ಇತ್ತೀಚೆಗೆ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ “ಕೊಬುಡೊ ಬುಡೊಕಾನ್ ಕರಾಟೆ ಡೊ ಎಸೋಶಿಯೇಶನ್ ಕರ್ನಾಟಕ” ವತಿಯಿಂದ “5ನೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಾಕೂಟ”ದಲ್ಲಿ ಭಾಗವಹಿಸಿ 5 ಪ್ರಥಮ, 12 ದ್ವಿತೀಯ, 4 ತ್ರಿತೀಯ ಬಹುಮಾನ ಗಳಿಸಿದ “ಕೆ.ಬಿ.ಕೆ ಕುರ್ಕಾಲು ಡೊಜೊ” ಇದರ ವಿದ್ಯಾರ್ಥಿಗಳಾದ ಧನುಶ್, ಅವಿಶ್, ಆದಿತ್ಯ, ಯತಿನ್, ಮನೀಶ್, ನಿಹಾಲ್, ಪ್ರೀತಂ, ಮನ್ವಿತ್, ಶ್ರೀವತ್ಸ, ಮೋಕ್ಷ್, ತನಿಶ್ಕ್, ರೈನರ್, ಆತ್ಮಿಕ್, ಅಮಯ್, ಸ್ರುಜನ್, ಶರಣ್ಯ ಇವರು ಸಂಸ್ಥೆಯ ಶಿಕ್ಷಕರಾದ ಸೂರಜ್ ಹಾಗೂ ಹಿರಿಯ ಶಿಕ್ಷಕರಾದ ಶಿಹಾನ್ ಹರ್ಷ ಭಾಗವತ್ ರವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಸಮಯದಲ್ಲಿ ವಿಜೇತರನ್ನು ಕುರ್ಕಾಲು ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶ್ರೀ ಭುವನೇಶ್ ಪೂಜಾರಿ ಹಾಗೂ ಸದಸ್ಯರಾದ ಶ್ರೀ ಮಹೇಶ್ ಶೆಟ್ಟಿ ಯವರು ಅಭಿನಂದಿಸಿದರು.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.