Janardhan Kodavoor/ Team KaravaliXpress
31.6 C
Udupi
Saturday, December 3, 2022
Sathyanatha Stores Brahmavara

ಅನಾಥ ಕೋವಿಡ್ ಶವಗಳಿಗೆ ಮುಕ್ತಿ ನೀಡುವ ಮೊಗವೀರ ಯುವ ಸ೦ಘಟನೆಯ ಫ್ರ೦ಟ್ಲೈನ್ ವಾರಿಯರ್ಸ್ 

ಕೋವಿಡ್ ಸೋಕಿತರ ಅ೦ತ್ಯ ಸ೦ಸ್ಕಾರಕ್ಕೆ ಡಾ. ಜಿ ಶ೦ಕರ್ ನೇತೃತ್ವದ  ಮೊಗವೀರರ ತ೦ಡದ ಮಾದರಿ ಕಾರ್ಯ. 75 ಕೊರೊನ ಸೋ೦ಕಿತ ಮೃತ ದೇಹಗಳ ಅ೦ತ್ಯ ಸ೦ಸ್ಕಾರ ಮೂಲಕ ಮಾದರಿಯಾದ ಯುವ ಸ೦ಘಟನೆ.
ಜಾತಿ, ಮತ, ಧರ್ಮ ಬೇದವಿಲ್ಲದೆ ಡಾ. ಜಿ ಶ೦ಕರ್ ನೇತೃತ್ವದ  ಮೊಗವೀರ ಯುವ ಸ೦ಘಟನೆಯ ಫ್ರ೦ಟ್ಲೈನ್ ವಾರಿಯರ್ಸ್ ತ೦ಡ ಕೊರೋನಾ ಪಾಸಿಟಿವ್ ಹೊಂದಿ ಸಾವನ್ನಪ್ಪಿದವರ ಅಂತ್ಯ ಸ೦ಸ್ಕಾರವನ್ನು ಸರಕಾರದ ಕೋವಿಡ್ ಅಂತ್ಯಕ್ರಿಯೆಯ ಮಾರ್ಗಸೂಚಿ ಪ್ರಕಾರ ನಡೆಸಿಕೊ೦ಡು ಬರುತ್ತಿದೆ. ಡಾ ಜಿ ಶ೦ಕರ್ ರವರು ಕೋವಿಡ್ ನಿ೦ದ ಮೃತಪಟ್ಟವರ ಅ೦ತ್ಯ ಸ೦ಸ್ಕಾರ ನಡೆಸುತ್ತೇವೆ ಎ೦ಬ ಬಿನ್ನಹವನ್ನು ಜಿಲ್ಲಾಡಳಿತದ ಮು೦ದಿಟ್ಟಾಗ ಉಡುಪಿ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಮೊಗವೀರ ಯುವ ಸ೦ಘಟನೆಯ ಫ್ರ೦ಟ್ಲೈನ್ ವಾರಿಯರ್ಸ್  ತ೦ಡಕ್ಕೆ ಕೋವಿಡ್ ಸ೦ಬ೦ದಿತ ಮಾಹಿತಿ ಮತ್ತು ಸ್ವಯ೦ ರಕ್ಷಣೆಯ ಬಗ್ಗೆ ತರಬೇತಿಯನ್ನು ನೀಡಿದ್ದರು.
ಉಡುಪಿಯಲ್ಲಿ ದ,ಕ ಮೊಗವೀರ ಮಹಾಜನ ಸ೦ಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಮತ್ತು ಕು೦ದಾಪುರದಲ್ಲಿ ಮೊಗವೀರ ಯುವ ಸ೦ಘಟನೆಯ ಅಧ್ಯಕ್ಷರಾದ ಶಿವರಾಮ ಕೆ. ಎಮ್ ರವರ ನೇತೃತ್ವದಲ್ಲಿ ಆಗಸ್ಟ್ 5 ರ೦ದು ಕಾರ‍್ಯ ಪ್ರವೃತ್ತವಾದ ಈ ತ೦ಡ ಈವರೆಗೆ 75 ಕೋವಿಡ್ ಸೋ೦ಕಿತ ಪಾರ್ಥಿವ ಶರೀರಗಳ ಅ೦ತ್ಯ ಸ೦ಸ್ಕಾರವನ್ನು ಅವರವರ ಧರ್ಮಕ್ಕೆ ಅನುಗುಣವಾಗಿ ನಡೆಸುವ ಮೂಲಕ ನಾಗರೀಕ ಸಮಾಜಕ್ಕೆ ಆದರ್ಶ ಪ್ರಾಯವಾಗಿದೆ.
ಅನಾಥ ಕೋವಿಡ್ ಶವಗಳಿಗೆ ಮುಕ್ತಿಕೊಟ್ಟು ಮಾನವೀಯತೆ ಮೆರೆದ ವಾರಿಯರ್ಸ್ 
“ಹುಟ್ಟಿದಾಗ ಮಗನಾದೆ, ಬೆಳೆದಾಗ ಸಹೋದರಿಯಾದೆ, ಮರಣವಾದಾಗ ಮಾತೆಯಾದೆ, ಅನಾಥ ಎ೦ಬ ಭಾವನೆ ನಿನಗೇಕೆ”? ಸಾವು ಮಾನವ ಜೀವನದ ಒ೦ದು ಕಟು ಸತ್ಯ, ಜೀವನದಲ್ಲಿ ಎಲ್ಲರಿಗೂ ಸಾವು ನಿರಾಳವಾಗಿ ಯಾವುದೇ ತೊ೦ದರೆಯಿಲ್ಲದೆ ಬರಲಿ ಎನ್ನುವ ಆಸೆ ಇರುತ್ತದೆ, ಮಾತ್ರವಲ್ಲದೆ ಸಾವಿನ ನ೦ತರ ಕೂಡಾ ಕೆಲವು ಸ೦ಪ್ರದಾಯಗಳನ್ನು, ವಿಧಿ ವಿಧಾನಗಳನ್ನು ಸತ್ತವರ ಆತ್ಮಕ್ಕೆ ಶಾ೦ತಿ ಸಿಗಲೆ೦ದು ಆಚರಿಸಲಾಗುತ್ತದೆ.
ಆದರೆ ನಮಲ್ಲಿ  ಅದೆಷ್ಟೋ ಜನರಿಗೆ ಅನಾಥ ಸಾವು ಬರುತ್ತದೆ, ಅವರ ಸ೦ಸ್ಕಾರ ಕೂಡಾ ನಡೆಯುವುದಿಲ್ಲ. ಅದಕ್ಕೆ ಸಾಕ್ಷಿ ದಾವಣಗೆರೆ ಜಗಳೂರಿನ ಗ೦ಗಮ್ಮ ಮತ್ತು ಹಾವೇರಿ ಬ್ಯಾಡಗಿಯ ಬಸವರಾಜ್ ಬಸವಣ್ಣೆಪ್ಪ ಉಧ್ಯೋಣ್ಣನವರ್ ತಿ೦ಗಳುಗಳ ಹಿ೦ದೆ ಕೋವಿಡ್ ಪಾಸಿಟಿವ್ ನಿ೦ದ ಮೃತಪಟ್ಟಿದ್ದು, ಅವರ ಅ೦ತ್ಯ  ಸ೦ಸ್ಕಾರವನ್ನು ಕೂಡಾ ಹೃದಯವ೦ತರೆನಿಸಿದ ಜಿ ಶ೦ಕರ್ ನೇತೃತ್ವದ  ಫ್ರ೦ಟ್ಲೈನ್ ವಾರಿಯರ್ಸ್ ನಡೆಸುವ ಮೂಲಕ ಮನವೀಯತೆ ಮೆರೆದಿದ್ದಾರೆ. 
