Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಬೇಂದ್ರೆ ನುಡಿಸಿರಿ ಪ್ರಶಸ್ತಿಗೆ ಸಾಹಿತಿ ಪುಂಡಲೀಕ ನಾಯಕ್ ಬೈಂದೂರು ಆಯ್ಕೆ

ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಚೇತನ ಫೌಂಡೇಷನ್ ಕರ್ನಾಟಕ ಇವರ ಸಹಯೋಗದಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡದ ಕನಕ ಅಧ್ಯಯನ ಪೀಠದ ಸಭಾ ಭವನದಲ್ಲಿ ಜುಲೈ 16 ಮತ್ತು 17 ರಂದು ಎರಡು ದಿನ ಜರಗುವ “ಧಾರವಾಡ ನುಡಿಸಡಗರ “ಕಾರ್ಯ ಕ್ರಮದಲ್ಲಿ ಕವಿಗೋಷ್ಠಿಗೆ ಮತ್ತು ” ಬೇಂದ್ರೆ ನುಡಿಸಿರಿ” ಪ್ರಶಸ್ತಿಗೆ ನಾಯ್ಕನಕಟ್ಟೆ, ಬೈಂದೂರಿನ ಸಾಹಿತಿ, ಕವಿ, ಲೇಖಕ ಶ್ರೀ ಕೆ. ಪುಂಡಲೀಕ ನಾಯಕ್ ಅವರು ಆಯ್ಕೆಯಾಗಿದ್ದರೆ. ಅಂದು ಜರಗುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಧಾರವಾಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಬಿ. ಗುಡಸಿ ಇವರ ಅಧ್ಯಕ್ಷತೆಯಲ್ಲಿ ಹಾಗೂ ಡಾ.ಅರ್. ಸಿ. ಹಿರೇಮಠ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಇವರು ಗಣ್ಯ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿರುವರು‌ ಎಂದು ತಿಳಿಸಲು ತುಂಬಾ ಸಂತೋಷವಾಗುತ್ತದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!