ಎರಡು ವಾರದ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾದ ಐಎಎಸ್‌ ಅಧಿಕಾರಿ 

ಉತ್ತರ ಪ್ರದೇಶ: ಕೊರೋನಾ ಹಾವಳಿ ದೇಶದೆಲ್ಲೆಡೆ ಹೆಚ್ಚುತ್ತಿರುವ ಹಿನ್ನೆಲೆ ಅಧಿಕಾರಿಗಳೆಲ್ಲ ಬಹು ಶ್ರಮವಹಿಸಿ ಕೆಲಸ ಮಾಡುತ್ತಿದ್ದರೆ. ಅದೇ ರೀತಿ ಇಲ್ಲಿ  ಐಎಎಸ್​​ ಅಧಿಕಾರಿಯೊಬ್ಬರು ಅಪರೂಪ ಎಂಬಂತೆ ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳಲ್ಲೇ ಕೋವಿಡ್​ ಕೆಲಸಕ್ಕೆ ಹಾಜರಾಗಿದ್ದು ಇದರಿಂದ ಎಲ್ಲೆಡೆ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಕಳೆದ ಜುಲೈನಿಂದ ಸೆಪ್ಟೆಂಬರ್​ವರೆಗೂ ಗಾಜಿಯಾಬಾದ್‌ನ ಮೋದಿನಗರದ ಐಎಎಸ್‌ ಅಧಿಕಾರಿ ಸೌಮ್ಯ ಪಾಂಡೆ ಗಾಜಿಯಾಬಾದ್‌ನ ಕೋವಿಡ್‌ ನೋಡಲ್‌ ಅಧಿಕಾರಿಯಾಗಿದ್ದರು. ಸೆಪ್ಟೆಂಬರ್‌ನಲ್ಲಿ 22 ದಿನಗಳ ರಜೆ ತೆಗೆದುಕೊಂಡಿದ್ದು ಹೆರಿಗೆಯಾದ ಎರಡೆ ವಾರದಲ್ಲಿ ಕರ್ತವ್ಯಕ್ಕೆ ಮರಳಿದ್ದಾರೆ.

ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ ಈ ಬಗ್ಗೆ ಖಾಸಗಿ ಸುದ್ದಿಸಂಸ್ಥೆಯೊಂದರ ಜೊತೆಗೆ ಮಾತನಾಡಿ , ಕೊರೋನಾ ಹಿನ್ನೆಲೆ ಅಧಿಕಾರಿಗಳ ಮೇಲೆ ಹೆಚ್ಚಿನ ಹೊಣೆ ಇದೆ. ದೇವರು ಮಗುವನ್ನು ಹೆರುವ ಹಾಗೂ ಆರೈಕೆ ಮಾಡುವ ಸಾಮರ್ಥ್ಯ ವನ್ನು  ಮಹಿಳೆಗೆ ನೀಡಿದ್ದಾರೆ. ನಾನು ದೇವರ ಆಶೀರ್ವಾದದೊಂದಿಗೆಯೆ ಕೊರೋನಾ ಕರ್ತವ್ಯ ನಿರ್ವಹಿಸುತ್ತಿದ್ದು, ಅದರೊಂದಿಗೆ  ನನ್ನ ಮಗುವಿನ ಆರೈಕೆಯನ್ನು ಮಾಡುತ್ತಿದ್ದೇನೆ.

ನಾನು ಕೆಲಸ ನಿರ್ವಹಿಸುತ್ತಿರುವ ಮಂಡಲ ಮತ್ತು ಗಾಜಿಯಾಬಾದ್‌ ಜಿಲ್ಲಾಡಳಿತ ನನಗೆ ಕುಟುಂಬವಿದ್ದಂತೆ, ನಾನು ಗರ್ಭಿಣಿಯಾಗಿದ್ದಾಗ ಹಾಗೂ ಡೆಲಿವರಿ ಬಳಿಕ, ಜಿಲ್ಲಾ ಮ್ಯಾಜಿಸ್ಟ್ರೇಟ್​ ಸೇರಿದಂತೆ ಇಡೀ ಆಡಳಿತ ವರ್ಗ ನನಗೆ ಬೆಂಬಲ ನೀಡಿದೆ. ಮನೆಯಲ್ಲಿಯು ಎಲ್ಲರೂ ನನಗೆ ಸಾಕಷ್ಟು ಶಕ್ತಿ ತುಂಬುತ್ತಿದ್ದಾರೆ ಎಂದು ಸೌಮ್ಯಾ ಹೇಳಿದ್ದಾರೆ.
 
 
 
 
 
 
 
 
 

Leave a Reply