ಹಂಪಿ ವಿವಿ ನಾಡೋಜ ಪದವಿಗೆ ನೇತ್ರ ತಜ್ಞ ಕೃಷ್ಣ ಪ್ರಸಾದ್ / ಉದ್ಯಮಿ ಜಗದೀಶ್ , ಆಯ್ಕೆ

ಬಳ್ಳಾರಿ: ವಿಜಯನಗ ಜಿಲ್ಲೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ಈ ವರ್ಷದ ನುಡಿ ಹಬ್ಬಕ್ಕೆ ವಿಜಯಪುರ ಜಿಲ್ಲೆ ಹೊನ್ನವಾಡ ಗ್ರಾಮದ ಉದ್ಯಮಿ ಜಗದೀಶ ಎಸ್.ಗುಡಗುಂಟಿ ಹಾಗೂ ಉಡುಪಿಯ ನೇತ್ರ ತಜ್ಞ ಡಾ.ಕೆ. ಕೃಷ್ಣಪ್ರಸಾದ್‌ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ವಿವಿಯ ಕುಲಪತಿ ಡಾ.ಸಾ.ಚಿ.ರಮೇಶ್ ಬಿಡುಗಡೆ ಮಾಡಿದ್ದು. ವಿವಿಯ 29ನೇ ನುಡಿಹಬ್ಬ ಏ. 9ರಂದು ನಡೆಯಲಿದ್ದು, ಅಂದು ಸಂಜೆ 5.30ಕ್ಕೆ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಲಿರುವ ನುಡಿಹಬ್ಬದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನಾಡೋಜ ಪದವಿ ಪ್ರದಾನ ಮಾಡುವರು.

ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಹತ್ತು ಜನರಿಗೆ ಡಿ.ಲಿಟ್‌ ಪದವಿ ಸೇರಿದಂತೆ ಎಂ.ಎ. ಪಿಎಚ್‌.ಡಿ., ಡಿಪ್ಲೋಮಾ ಕೋರ್ಸ್‌ ಮುಗಿಸಿರುವ ಒಟ್ಟು 365 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

 
 
 
 
 
 
 
 
 

Leave a Reply