Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಉಡುಪಿ ಅಡುಗೆಗೆ ಪ್ರಥಮ ಸರ್ಕಾರಿ ಗೌರವ!

ಜಾಗತಿಕವಾಗಿ ಮನ್ನಣೆಗೆ ಪಾತ್ರವಾಗಿರುವ ಉಡುಪಿ ಅಡುಗೆಗೆ ಇದೇ ಮೊದಲ ಬಾರಿಗೆ ಸರ್ಕಾರಿ ಗೌರವವೊಂದು ಲಭಿಸಿದೆ . ಉಡುಪಿ ಜಿಲ್ಲೆ ರಚನೆಯಾಗಿ 25 ವರ್ಷಗಳ ಕಾಲವೂ ಉಡುಪಿ ಅಡುಗೆ ಕ್ಷೇತ್ರವನ್ನು ಯಾವುದೇ ಸರ್ಕಾರಿ ಗೌರವಗಳಿಗೆ ಯಾರೊಬ್ಬರೂ ಪರಿಗಣಿಸು ಗೋಜಿಗೇ ಹೋಗಿರಲಿಲ್ಲ . ಜಿಲ್ಲೆ ರಜತೋತ್ಸವವನ್ನು ಆಚರಿಸುವ ವರ್ಷದಲ್ಲಾದರೂ ಈ ಬೇಸರ ನೀಗಿಸುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಿರುವುದಕ್ಕೆ ಅಭಿನಂದನೆ ಹೇಳಲೇ ಬೇಕಾಗಿದೆ .

ಹಿರಿಯ ಪಾಕತಜ್ಞ ನಾರಾಯಣ ಬಿಳಿರಾಯರನ್ನು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ . ಈ ಮೂಲಕ ಈ ಕ್ಷೇತ್ರದಲ್ಲಿ ದುಡಿಯುತ್ತಾ ಉಡುಪಿ ಅಡುಗೆಯ ಶುಚಿ ರುಚಿಯನ್ನು ಜಗತ್ತಿಗೆ ಉಣಬಡಿಸುತ್ತಿರುವ ಅಸಂಖ್ಯ ಜನರ ಶ್ರಮವನ್ನು ಅಂತೂ ಸರ್ಕಾರ ಗುರುತಿಸಿರುವುದು ಔಚಿತ್ಯಪೂರ್ಣವೇ ಆಗಿದೆ . ಇದಕ್ಕಾಗಿ ಉಡುಪಿ ಜಿಲ್ಲಾಡಳಿತ , ಉಡುಪಿಯ ಶಾಸಕ ಜೆ ರಘುಪತಿ ಭಟ್ಟರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಉಡುಪಿ ಅಡುಗೆಯವರ ಸಂಘ ಸಲ್ಲಿಸುತ್ತದೆ .

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!