Janardhan Kodavoor/ Team KaravaliXpress
32 C
Udupi
Wednesday, March 3, 2021

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇತಿಹಾಸ ಪಠ್ಯಕ್ರಮಕ್ಕೆ ಉಪನ್ಯಾಸಕ ಪ್ರಕಾಶ್ ಶೆಟ್ಟಿರಚಿಸಿರುವ ಪೂರಕವಾದ ನೋಟ್ ಪುಸ್ತಕ ಬಿಡುಗಡೆ 

ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ಇತಿಹಾಸ ವಿಷಯದಲ್ಲಿ ಪಠ್ಯಕ್ರಮಕ್ಕೆ ಪೂರಕವಾದ ನೋಟ್ ಪುಸ್ತಕವನ್ನು ಇತಿಹಾಸ ಉಪನ್ಯಾಸಕ ಪ್ರಕಾಶ್ ಶೆಟ್ಟಿ ಬರೆದಿದ್ದು ಇದರ ಬಿಡುಗಡೆ ಸಮಾರಂಭವು ಉಡುಪಿ ಬಾಲಕಿಯರ ಪ ಪೂ ಕಾಲೇಜಿನಲ್ಲಿ ಜರುಗಿತು.

ಪುಸ್ತಕ ಮುದ್ರಣ ಪ್ರಾಯೋಜಕತ್ವವನ್ನು  ಕರ್ನಾಟಕ ಬ್ಯಾಂಕ್ ವಹಿಸಿದ್ದು ಇದರ ಮಹಾ ಪ್ರಬಂಧಕ ಮಂಜುನಾಥ್ ಭಟ್ ಬಿಡುಗಡೆಗೊಳಿಸಿ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ರುದ್ರೇಗೌಡ,ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ವಿಶ್ವನಾಥ್, ಹಿರಿಯಡ್ಕ ಪ ಪೂ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಭಟ್ ಇತಿಹಾಸ ಉಪನ್ಯಾಸಕರಾದ ನವೀನ್ ಕೊರೆಯಾ ಮಂಜುನಾಥ್ ಬಿ ಡಿ, ನಿವೃತ್ತ ಶಿಕ್ಷಕ ಸುಧಾಕರ ಶೆಟ್ಟಿ ಕೊಳ್ಕೆಬೈಲ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಉಪನ್ಯಾಸಕ ದಯಾನಂದ ಡಿ ಸ್ವಾಗತಿಸಿದರು. ಮಂಗಳೂರು ಬಲ್ಮಟ ಕಾಲೇಜಿನ ಉಪನ್ಯಾಸಕ ಸಂತೋಷ ಸಿ ನಿರೂಪಿಸಿ ಪ್ರಕಾಶ್ ಶೆಟ್ಟಿ ವಂದಿಸಿದರು.ಈ ಸಂದರ್ಭದಲ್ಲಿ ದ ಕ,ಉಡುಪಿ ಜಿಲ್ಲೆಯ 500 ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪುಸ್ತಕ ವಿತರಿಸಲಾಯಿತು. 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕುಂಜಾರುಗಿರಿಯ ಗಿರಿಬಳಗ (ರಿ) ಇದರ 32ನೆಯ ವಾರ್ಷಿಕೋತ್ಸವ

ಕುಂಜಾರುಗಿರಿಯ ಗಿರಿಬಳಗ (ರಿ) ನ 32ನೆಯ ವಾರ್ಷಿಕೋತ್ಸವವು ಕುಂಜಾರುಗುರಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ನಡೆಯಿತು.ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಭೆಯಲ್ಲಿ ಭಾಗವಹಿಸಿ, ಇಂದಿನ ಮಕ್ಕಳು ಜೀವನದಲ್ಲಿ ದಾರಿ ತಪ್ಪುತ್ತಿರುವುದು ಬೇಸರದ...

ಮಾಸ್ಟರ್ ಪ್ಲಾನ್ ಗೆ ವೇಗ, ಜನಸ್ನೇಹಿ ಆಡಳಿತಕ್ಕೆ ನಿರ್ಧಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಿರ್ಣಯ

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಕೋವಿಡ್ ಕಾರಣದಿಂದ ವಿಳಂಬವಾಗುತ್ತಿರುವ ಮಾಸ್ಟರ್ ಪ್ಲಾನಿಗೆ ವೇಗ ನೀಡಲು, ಸಾರ್ವಜನಿಕರಿಗೆ ತಮ್ಮ ಅರ್ಜಿ ಸ್ಥಿತಿಗತಿ ಮಾಹಿತಿ ನೀಡುವ ನೂತನ ಸಾಫ್ಟವೇರ್ , ಪ್ರಾಧಿಕಾ ರದ ವ್ಯಾಪ್ತಿಯಲ್ಲಿ...

ವಿಪ್ರ ಸಂಘಟನೆಗಳು ಆಶಕ್ತರು, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯ~ ವಾಸುದೇವ ಅಡೂರು

ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆಯು ಚಿಟ್ಪಾಡಿ ಶ್ರೀನಿವಾಸ ದೇವಸ್ಥಾನ ದಲ್ಲಿ ಜರುಗಿತು. ಎಸ್ ಎಸ್ ಎಲ್ ಸಿ, ಪಿ ಯು ಸಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಮುಖ್ಯ ಅತಿಥಿ...

ಕುಂಜಾರುಗಿರಿ ಕುರ್ಕಾಲು ನಿವಾಸಿ ರಾಜೀವಿ ಬಿ. ಶೆಟ್ಟಿ 

ಕುಂಜಾರುಗಿರಿ ಕುರ್ಕಾಲು ನಿವಾಸಿ ರಾಜೀವಿ ಬಿ. ಶೆಟ್ಟಿ (93 ವ.)  ಶನಿವಾರ ದಂದು ನಿಧನರಾಗಿರುತ್ತಾರೆ. ಇವರು ಸ್ವಾತಂ​ತ್ರ್ಯ ಹೋರಾಟಗಾರ ದಿ| ಕುರ್ಕಾಲು ಗಣಪಯ್ಯ ಶೆಟ್ಟರ ಮಗಳು, ಮೂಳೂರು ಬೈಲುಮನೆ ಶತಾಯುಷಿ ದಿ| ಬಾಬು ಶೆಟ್ಟಿಯವರ...
error: Content is protected !!