ರ್ನಾಟಕ ಪ್ರತತಿಭಾ ರತ್ನ ಪ್ರದಾನ

ಅಜೆಕಾರು/ಹೆಬ್ರಿ: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ನೀಡುವ ೧೨ ನೇ ವರ್ಷದ ಪ್ರತಿಷ್ಠಿತ ಕರ್ನಾಟಕ ಪ್ರತಿಭಾ ರತ್ನ ಗೌರವವನ್ನು ೧೮ ಮಂದಿ ನಾಡಿನ ಪ್ರತಿಭಾನ್ವಿತ ಮಕ್ಕಳಿಗೆ ಮೇ ೧೫ ರಂದು ಪ್ರಸಿದ್ಧ ಉಡುಪಿ ಹರಿಖಂಡಿಗೆ ಶ್ರೀ ಮಹಾಲಸಾ ನಾರಾಯಣಿ ದೇವಿ ಕ್ಷೇತ್ರದಲ್ಲಿ ಧರ್ಮದರ್ಶಿ ಸುರೇಶ ಪೈ, ಡಾ. ತಲ್ಲೂರು ಶಿವರಾಮ ಶೆಟ್ಟಿ, ಉಡುಪಿ ವಿಶ್ವನಾಥ ಶೆಣೈ, ಡಾ. ರಶ್ಮಿ ಅಮ್ಮೆಂಬಳ, ಸಂಧ್ಯಾ ಶೆಣೈ, ಬಿಂಧು ಎ. ಸಹಿತ ಗಣ್ಯರ ಉಪಸ್ಥಿಯಲ್ಲಿ ಪ್ರದಾನಿಸಲಾಗುತ್ತಿದೆ ಎಂದು ಸಂಘಟಕ, ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ.

ನೂರಕ್ಕೂ ಹೆಚ್ಚಿನ ಪ್ರತಿಭಾನ್ವಿತರನ್ನು ಪರಿಗಣಿಸಿ ಅಂತಿಮವಾಗಿ ವಿವಿಧ ಜಿಲ್ಲೆಗಳ ೧೮ ಮಂದಿ ಸಾಧಕ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಕೋವಿಡ್ ನಿಯಮಗಳಿಂದಾಗಿ ಡಿಸೆಂಬರ್‌ನಲ್ಲಿ ಶ್ರವಣ ಬೆಳಗೊಳದಲ್ಲಿ ನಡೆದ ೧೨ ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆದಿರಲಿಲ್ಲ.

ಪುರಸ್ಕೃತರು: ಪ್ರಜ್ಞಾ.ಪಿ ಹರಿತ್ಸಾ- ಶ್ರವಣಬೆಳಗೊಳ, ಮೇಘನಾ ಬಸವರಾಜ ಹಡಪದ- ಧಾರವಾಡ, ಸಿಂಚನಾ ಎಸ್. ಶಂಕರ್- ಬೆಂಗಳೂರು, ಚಿತ್ತರಂಜನ್ ಕಡಂದೇಲು-ಕಾಸರಗೋಡು, ಧನ್ವಿ ರೈ ಕೋಟೆ- ಪುತ್ತೂರು, ಲಾಲಿತ್ಯ ಕುಮಾರ್ ಬೇಲೂರು- ಹಾಸನ, ನಿರೀಕ್ಷ ವಿಟ್ಲ- ದಕ್ಷಿಣ ಕನ್ನಡ, ಸೃಷ್ಠಿ ಬೆಂಗಳೂರು, ಪ್ರೀತಮ್ ದೇವಾಡಿಗ ಮುದ್ರಡಿ- ಉಡುಪಿ, ತನ್ವಿತಾ ಮೊಗವೀರ- ಉಡುಪಿ, ಚಿನ್ವೀಶ್ ಕೊಟ್ಟಾರಿ ಮಂಗಳೂರು, ಅನ್ವಿತಾ ವಿಟ್ಲ- ದ.ಕ, ಸಿರಿ ಎಸ್.- ಬೆಂಗಲೂರು, ಪ್ರಥಮ್ ಮಾರೂರು- ವೇಣೂರು, ಯೋಗ್ನ ಬಿ. ಅಮೀನ್ ಮಂಗಲೂರು, ಸಾನ್ವಿ ಗುರುಪುರ- ಮಂಗಳೂರು, ದಿಯಾ ಆಳ್ವ ಮೂಡುಬಿದಿರೆ, ಆದಯಂತ್ ಅಡೂರು-ಕಾಸರಗೋಡು

 
 
 
 
 
 
 
 
 
 
 

Leave a Reply