ಒಡಿಯೂರು ಶ್ರೀ ಗುರುದೇವದತ್ತಾ ಸಂಸ್ಥಾನದ  ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಷಷ್ಟ್ಯಬ್ಧ ಸಂಭ್ರಮದ ಆಚರಣೆ

ಉಡುಪಿ: ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತಾ ಸಂಸ್ಥಾನಮ್, ಶ್ರೀಗಳ ಷಷ್ಟ್ಯಬ್ಧ ಸಂಭ್ರಮದ ಆಚರಣೆಯ ಪ್ರಯುಕ್ತ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಉಡುಪಿಯಲ್ಲಿ ಕೂಡಾ ಷಷ್ಟ್ಯಬ್ಧ ಸಮಿತಿ ರಚಿಸಲಾಗಿದೆ. 
ಉಡುಪಿ ಷಷ್ಟ್ಯಬ್ಧ ಸಮಿತಿಯ ಗೌರವಾಧ್ಯಕ್ಷರಾಗಿ ನಾಡೋಜ ಡಾ| ಜಿ. ಶಂಕರ್, ಅಧ್ಯಕ್ಷರಾಗಿ ಉದ್ಯಮಿ ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಕಾರ್ಯಾಧ್ಯಕ್ಷರಾಗಿ ಶ್ರೀ ಕಡಂದಲೆ ಸುರೇಶ್ ಭಂಡಾರಿ, ಉಪಾಧ್ಯಕ್ಷರಾಗಿ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಕೆ. ಪ್ರಭಾಕರ್ ಶೆಟ್ಟಿ ಕಬ್ಯಾಡಿ, ಕೋಶಾಧಿಕಾರಿಯಾಗಿ ಶ್ರೀಮತಿ ಅಮಿತಾ ಗಿರೀಶ್, ಜೊತೆ ಕಾರ್ಯ ದರ್ಶಿಗಳಾಗಿ ಶ್ರೀಮತಿ ಚಂದ್ರಿಕಾ ಪ್ರಕಾಶ್, ಶ್ರೀಮತಿ ಯಶೋಧ ಕೇಶವ್, ಸಂಘಟನಾ ಕಾರ್ಯ ದರ್ಶಿಯಾಗಿ,  ಶ್ರೀ ಲಕ್ಷ್ಮಣ್ ಮೈಂದನ್, ಬೈಲಕೆರೆ ಇವರುಗಳನ್ನು ಆಯ್ಕೆ ಮಾಡಲಾಗಿದೆ.
ಷಷ್ಟ್ಯಬ್ಧ ಸಂಭ್ರಮದ ಅಂಗವಾಗಿ “ಜ್ಞಾನ ವಾಹಿನಿ” ಎಂಬ ವಿವಿಧ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳಲ್ಲಿ 60 ಮನೆಗಳಲ್ಲಿ ಮನೆ ಮನೆ ಭಜನೆ, 60 ಮನೆ ಸತ್ಸಂಗ, ಹನುಮಾನ್ ಚಾಲೀಸ್ ಪಠಣ, 60ಮನೆಗಳಿಗೆ ಮನೆಗೊಂದು ಗಂಧದ ಗಿಡ, 60 ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಕೊಡುಗೆ.
60 ಜನ ಜಾಗೃತಿ ಸಮಾಜ ಮುಖಿ ಮಾಹಿತಿ ಶಿಬಿರಗಳು, 60ಮಂದಿಗೆ ತುಳುಲಿಪಿ ಬರಹ ಕಾರ್ಯಾಗಾರ, 60 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ, 60 ವಿಕಲ ಚೇತನ ಮಕ್ಕಳ ಸಾಧನಾ ಶೀಲ ಪೋಷಕರ ಗುರುತಿಸುವಿಕೆ, ಗ್ರಾಮೀಣ ಕ್ರೀಡಾ ಕೂಟ ಮತ್ತು ಭಜನಾ ಸಮಾವೇಶ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಮಿತಿಯು ಹಮ್ಮಿ ಕೊಂಡಿದೆ.
 ಈ ಎಲ್ಲಾ ಸರಣಿ ಕಾರ್ಯಕ್ರಮಗಳಿಗೆ ಮಾರ್ಚ್ 9ರಂದು ಚಾಲನೆ ನೀಡಲಾಗುವುದು. ಮಾರ್ಚ್ 9ರಂದು ಅಪರಾಹ್ನ 2.00 ಗಂಟೆಯಿಂದ ಪರ್ಕಳ ಶ್ರೀ ಸುರಕ್ಷಾ ಸಭಾ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಪರಮಪೂಜ್ಯ ಒಡಿಯೂರು ಶ್ರೀಗಳು ಚಾಲನೆ ನೀಡಲಿರುವರು. ಅದೇ ಸಮಾರಂಭದಲ್ಲಿ ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್ (ರಿ) ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ, ಉಡುಪಿ ವಲಯದ 12 ಘಟಕ  ಸಮಿತಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪದಪ್ರದಾನ ಸಮಾರಂಭವು ನಡೆಯಲಿರುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸ ಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ,  ಉಪಾಧ್ಯಕ್ಷ ,ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಂಭ್ರಮ ಉಡುಪಿ ಸಮಿತಿ, ಶ್ರೀ ಕೆ. ಪ್ರಭಾಕರ ಶೆಟ್ಟಿ, ಕಬ್ಯಾಡಿ, ಪ್ರಧಾನ ಕಾರ್ಯದರ್ಶಿ, ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಂಭ್ರಮ ಉಡುಪಿ ಸಮಿತಿ, ಅಮಿತಾ ಗಿರೀಶ್, ಕೋಶಾಧಿಕಾರಿ, ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಂಭ್ರಮ ಉಡುಪಿ ಸಮಿತಿ, ಚಂದ್ರಿಕಾ ಪ್ರಕಾಶ್, ಜೊತೆ ಕಾರ್ಯದರ್ಶಿ, ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಂಭ್ರಮ ಉಡುಪಿ ಸಮಿತಿ ಸದಸ್ಯರು ​ ಉಪಸ್ಥಿತ  ರಿದ್ದರು 
 
 
 
 
 
 
 
 
 
 
 

Leave a Reply