ನಾ ಕಂಡ ಜಗವು ಇಂತಿಹುದಯ್ಯಾ ಆಧುನಿಕ ವಚನಗಳ ಸಂಕಲನ ಲೋಕಾಕಾರ್ಪಣೆಗೊಳಿಸಿದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಆಧುನಿಕ ವಚನದಲ್ಲಿ ಬಳಸಿದ ಶ್ರೀ ಚಂದ್ರ ಮೌಳೀಶ್ವರಾ ಎಂಬ ಅಂಕಿತ ನಾಮವು ಉಡುಪಿಯ ಚಂದ್ರ ಮೌಳೀಶ್ವರ ದೇವಸ್ಥಾನದ ಇತಿಹಾಸವು ಮತ್ತೊಮ್ಮೆ ಜನ ಮಾನಸದಲ್ಲಿ ಉಳಿಯುವಂತೆ ಮಾಡಲಿ. ಹಾಗೆಯೇ ಪಣಿಯಾಡಿಯ ಅನಂತ ಪದ್ಮನಾಭ ದೇವಸ್ಥಾನ ಮತ್ತು ಉಡುಪಿಯ ಚಂದ್ರ ಮೌಳೀಶ್ವರನಿಗೂ ಅವಿನಾಭಾವ ಸಂಬಂಧವಿದೆ.
ಈ ಆಧುನಿಕ ವಚನದ ಮೂಲಕ ಈ ಕವಯಿತ್ರಿಯು ಸಾಹಿತ್ಯದಲ್ಲಿ ಇನ್ನಷ್ಟು ವೃದ್ಧಿಯನ್ನು ಕಾಣಲಿ ಎಂದು  ಪುತ್ತಿಗೆ ಮಠಾಧೀಶರಾದ  ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಅವರು ಕವಯಿತ್ರಿ ವಾಸಂತಿ ಅಂಬಲಪಾಡಿ ಇವರ ‘ನಾ ಕಂಡ ಜಗವು ಇಂತಿಹುದಯ್ಯಾ’ ಎಂಬ ಆಧುನಿಕ ವಚನಗಳ ಕೃತಿಯನ್ನು ಪಣಿಯಾಡಿ ಅನಂತ ಪದ್ಮನಾಭ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಾಗರಾಜ ಆಚಾರ್ಯ, ಸರಕಾರಿ  ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ  ಶ್ರೀ ದಯಾನಂದ ಕುಮಾರ್,  ನಗರ ಸಭಾ ಸದಸ್ಯ ಪ್ರಭಾಕರ ಪೂಜಾರಿ,  ಶ್ರೀ ಗಿರೀಶ್ ಅಂಚನ್, ಬೇಬಿ ಜತ್ತನ್ , ಛಾಯಾಚಿತ್ರ ಪತ್ರಕರ್ತ ಗಣೇಶ್ ಕಲ್ಯಾಣಪುರ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply