ದೆಹಲಿಯ ತಲಕೋಟ್ರ ಇಂಧೋರ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ನಡೆದ ವಾಕೋ ಇಂಡಿಯನ್ ಓಪನ್ ಕಿಕ್ ಬಾಕ್ಸಿoಗ್ ಅಂತಾರಾಷ್ಟ್ರೀhಯ ಚಾಂಪಿಯನ್ ಶಿಪ್ ನ 57ಕೆಜಿ ಅಥವಾ ಪಾಯಿಂಟ್ ಫೈಟ್ ವಿಭಾಗ ದಲ್ಲಿ ರೋಶನ್ ಶೆಟ್ಟಿ ಕಂಚಿನ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. ಇವರು ಕರಾಟೆ ಮತ್ತು ಕಿಕ್ ಭಾಕ್ಸಿoಗ್ ಅಸೋಸಿಯೇಷನ್ ಸಿಟಿ ಕೋಚ್ ಉಮೇಶ್ ಮರ್ಕರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ರೋಶನ್ ಶೆಟ್ಟಿ ಇವರು ಚೆoಬೂರ್ ಪೂರ್ವದ ಸುಭಾಸ್ ನಗರದ ನಿವಾಸಿಯಾಗಿರುತ್ತಾರೆ. ಇವರು ಚೆoಬೂರ್ ಸುಭಾಸ್ ನಗರದಲ್ಲಿ ಉದ್ಯಮಿಯಾಗಿರುವ ಬೈಂದೂರ್ ಸಂಜೀವ ಶೆಟ್ಟಿ ಮತ್ತು ಪೆರ್ಡೂರ್ ರೇಖಾ ಶೆಟ್ಟಿ ದಂಪತಿಯ ಪುತ್ರ. ಸದ್ಯ ಎಂ ಪಿ ಎಸ್ ಸಿ ( ಮಹಾರಾಷ್ಟ್ರ ಪಬ್ಲಿಕ್ ಸರ್ವಿಸ್ ಕಮಿಷನ್ ) ವಿದ್ಯಾರ್ಥಿಯಾಗಿರುತ್ತಾನೆ.






