ​ಕ್ಷೇತ್ರದಲ್ಲಿ ಮುಮ್ಮೇಳದಲ್ಲಿ ಮಿಂಚಿದರೆ ಸಾಲದು. ಹಿಮ್ಮೇಳಗಳ ರುಚಿ ಸವಿಯದಿದ್ದರೆ ಆದೀತೇ? ​ ​ಹಾಗಾಗಿ ಮದ್ದಳೆ ಮತ್ತು ಚೆಂಡೆಯನ್ನು ನೆಕ್ಕರೆಮೂಲೆ ಗಣೇಶ್ ಭಟ್ ರವರ ಬಳಿ, ಭಾಗವತಿಕೆಯನ್ನು ಪುಂಡಿಕೈ ಗೋಪಾಲಕೃಷ್ಣ ಭಟ್ ರವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ.​ ಸಂಗೀತ ಕ್ಷೇತ್ರದಲ್ಲೂ ಕೂಡ ಹಲವಾರು ಬಹುಮಾನಗಳನ್ನು ಕೂಡ ಪಡೆದಿದ್ದಾರೆ.​ ​ಇದಕ್ಕೆಲ್ಲಾ ಕಾರಣ ಗುರುಗಳಾದ ಉಷಾ ಹೆಬ್ಬಾರ್. ಜಾನಪದ, ಭಾವಗೀತೆ, ಶಾಸ್ತ್ರೀಯ ಸಂಗೀತ ಹೀಗೆ ಎಲ್ಲದರಲ್ಲೂ ಅಭಿರುಚಿ ಇದೆ.
ಆರೋಗ್ಯಯುತವಾದ ಪಾಶ್ಚಾತ್ಯ ನೃತ್ಯದ ಒಲವೂ ಕೂಡ ಗುರುಗಳಾದ ಪ್ರವೀಣ್, ಅಶೋಕ್, ಶ್ರೀನಿವಾಸ್ ರವರಿಂದ ಚಿಗು ರೊಡೆದು ಸ್ಪರ್ಧೆಗಳಲ್ಲೂ ಭಾಗವಹಿಸಿ ಬಹುಮಾನಗಳು ಕಟ್ಟಿಟ್ಟ ಬುತ್ತಿ ಎನ್ನುವಂತಾಯಿತು.​ ಇಷ್ಟೇ ಎಂದರೆ ಹೆಣ್ಣುಮಕ್ಕಳು ತಮ್ಮ​ ​ರಕ್ಷಣೆ ತಾವೇ ಮಾಡಿಕೊಳ್ಳುವಂತೆ ಗಟ್ಟಿಗರಾಗಲು ಗುರುಗಳಾದ ನಿತ್ಯಾನಂದ ಕೆಮ್ಮಣ್ಣು ರವರ ಬಳಿ ತರಬೇತಿ ಪಡೆದು ರಾಜ್ಯ ಮಟ್ಟದ ಬುಡೋಕಾನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಅನ್ವಿತಾ ಪಡೆದಿದ್ದಾಳೆ

ಚಿತ್ರಕಲೆ, ಆಟೋಟ ಸ್ಪರ್ಧೆಗಳಲ್ಲೂ ಮುಂದಿದ್ದಾರೆ. ಗೈಡ್ಸ್ ತರಬೇತಿಯನ್ನು ಪಡೆದು ರಾಷ್ಟ್ರಪತಿ ಪುರಸ್ಕಾರ ವನ್ನು ಪಡೆದಿದ್ದಾರೆ. ಕೊರೋನ ಸಮಯದಲ್ಲಿ 10 ನೇ ತರಗತಿ ಹಾಗೂ ಮನೆ ಪರಿಸರದ ಹತ್ತಿರದಲ್ಲಿ 2​,​500ಕ್ಕಿಂತಲೂ ಹೆಚ್ಚು ಮಾಸ್ಕನ್ನು ಹೊಲಿದು ನೀಡಿ ವಿವಿಧ ವಾಹಿನಿಗಳಿಂದಲೂ,​ ​ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಪ್ರಶಂಸೆಯನ್ನು ಪಡೆದಿದ್ದಾರೆ.​ ಹೀಗೆ ಎಲ್ಲ ಕ್ಷೇತ್ರದಲ್ಲೂ ಕೈಯಾಡಿ ಸಿದ ಸಹೋದರಿಯರು  ಓದುವುದರಲ್ಲೂ ಮುಂದು. ಎಲ್ಲಾ ತರಗತಿಯಲ್ಲಿಯೂ ಮುಂದಿದ್ದು ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿಯ ರಾಗಿದ್ದಾರೆ.
 
