ಮೊಬೈಲ್ ಮಾಕ್ರೋ ಫೋಟೋಗ್ರಫಿಯತ್ತ ಯುವ ಜನರ ಚಿತ್ತ~ ಪೂರ್ಣಿಮಾ ಜನಾರ್ದನ್

ಪ್ರಕೃತಿ ಎಂಬುದು ವಿಸ್ಮಯದ ಒಡಲು. ಕೌತುಕದ ಕಡಲು. ಊಹೆಗೂ ನಿಲುಕದ, ಕಲ್ಪನೆಗೂ ಸಿಲುಕದ ಅಪಾರ ಜೀವ ಜಂತುಗಳ ತವರೂರು ಈ ನಿಸರ್ಗ ಮಾತೆ. ಇಂತಹ ಸಹಜ ಸೌಂದರ್ಯವನ್ನು ನೋಡಿ ಅದರ ಸವಿ ಸವಿಯುವುದಲ್ಲದೆ ಕಂಡದ್ದನ್ನು ಸೆರೆ ಹಿಡಿದು ಅದರ ಅಂದವನ್ನು ಪ್ರಕೃತಿ ಪ್ರಿಯರಿಗೆ ಹಂಚಲು, ಅದರ ವಿಶೇಷತೆಯನ್ನು ಅರುಹಲು ಮೊಬೈಲ್ ಛಾಯಾಗ್ರಹಣ ಬಲು ಆಪ್ತ ಕ್ಷೇತ್ರ.
ಒಬ್ಬ ಅತ್ಯುತ್ತಮ ಛಾಯಾಗ್ರಾಹಕ ತಾನೊಬ್ಬನೇ ಅದರ ಸವಿ ಸವಿಯುವುದಲ್ಲದೇ ಆಸಕ್ತ ಇತರರಿಗೂ ಅದನ್ನು ಹಂಚುತ್ತಾನೆ‌. ಇತರರ ಸಂತಸಕ್ಕೆ ಕಾರಣನಾಗುತ್ತಾನೆ. ತನ್ನ ಚಿತ್ರಗಳ ಮೂಲಕ ವಿಚಿತ್ರ  ಜೀವಿಗಳ ಅಧ್ಯಯನಕ್ಕೊಂದು ವೇದಿಕೆ ಕಲ್ಪಿಸುತ್ತಾನೆ‌. ಅಂತಹ ಒಂದು ವಿಶೇಷ  ಪ್ರಯತ್ನ ಉದಯೋನ್ಮುಖ  ಮೊಬೈಲ್ ಛಾಯಾಗ್ರಾಹಕ  ಲಕ್ಮೀಶ ಆಚಾರ್ಯ, ಕೊರಂಗ್ರಪಾಡಿ.
 
 ತಮ್ಮ ಮೊಬೈಲ್‌ ಮೂಲಕ ಒಂದಷ್ಟು ವಿಶೇಷ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಮಾಕ್ರೋ ಫೋಟೋಗ್ರಫಿ ಎಂಬ ಈ ನೂತನ ಛಾಯಾಗ್ರಹಣ ಕ್ಷೇತ್ರ ಇದೀಗ ಯುವಕರಿಗೆ ಅಚ್ಚುಮೆಚ್ಚು. ವಿವಿಧ ವರ್ಣಗಳಲ್ಲಿ, ವಿಧ ವಿಧ  ಆಕಾರಗಳಲ್ಲಿ ಪುಟ್ಟ ಪುಟ್ಟ ಜೀವ ಜಂತುಗಳ ಕಾರ್ಯವೈಖರಿಯ ಮೊಬೈಲ್ ಫೋಟೋಗಳನ್ನು ನಾವಿಲ್ಲಿ ಕಾಣಬಹುದು.
ಒಂದಷ್ಟು ನೆರಳು ಬೆಳಕಿನ ಆಟದೊಂದಿಗಿನ ಪ್ರತಿಯೊಂದು ಛಾಯಾಚಿತ್ರಗಳು ಮನ ಸೆಳೆಯುವಂತಿವೆ. ಇಂತಹ ವೈಚಿತ್ರಗಳನ್ನು  ಕ್ಯಾಮರಾ ಕಂಗಳಲ್ಲಿ ಸೆರೆ ಹಿಡಿಯಲು ಸೌಂದರ್ಯ ಪ್ರಜ್ಞೆ, ಅಪಾರ ತಾಳ್ಮೆ, ಅಪರಿಮಿತ ಶ್ರದ್ಧೆಯೊಂದಿಗೆ ಚಾತುರ್ಯವೂ ಇರಬೇಕು.
ಎಲ್ಲವೂ ಮೇಳೈಸಿದಾಗಷ್ಟೇ ಮನ ಮುಟ್ಟುವ ಇಂತಹ ಚಿತ್ರಗಳು ಸಾಧ್ಯ ಇದೀಗ ಒಂದು ಸುತ್ತು ಮಾಕ್ರೋ ಫೋಟೋಗ್ರಫಿಯ ಫೋಟೋಗಳತ್ತ..  ಬನ್ನಿ
 
 
 
 
 
 
 
 
 

Leave a Reply