Janardhan Kodavoor/ Team KaravaliXpress
26.6 C
Udupi
Sunday, November 27, 2022
Sathyanatha Stores Brahmavara

ಕೊಂಕಣಿ ಭಾಷೆ ಲಿಪಿ ಸಂಶೋಧನೆಯಲ್ಲಿ ಯಶಸ್ಸು ಸಾಧಿಸಿದ ವಿದ್ಯಾಥಿ೯​ ​ರೊನಾನ್ ಲೂವಿಸ್

ಕೊಂಕಣಿ ಭಾಷೆಯು ನಮ್ಮ ದೇಶದ 22ನೇ ಶೆಡ್ಯೂಲ್ ಭಾಷೆಯಲ್ಲಿ ಪ್ರಮುಖವಾಗಿದೆ.​ ​ದೇಶದಲ್ಲಿ 2011 ನೇ ಜನಗಣತಿ ಪ್ರಕಾರ 2.3 ಮಿಲಿಯನ್ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಮುಖ್ಯವಾಗಿ ಕನಾ೯ಟಕ, ಮಹಾರಾಷ್ಟ್ರ, ಕೇರಳ, ಗುಜರಾತ್, ಡಿಯೂ, ಡಾಮನ್, ನಗರಹವೇಲಿಯ​ಲ್ಲಿ   ಈ ಭಾಷೆಯನ್ನು ಮಾತನಾಡುವ ಹೆಚ್ಚಿನ ಜನರಿದ್ದಾರೆ.​ ​

ಆದರೆ ಈ ಭಾಷೆಗೆ ನಿದಿ೯ಷ್ಟವಾದ ಲಿಪಿ ಇಲ್ಲ ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ.​ ​ಈ ನಿಟ್ಟಿನಲ್ಲಿ ಉಡುಪಿಯ 13 ವಷ೯ದ ವಿದ್ಯಾಥಿ೯ ರೊನಾನ್ ಲೂವಿಸ್ ಈ ಬಗ್ಗೆ ಕಳೆದ ಒಂದು ವಷ೯ದ ನಿರಂತರ ಅಧ್ಯಯನ, ಸಂಶೋಧನೆ ನಡೆಸಿ ತನ್ನದೇ ಆದ ರೀತಿಯಲ್ಲಿ ಲಿಪಿ ಕಂಡುಹಿಡಿದಿದ್ದಾನೆ.​ ಉಡುಪಿ ಬ್ರಹ್ಮಗಿರಿ ನಿವಾಸಿ ರೋಶನ್ ಹಾಗೂ ಶೈಲಾ ಲೂವಿಸ್ ದಂಪತಿಗಳ ಪುತ್ರನಾದ ರೊನಾನ್ 8ನೇ ತರಗತಿಯಲ್ಲಿ ಸೈoಟ್ ಮೆರೀಸ್ ಶಾಲೆಯಲ್ಲಿ ಓದುತ್ತಿದ್ದಾನೆ.
ಮೊದಲಿನಿಂದಲೂ ಸಂಶೋಧನೆಯಲ್ಲಿ ಆಸಕ್ತಿಯಿರುವ ಇತನಿಗೆ ತಂದೆ ತಾಯಿಯ ಪೂಣ೯ ಬೆಂಬಲದ ಫಲವಾಗಿ ಈ ಲಿಪಿ ತಯಾ ರಿಸಲು ಸಾಧ್ಯವಾಗಿದೆ.​ ​ಕಳೆದ 2019 ರಲ್ಲಿ ಪ್ರಾರಂಭವಾದ ಈ ಕಾಯ೯ ಜುಲೈ -2020ರಲ್ಲಿ ಮುಗಿದಿದೆ. ಇದಕ್ಕಾಗಿ ಜಗತ್ತಿನ ಬೇರೆ ಬೇರೆ ಸುಮಾರು 20ಕ್ಕೂ ಅಧಿಕ ಭಾಷೆಗಳ ಲಿಪಿಗಳನ್ನು ಜಾಲತಾಣದ ಮೂಲಕ ಅಧ್ಯಯನ ನಡೆಸಿ ಈ ಕೊಂಕಣಿ ಲಿಪಿ ತಯಾರಿಸಲಾಗಿದೆ.​ ಈಗಾಗಲೇ ಸ್ವರ ಮತ್ತು ವ್ಯಂಜನ ಗಳು ಒತ್ತಕ್ಷರ ಸಹಿತ ರಚಿಸಲಾಗಿದ್ದು, ಇದನ್ನು ಬಳಸಿ ಪದಗಳನ್ನು ರಚಿಸಬಹುದಾಗಿದೆ.
ಈ ಭಾಷೆಯು ಇತನ ಮಾತೃ ಭಾಷೆಯಾದ ಕಾರಣ ಭಾಷೆಗೆ ಸರಿಹೊಂದುವ ಲಿಪಿ ತಯಾರಿಸಲಾಗಿದೆ.​ ಈ ಸಂಶೋಧನೆಯನ್ನು ಸಕಾ೯ರಕ್ಕೆ ಕೊಂಕಣಿ ಅಕಾಡೆಮಿ ಮೂಲಕ ಕಳುಹಿಸಲಾಗುವುದು ಎಂದು ಇತನ ಪೋಷಕರು ಹೇಳಿದ್ದಾರೆ. ರೀತಿಯ ಸಂಶೋಧನೆಯಲ್ಲದೆ ಬಹುಮುಖ ಪ್ರತಿಭೆಯ ರೊನಾನ್ ಉತ್ತಮ ಈಜುಪಟು, ಸ್ಕೆಟಿoಗ್,​ ​ಕೂಡ ಮಾಡುತ್ತಾನೆ. ಈಜಿನಲ್ಲಿ ವಲ್ಡ್ ರೆಕಾಡ್೯ ಮಾಡಲು ತಯಾರಿ ನಡೆಸುತ್ತಿದ್ದಾನೆ.​ ಪರಿಸರದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಈತ ಸರಿ ಸುಮಾರು 10 ಸಾವಿರ ಗಿಡ ನೆಟ್ಟಿದ್ದಾನೆ.
ಈತನ ಈ ಸಾಧನೆಗೆ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಸಹಿತ ಹಲವಾರು ಗಣ್ಯರು ಸನ್ಮಾನಿಸಿದ್ದಾರೆ.​ ಈ ಲಿಪಿಯ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಲು ಎಲ್ಲರ ಪ್ರೋತ್ಸಾಹ ಅಗತ್ಯವಿದೆ.​ ​ಈತನ ಪ್ರತಿಭೆಯನ್ನು ಸಕಾ೯ರ ಗುರುತಿಸಿ ಮಾಗ೯ದಶ೯ನ ಮಾಡಿದರೆ ಈತ ಉತ್ತಮ ಸಂಶೋಧಕರಾಗಬಹುದು.
ರಾಘವೇಂದ್ರ ಪ್ರಭು,ಕವಾ೯ಲು
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!