ಅನ್ವಿತ ತಂತ್ರಿ ಶಾಲಾ ನಾಯಕಿಯ ಸ್ಥಾನವನ್ನಲಂಕರಿಸಿ ಹತ್ತನೇ ತರಗತಿಯಲ್ಲಿ 94% ಅಂಕವನ್ನು ಪಡೆದು ಪ್ರಥಮ ಪಿಯುಸಿ ಯನ್ನು ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಮುಂದುವರೆಸಿದ್ದಾಳೆ. ಅರ್ಪಿತಾ ತಂತ್ರಿ ಮೌಂಟ್ ರೋಸರಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.​ಎಲ್ಲ ಕ್ಷೇತ್ರದಲ್ಲೂ ಸೈ​ ​ಎನಿಸಿಕೊಂಡಿದ್ದಾರೆ ಈ ತಂತ್ರಿ ಸಹೋದರಿಯರು. 
 
ಶುಚಿಗೊಳಿಸು ಜೀವನವ,​ ​ರುಚಿಗೊಳಿಸು ಜೀವನವ, ಶುಚಿರುಚಿಯ ರಸದೃಷ್ಟಿ ಬೆಸೆದುಕೊಂಡಿರಲಿ। ದೃಷ್ಟಿಯಂತೆಯೆ ಸೃಷ್ಟಿ, ಜಗದ ವ್ಯಷ್ಟಿ ಸಮಷ್ಟಿ, ಸೃಷ್ಟಿಯೆಲ್ಲವೂ ರಸದಿ ತುಂಬಿ ನಿಂದಿರಲಿ।।
ವರ್ತಮಾನದ ಬದುಕಿಗೆ ಭೂತ ಕಾಲವೇ ಅಡಿಗಲ್ಲು. ಭವಿಷ್ಯತ್ತಿನ ಕನಸಿನ ಕಲ್ಪನೆಯೇ ಅಡಿಗಲ್ಲ ಮೇಲಣ ಜೀವನಸೌಧ. ಕಳೆದ ನಿನ್ನೆಗಳು, ಇರುವ ಇಂದು, ಬರುವ ನಾಳೆಗಳನ್ನು ಚೆನ್ನಾಗಿ ಬಳಸಿಕೊಂಡರೆ ಜೀವನ ಸುಗಮವಾಗಿ ಸಾಗಬಹುದು ಎಂಬುದನ್ನು ಬಹಳ ಸಣ್ಣ ಪ್ರಾಯದಲ್ಲಿಯೇ ಅಳವಡಿಸಿಕೊಂಡ ಈ ಪ್ರತಿಭಾನ್ವಿತರು ಮುಂದೆಯೂ ಒಳ್ಳೆಯ ಭವಿಷ್ಯವನ್ನು ಪಡೆಯುವಲ್ಲಿ ಸಂಶಯ ವಿಲ್ಲ.  ಸಹೋದರಿಯರಿಗೆ ಟೀಮ್ ಕರಾವಳಿ ಎಕ್ಸ್ ಪ್ರೆಸ್ ಕೂಡಾ ಅಭಿನಂದನೆ ​ ​ಸಲ್ಲಿಸುತ್ತದೆ. 
 
 
 
 
 
 
 
 
 
 
 

Leave a Reply