ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ~ನೀಲಾವರ ಸುರೇಂದ್ರ ಅಡಿಗರಿಗೆ ಈ ಬಾರಿಯೂ ಮನ್ನಣೆ.

ಕರ್ನಾಟಕ ಸಾಹಿತ್ಯ ಪರಿಷತ್ ಮೇ ತಿಂಗಳಿನಲ್ಲಿ ರಾಜ್ಯ ಹಾಗು ಜಿಲ್ಲೆಗೆಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣಾ ಪೂರ್ವ ತಯಾರಿಯ ಕಾವುಏರುತ್ತಿದೆ.  
ಜಿಲ್ಲೆಗಳಲ್ಲಿನ ಕಸಾಪ ಅಧ್ಯಕ್ಷ ಚುಕ್ಕಾಣಿ ಹಿಡಿಯಲು ಎಲ್ಲ ಜಿಲ್ಲೆಗಳಲ್ಲಿ ಸಿದ್ಧತೆ ನಡೆಯುತ್ತಿದ್ದು, ಪ್ರಸ್ತುತ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ನೀಲಾವರ ಸುರೇಂದ್ರ ಅಡಿಗರು ಮರು ಆಯ್ಕೆ ಬಗ್ಗೆ ಆಶಯ ವ್ಯಕ್ತ ಪಡಿಸಿದ್ದಾರೆ.
ಅಡಿಗರ ಸಾಧನೆ: ವೃತ್ತಿಯಲ್ಲಿ ಅಧ್ಯಾಪಕರಾಗಿ, ಶಿಕ್ಷಣ, ಸಾಹಿತ್ಯ, ಕಲೆ, ಸಂಘಟನೆಯಲ್ಲಿ ತಮ್ಮ ಛಾಪು ಮೂಡಿಸಿದವರು. ಈ ತನಕ ದಾಖಲೆಯ  ಅರುವತ್ತೆರಡು ಪುಸ್ತಕಗಳು ಪ್ರಕಟವಾಗಿವೆ.
ಶೈಕ್ಷಣಿಕವಾಗಿ ಪಠ್ಯಪುಸ್ತಕ ರಹಿತ ಕಲಿಕೆಯ ಚಿಂತನೆ, ಅನುಷ್ಠಾನವೇ ಮೊದಲಾದ ಪ್ರಗತಿಪರ ಚಿಂತನೆಯ ಹರಿಕಾರರಿವರು. ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಸಾಹಿತಿಗಳಾಗಿ ತಮ್ಮ ಸುಲಲಿತ ಮಾತು ಹಾಗು ಸೌಜನ್ಯದಿಂದ ಎಲ್ಲರೊಂದಿಗೆ ಬೆರೆತು ಸರ್ವರಿಗೂ ಪ್ರೀತಿ ಪಾತ್ರರಾಗಿದ್ದಾರೆ.    
ಸಂಘಟಕರಾಗಿ ನಾಡಿನಾದ್ಯಂತ ಶಿಕ್ಷಕರಿಗೆ, ಸಹೃದಯರಿಗೆ ಪರಿಚಿತರು. ಇವರ ’ಕಿಟ್ಟಜ್ಜಿ ಮತ್ತು ಹವಿಸ್ಸು ಪಾತ್ರೆ’ ಈ ಪುಸ್ತಕ ಹತ್ತು ವರ್ಷಗಳ ಕಾಲ ICSE ಶಾಲೆಯ ಹತ್ತನೆಯ ತರಗತಿಗೆ ಪಠ್ಯ ಪುಸ್ತಕವಾಗಿತ್ತು.
ಬೋಧನೆ ಮತ್ತು ಕಲಿಕೆಯ ಸಾಮಗ್ರಿ ’ಹೊಸ ದಿಶೆಯ ಬೆಳಕು’ ಕೃತಿಯನ್ನು ಶಿಕ್ಷಕರಾಗಿ ಸಿದ್ಧ ಪಡಿಸಿದ್ದಾರೆ. ಪಠ್ಯ ಪುಸ್ತಕ ರಚನಾಸಮಿತಿ ಸದಸ್ಯರಾಗಿದ್ದಾರೆ.  1 ಮತ್ತು 7ನೆಯ ತರಗತಿ ಕನ್ನಡ ಭಾಷೆ ಪುಸ್ತಕ ರಚನಾಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ
ನಾಕ್ಕೊಂದ್ಲಿ ನಾಲ್ಕು’ ಮುಕ್ತ ಚೌಪದಿಗಳ ಧ್ವನಿಸಾಂದ್ರಿಕೆ ಕೆದ್ಲಾಯರ ಸಂಗೀತ ಸಂಯೋಜನೆಯಲ್ಲಿ ಹೊರಬಂದಿದೆ. ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿದ್ದಾರೆ. ‘ಕನ್ನಡ ಕಟ್ಟಾಳು’, ‘ಡಾ. ರಾಧಾಕೃಷ್ಣನ್’, ‘ಜಿ. ಪಿ. ರಾಜರತ್ನಂ’ ಇಂತಹ  ಅನೇಕ ಪ್ರಶಸ್ತಿಗಳು ಇವರ ಮುಡಿಗೇರಿವೆ. 
ರಾಜ್ಯಮಟ್ಟದ ಅತ್ಯುತ್ತಮ ಕನ್ನಡ ಭಾಷಾ ಬೋಧಕ ಪ್ರಶಸ್ತಿಗೆ  ಭಾಜನರಾಗಿರುವ ಇವರಿಗೆ 2018ರಲ್ಲಿ ರಾಜ್ಯ ಸರಕಾರ ‘ವಿಶೇಷ ಶಿಕ್ಷಕ ರಾಜ್ಯಪ್ರಶಸ್ತಿ’ ನೀಡಿ ಗೌರವಿಸಿದೆ.
ತನ್ನ ಅಧಿಕಾರದ ಅವಧಿಯಲ್ಲಿ ರಾಜ್ಯ ಹಾಗು ಜಿಲ್ಲೆಯಾದ್ಯಂತ ಸಂಚರಿಸಿ, ಹಿರಿಯ~ ಕಿರಿಯ ಸಾಹಿತಿಗಳನ್ನು ಭೇಟಿಯಾಗಿ,  ಕನ್ನಡ ನಾಡು ನುಡಿಗೆ ವಿಶೇಷ ಸೇವೆ ಸಲ್ಲಿಸಿದವರನ್ನು ಗುರುತಿ ಸುವ ಕಾಯಕವನ್ನು ನಿರಂತರ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ತಾಲೂಕು, ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. 
~ಉಡುಪಿ ಜಿಲ್ಲಾಧ್ಯಕ್ಷನಾಗಿ ಮರು ಆಯ್ಕೆಯಾಗಿ, ಜಿಲ್ಲೆಗೊಂದು ಕನ್ನಡ ಭವನ ಕಟ್ಟುವ ಮಹದಾಸೆಯನ್ನು ಹೊತ್ತಿರುವವನು ನಾನು. ಈಗಾಗಲೇ ನೂತನ ಕಟ್ಟಡ ಕಟ್ಟಲು ಬೇಕಾಗುವ ಜಾಗ ಹಾಗು ದಾಖಲೆಗಳು ಸಿದ್ಧವಾಗಿದೆ. ಸಂಪನ್ಮೂಲ ಕ್ರೋಢೀಕರಣಕ್ಕೂ ನನ್ನ ಇತಿಮಿತಿಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಿ, ಆಯ್ಕೆಯಾದ ಎರಡು ತಿಂಗಳೊಳಗೆ ಕನ್ನಡ  ಭವನ ನಿರ್ಮಾಣಕ್ಕೆ ಚಾಲನೆ ನೀಡುವ ಯೋಜನೆಯನ್ನು ಈಗಾಗಲೇ ರೂಪಿಸಿ ಕೊಂಡಿದ್ದೇನೆ.~ನೀಲಾವರ ಸುರೇಂದ್ರ ಅಡಿಗ.
 
 
 
 
 
 
 
 
 
 
 

Leave a Reply