ಉಡುಪಿ ಅಂಚೆ ವಿಭಾಗ~ ಅಂಚೆ ಚೀಟಿ ಪ್ರದರ್ಶನ :

ಸ್ವಾತಂತ್ರೋತ್ಸವದ ಯಶೋಗಾಥೆ.. ಅಂಚೆ ಚೀಟಿ, ವಿಶೇಷ ಅಂಚೆ ಲಕೋಟೆ, ಚಿಕಣಿ ಹಾಳೆಗಳ ಜೊತೆ –  ಅಂಚೆ ಚೀಟಿ ಪ್ರದರ್ಶನ : 
 
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಸುಸಂಧರ್ಭದಲ್ಲಿ ಸ್ವಾತಂತ್ರ್ಯ ಸಮರದ ಕಥೆ ಸಾರುವ ಅಂಚೆ ಚೀಟಿಗಳು,ವಿಶೇಷ ಲಕೋಟೆಗಳು ಹಾಗು ಅಂಚೆ ಚಿಕಣಿ ಹಾಳೆಗಳ ಪ್ರದರ್ಶನ ಸ್ತುತ್ಯರ್ಹ, ನಾವೆಲ್ಲರೂ ಅಂಚೆ ಚೀಟಿಗಳ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಕಥೆಗಳ ಅವಲೋಕನ ಮಾಡೋಣ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಅಭಿಪ್ರಾಯ ಪಟ್ಟರು. 
ಅವರು ಆಜಾದಿ ಕೀ ಅಮೃತ್ ಮಹೋತ್ಸವದ ಸಂದರ್ಭದಲ್ಲಿ  ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಉದ್ಯೋಗಿಗಳಾದ ಪೂರ್ಣಿಮಾ ಜನಾರ್ದನ್ ಹಾಗು ಅರ್ಚನಾ ಎಮ್ ಪೈಯವರ ಸಂಗ್ರಹದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಂಚೆ ಚೀಟಿ ಪ್ರದರ್ಶನ. ” ಸ್ವಾತಂತ್ರ್ಯೋತ್ಸವದ ಯಶೋಗಾಥೆ, ಅಂಚೆ ಚೀಟಿಗಳು, ವಿಶೇಷ ಲಕೋಟೆಗಳು ಹಾಗು ಅಂಚೆ ಚಿಕಣಿ ಹಾಳೆಗಳ ಜೊತೆ ಎಂಬ  ಶೀರ್ಷಿಕೆಯಲ್ಲಿ  ನಡೆದ ಅಂಚೆ ಚೀಟಿ ಪ್ರದರ್ಶನ ದಲ್ಲಿ ಅಧ್ಯಕ್ಷತೆ ವಹಿಸಿ‌ ಮಾತನಾಡಿದರು.  
ತಮ್ಮ ಸಂಗ್ರಹದ ವಿಶೇಷ ರಾಷ್ಟ್ರಧ್ವಜಗಳನ್ನು ತಂದು ಪ್ರದರ್ಶನವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಅಂಚೆ ಚೀಟಿ ಸಂಗ್ರಾಹಕ ಎಮ್ ಕೆ ಕೃಷ್ಣಯ್ಯರವರು ಭಾರತದ ರಾಷ್ಟ್ರಧ್ವಜ ನಡೆದು ಬಂದ  ಹಾದಿಯ ಬಗ್ಗೆ  ಧ್ವಜ ಸಮೇತ ವಿವರಿಸಿದರು.ಸ ಹಾಯಕ ಅಂಚೆ ಅಧೀಕ್ಷಕರಾದ ಜಯರಾಮಶೆಟ್ಟಿ ಸ್ವಾಗತಿಸಿ ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಷರಾಜ ವಿಠಲ ಭಟ್ ಪ್ರಸ್ತಾವನೆಯ ಮಾತುಗಳನ್ನು  ಆಡಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಗುರು ಪ್ರಸಾದ್ ಧನ್ಯವಾದವಿತ್ತರು.
 
 
 
 
 
 
 
 
 
 
 

Leave a Reply