‘ಆಸ್ಕರ್’ನತ್ತ ಕಾಂತಾರ!

ಇತ್ತೀಚಿಗೆ ಪ್ಯಾನ್ ಇಂಡಿಯಾದಲ್ಲಿ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಆಸ್ಕರ್ ರೇಸ್ ನಲ್ಲಿ ಸ್ಥಾನ ಪಡೆದುಕೊಂಡಿದ್ದು ಈ ಬಗ್ಗೆ ಹೊಂಬಾಳೆ ಫಿಲಂಸ್ ಟ್ವಿಟರ್ ನಲ್ಲಿ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿದೆ.

ಟ್ವಿಟರ್ ನಲ್ಲಿ ಕಾಂತಾರಕ್ಕೆ ಆಸ್ಕರ್ ಸಿಗಬೇಕೆಂದು ಹಲವು ಮಂದಿ ಆಗ್ರಹಿಸಿದ್ದು, ಪ್ರೇಕ್ಷಕರ ಮನವಿಯಂತೆ ಚಿತ್ರತಂಡ ಆಸ್ಕರ್ ಗಾಗಿ ಕಾಂತಾರವನ್ನು ಪರಿಗಣಿಸುವಂತೆ ಅರ್ಜಿ ಸಲ್ಲಿಸಿದ್ದೇವೆ ಎಂದು ನಿರ್ಮಾಪಕ ವಿಜಯ್ ಕಿರಂದೂರ್ ಅವರು ಹೇಳಿದ್ದರು.

ಈಗ ಈ ಅರ್ಜಿ ಆಸ್ಕರ್ ಒಪ್ಪಿಕೊಂಡಿದ್ದು, ಆ ಮೂಲಕ ಕಾಂತಾರ ಸಿನಿಮಾ ಕೂಡ ಆಸ್ಕರ್ ರೇಸ್ ನಲ್ಲಿ ಕಾಣಿಸಿಕೊಳ್ಳಲಿದೆ. ಉತ್ತಮ ಚಿತ್ರ ಹಾಗೂ ಉತ್ತಮ ನಟ ವಿಭಾಗದಲ್ಲಿ 301 ಸಿನಿಮಾಗಳೊಂದಿಗೆ ಕಾಂತಾರ ಪ್ರಶಸ್ತಿಗೆ ಸೆಣಸಾಟ ನಡೆಸಲಿದ್ದು, ಈ ವರ್ಷದ ಆಸ್ಕರ್ ಪ್ರಶಸ್ತಿಯ ಅಂತಿಮ ನಾಮನಿರ್ದೇಶನ ಜನವರಿ 24ರಂದು ಘೋಷಣೆಯಾಗಲಿದೆ.

ಕಾಂತಾರ ಚಿತ್ರಕ್ಕೆ 2 ಆಸ್ಕರ್ ಅರ್ಹತೆ ಸಿಕ್ಕಿದೆ ಎಂದು ಹಂಚಿಕೊಳ್ಳಲು ನಮಗೆ ಅತೀವ ಸಂತಸವಾಗುತ್ತಿದ್ದು ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದೆ.

 
 
 
 
 
 
 
 
 
 
 

Leave a Reply