ಕನ್ನಡ ಪಯಸ್ವಿನಿ ಪ್ರಶಸ್ತಿ – 2022 , ಶ್ರೀಮತಿ ರೇಖಾ ಸುದೇಶ್ ರಾವ್

ಕನ್ನಡ ಭವನ ಮತ್ತು ಗ್ರಂಥಾಲಯ ಕಾಸರಗೋಡು ಇಲ್ಲಿನ ಸಭಾಂಗಣದಲ್ಲಿ (ಕವಯತ್ರಿ, ಸಂಘಟಕಿ) ಶ್ರೀಮತಿ ರೇಖಾ ಸುದೇಶ್ ರಾವ್ ಮಂಗಳೂರು (ಅಧ್ಯಕ್ಷರು, ರಾಮ ಕ್ಷತ್ರಿಯ ಸೇವಾ ಸಂಘ ಮೂಲ್ಕಿ ಸುರತ್ಕಲ್ (ರಿ), ಇವರಿಗೆ ಸಾಹಿತ್ತಿಕ, ಸಾಮಾಜಿಕ, ಸಾಂಸ್ಕೃತಿಕ , ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ಎರಡು ದಶಕಗಳಿಂದ ಸಕ್ರೀಯವಾಗಿ ತೊಡಗಿಸಿಕೊಂಡು ಬಂದಿರುವ ಕೇರಳ ರಾಜ್ಯದ ಗಡಿನಾಡು ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ವಿಂಶತಿ ವರ್ಷಾಚರಣೆಯ ಅಂಗವಾಗಿ ದಿನಾಂಕ 26.05.2022 ಗುರುವಾರದಂದು ಗ್ರಂಥಾಲಯದ ಬಯಲು ರಂಗ ಮಂಟಪದಲ್ಲಿ ಭವ್ಯ ವೇದಿಕೆಯಲ್ಲಿ ಪ್ರತಿಷ್ಠಿತ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿ – 2022 ನೀಡಿ ಗೌರವಿಸಲಾಗಿದೆ.

ಅಂದು ವಾಮನ್ ರಾವ್ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ರಾಮ ಕ್ಷತ್ರಿಯ ಸೇವಾ ಸಂಘ ಮೂಲ್ಕಿ ಸುರತ್ಕಲ್ (ರಿ) ಸಂಘದ ವತಿಯಿಂದ ಅಧ್ಯಕ್ಷೆ ಶ್ರೀಮತಿ ರೇಖಾ ಸುದೇಶ್ ರಾವ್ ಮಂಗಳೂರು ಇವರು ದಂಪತಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ಇತ್ತು ಶುಭಾಶಯ ಕೋರಿದರು.

 
 
 
 
 
 
 
 
 
 
 

Leave a Reply