ರಂಗಸ್ಥಳದ ಚೌಕಟ್ಟಿನಂತೆ ಜೀವನ ನಡೆಸಿ ಕಣ್ಣನ್ನು ಸರಿಸೋಣ~ ಪ್ರದೀಪ್ ಕಲ್ಕೂರ

ನಾದವೈಭವಂ ಉಡುಪಿ ವತಿಯಿಂದ ಹಮ್ಮಿಕೊಳ್ಳಲಾದ ಜಯಾನಂದ ಆಚಾರ್ಯರವರು ಬರೆದ ಜ್ನಾನಗಂಗಾ ಭಾಗ-೨ ಇದರ “ಕಣ್ಣ ಪರೆದೆ ಸರಿಸಿದಾಗ” ಪುಸ್ತಕ  ಬಿಡುಗಡೆ ಸಮಾರಂಭ ಕಡಿಯಾಳಿ ದೇವಾಲಯದ ಕಾತ್ಯಾಯಿನಿ ಮಂಟಪದಲ್ಲಿ ಮಂಗಳವಾರದoದು ಜರುಗಿತು. ಮುಖ್ಯ ಅತಿಥಿ ಪ್ರದೀಪ್ ಕಲ್ಕೂರವರು ಜ್ಯೋತಿ ಬೆಳಗಿಸಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. 
ಬಳಿಕ ಮಾತನಾಡಿದ ಕಲ್ಕೂರ್ ಲೋಕದ ಅನುಭವವನ್ನು ಕಂಡು, ಹಲವಾರು ವಿಷಯಗಳನ್ನು ತಿಳಿದು ಕೃತಿಯನ್ನು ಬರೆದು ಸಮಾಜಕ್ಕೆ ತಂದಿರುವುದು ಬಹಳ ಹೆಮ್ಮೆಯ ಸಂಗತಿ. ಇಂದಿನ ದಿನಗಳಲ್ಲಿ ನಾವೆಲ್ಲರು ಕಣ್ಣನ್ನು ಸರಿಸುವುದು ಬಹಳ ಕಷ್ಟ ಕಾರಣ ಕರೋನಾ. ಎಲ್ಲರಲ್ಲಿ ಭಯವನ್ನು ಮೂಡಿಸಿ ಜನರ ಕಣ್ಣನ್ನು ಪುನಹ ಯಾವಾಗ ಸರಿಸಬಹುದು ಎಂದು ತರುವವರೆಗೆ ಕರೋನಾ ಭಯ ಹುಟ್ಟಿಸಿದೆ. ಆದ್ದರಿಂದ ಎಲ್ಲರೂ ರಂಗಸ್ಥಳದ ಚೌಕಟ್ಟಿನಂತೆ ಜೀವನ ನಡೆಸಿ ಕಣ್ಣನ್ನು ಸರಿಸೋಣ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶಾಂತರಾಜ ಐತಾಳ, ಲೇಖಕ ಜಯಾನಂದ ಆಚಾರ್ಯ ಇವರನ್ನು ನಾದವೈಭವಂ ಇದರ ಸಂಸ್ಥಾಪಕರಾದ ವಾಸುದೇವ ಭಟ್ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಅನುಸೂಯ ನಿರೂಪಿಸಿ, ಸ್ವಾಗತಿಸಿದರು.  
 
 
 
 
 
 
 
 
 
 
 

Leave a Reply