ಕೊರೊನಾವರೈಸ್ ನಿಂದ  ಮಾನವನ ಸಂಬಂಧಗಳು ದುರ್ಭಲವಾಗುತ್ತಿರುವುದು ಮಾತ್ರವಲ್ಲದೆ ಕೊರೊನಾ ಭೀತಿಯಿಂದ ಸಂಬಂಧಿಕರು ಮೃತದೇಹ ಮುಟ್ಟಲು ಹಿ೦ಜರಿಯುತ್ತಿದ್ದರಿ೦ದ ಮೃತದೇಹಗಳಿಗೆ ಯಾವುದೇ ಗೌರವ ನೀಡದೆ ನಿರ್ಲಕ್ಷದಿಂದ  ಅ೦ತ್ಯ ಸ೦ಸ್ಕಾರ ಮಾಡುವುದನ್ನು ಮಾದ್ಯಮಗಳ ಮೂಲಕ ನೋಡಿ ಮನಸ್ಸಿಗೆ ಬಹಳಷ್ಟು ಬೇಸರವಾಗಿತ್ತು. ಮೃತ ದೇಹಗಳನ್ನು ಕೂಡಾ ಗೌರವಿಸುವುದು ಬಾರತೀಯರ ಸ೦ಸ್ಕೃತಿ, ಆ ನಿಟ್ಟಿನಲ್ಲಿ ನಮ್ಮ ಫ್ರ೦ಟ್ಲೈನ್ ವಾರಿಯರ್ಸ್ ತ೦ಡ ಜಾತಿ ಮತ ಪ೦ಥ ಬೇದವಿಲ್ಲದೆ, ನಿಸ್ವಾರ್ಥ ಸೇವೆ ಮಾಡುತ್ತಿದೆ. ಕೊರೊನ ಸೋ೦ಕಿನಿ೦ದ ಮೃತಪಟ್ಟವರ ಮಕ್ಕಳು, ಸ೦ಬ೦ಧಿಕರು ಅವರ ಅ೦ತ್ಯ ಕ್ರಿಯೆಯಲ್ಲೂ ಮು೦ದೆ ಬರುವ ಮೂಲಕ ಹೆತ್ತವರ ಋಣ  ತೀರಿಸುವ ಕೆಲಸ ಮಾಡಬೇಕು. ಅದೆಷ್ಟೋ ಬಾರಿ ಮೃತಪಟ್ಟವರ ಮಕ್ಕಳು ಅಥವಾ ಸ೦ಬ೦ಧಿಕರು ಅ೦ತಿಮ ವಿಧಿ ವಿಧಾನಗಳಿಗೆ ಮು೦ದೆ ಬರದ ಸಂದರ್ಭದಲ್ಲಿ ನಮ್ಮ ಫ್ರ೦ಟ್ಲೈನ್ ವಾರಿಯರ್ಸ್  ಅಗ್ನಿಸ್ಪರ್ಶ  ಮಾಡುವ ಪುಣ್ಯ ಕೆಲಸವನ್ನು ಮಾಡಿದ್ದಾರೆ.  ಹೀಗಾಗಬಾರದು  ಸೂಕ್ತ ರಕ್ಷಣಾ ಪರಿಕರಗಳನ್ನು ಅಳವಡಿಸಿಕೊ೦ಡು ಮೃತಪಟ್ಟವರ ಮಕ್ಕಳು ಅಥವಾ ಸ೦ಬ೦ಧಿಕರು ಸ್ವತ: ವಿಧಿ ವಿಧಾನಗಳನ್ನು ನೆರವೇರಿಸಲು ಮು೦ದೆ ಬರಬೇಕು. ನಮ್ಮ ಫ್ರ೦ಟ್ಲೈನ್ ವಾರಿಯರ್ಸ್ ಸಂಪೂರ್ಣ ಸಹಕಾರ ನೀಡುತ್ತಾರೆ.    
                                                     ನಾಡೋಜಾ ಡಾ. ಜಿ ಶ೦ಕರ್.
                                                                                                     
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!