ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಹಾಗೂ ಮೌಲ್ಯ ಸ್ವಾಮಿ ಅವರಿಗೆ “ಡಾ. ದಿನಕರ ದೇಸಾಯಿ ಕಾವ್ಯ ಪುರಸ್ಕಾರ”

ಅಂಕೋಲಾ :ಪ್ರಸಿದ್ಧ ಕವಿ ಡಾ. ದಿನಕರ ದೇಸಾಯಿ ಅವರ ಹೆಸರಿನಲ್ಲಿ ಅಂಕೋಲದ ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನವು ಕಳೆದ ನಲವತ್ತೊಂದು ವರ್ಷಗಳಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಕೊಡಮಾಡುವ ರಾಷ್ಟ್ರಮಟ್ಟದ ‘ದಿನಕರ ದೇಸಾಯಿ ಕಾವ್ಯ ಪುರಸ್ಕಾರ’ವನ್ನು ಈ ವರ್ಷ ಉಡುಪಿಯ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಅವನು ಹೆಣ್ಣಾಗಬೇಕು’ ಹಾಗೂ ಮೈಸೂರಿನ ಮೌಲ್ಯ ಸ್ವಾಮಿಯವರ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’ ಕೃತಿಗಳಿಗೆ ಜಂಟಿಯಾಗಿ ಲಭಿಸಿದೆ.

ಡಾ ಕಾತ್ಯಾಯಿನಿ ಕುಂಜಿಬೆಟ್ಟು ಅವರು ಪ್ರಸ್ತುತ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.

ಕಾವ್ಯ ಪುರಸ್ಕಾರದ ಒಟ್ಟೂ ಮೊತ್ತ ರೂಪಾಯಿ ಇಪ್ಪತ್ತೈದು ಸಾವಿರವಾಗಿದ್ದು, ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಬರುವ ನವೆಂಬರ ತಿಂಗಳಲ್ಲಿ ಅಂಕೋಲೆಯಲ್ಲಿ ಜರುಗಲಿದೆ ಎಂದು ಪ್ರತಿಷ್ಠಾನದ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply