ಅಂಚೆ ಅಣ್ಣನಾಗಿ ಉಡುಪಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಸುಮಾರು 26 ವರ್ಷಗಳ ಸುದೀರ್ಘ ಸೇವೆ ನೀಡಿ ಸೇವಾ ನಿವೃತ್ತಿ ಹೊಂದಿದ ಶ್ರೀ ಮೋಹನ್ ಮೊಗವೀರ ಇವರನ್ನು ಅಂಚೆ ಅಧೀಕ್ಷಕ ನವೀನ್ ಚಂದರ್ ಉಪಸ್ಥಿತಿಯಲ್ಲಿ ಅಂಚೆ ಮನೋರಂಜನ ಕೂಟದ ವತಿಯಿಂದ ಬೀಳ್ಕೊಡಲಾ ಯಿತು.
ಈ ಸರಳ ಸಮಾರಂಭದಲ್ಲಿ ಅಂಚೆ ಅಧಿಕಾರಿಗಳಾದ ಕೆ ವಿ ಭಟ್, ಜಯರಾಮ್ ಶೆಟ್ಟಿ, ನವೀನ್ ವಿಎಲ್, ಉಡುಪಿ ಅಂಚೆ ಪಾಲಕ ಗುರುಪ್ರಸಾದ್, ಕೆ.ಆರ್ ಬಾಲಚಂದ್ರ ಹಾಗೂ ಎಲ್ಲಾ ಅಂಚೆ ಬಾಂಧವರು ಉಪಸ್ಥಿತಿ ಇದ್ದರು. ನರಸಿಂಹ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿ, ಉಮೇಶ್ ನಾಯಕ್ ಧನ್ಯವಾದ ವನ್ನು ನೀಡಿದರು.