ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯ ವೇತನಕ್ಕೆ ಆಯ್ಕೆಯಾದ ಮಣೂರು ನೇಹಾ ಹೊಳ್ಳ

ಕೋಟ: ಈ ಬಾರಿ ಶಿವಮೊಗ್ಗದ ರಂಗಾಯಣದಲ್ಲಿ ನಡೆದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ , ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಶಿಷ್ಯ ವೇತನಕ್ಕೆ ಸಂಬoಧಿಸಿದ ಸಂದರ್ಶನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ, ಉದಯೋನ್ಮುಖ ಪ್ರತಿಭೆ ಮಣೂರು ನೇಹಾ ಹೊಳ್ಳ ಆಯ್ಕೆಯಾಗಿದ್ದಾರೆ. ಇವರು ವಿದ್ವಾನ್ ಸತೀಶ್ ಭಟ್ ಮಾಳಕೊಪ್ಪ ಇವರ ಶಿಷ್ಯೆಯಾಗಿದ್ದು ,ಕಳೆದ 8 ವರ್ಷಗಳಿಂದ ಅವರ ಬಳಿ ಕಲಿಯುತ್ತಿದ್ದಾರೆ.
ಕಳೆದ ವರ್ಷ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸುಗಮ ಸಂಗೀತ ವಿಭಾಗದಲ್ಲಿ ಶಿಷ್ಯ ವೇತನಕ್ಕೆ ಆಯ್ಕೆಯಾಗಿದ್ದರು.
ಇವರು ಮಣೂರು ಡಾ.ಎಂ.ವಿ ಹೊಳ್ಳ ಹಾಗೂ ಶ್ರೀಮತಿ ಶಾರದಾ ಹೊಳ್ಳ ಇವರ ಪುತ್ರಿಯಗಿದ್ದಾರೆ.

 
 
 
 
 
 
 
 
 

Leave a Reply