ಗುಣರತ್ನಾಕರ ಶ್ರೀಕೃಷ್ಣನ ನಲ್ವತ್ತು ಗುಣರತ್ನಗಳು – ಕೃತಿ ಲೋಕಾರ್ಪಣೆ

ಪರವಿದ್ಯಾ ಪ್ರತಿಷ್ಠಾನ,ಉಡುಪಿ ಆಯೋಜಿಸಿದ್ದ ಈ ಸಮಾರಂಭವು ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರರಾದ ಪುತ್ತಿಗೆ ಶ್ರೀಪಾದರ ಆಶೀರ್ವಾದದೊಂದಿಗೆ 14-09-21 ಮಂಗಳವಾರದಂದು ನಡೆಯಿತು.

ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಸಂಪಾದಿಸಿದ ಈ ಹೊತ್ತಗೆಯು ಕೀರ್ತಿಶೇಷ ಡಾ.ಬನ್ನಂಜೆ ಗೋವಿಂದಾಚಾರ್ಯರ ಉಪನ್ಯಾಸ ಮಾಲಿಕೆಯನ್ನು ಆಧರಿಸಿ ಮೂಡಿಬಂದಿದೆ. ಈ ಕೃತಿಯನ್ನು ಡಾ. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯರು ಬಿಡುಗಡೆ ಗೊಳಿಸಿದರು.
ಈ ಕೃತಿಗೆ ಸಂಬಂಧ ಪಟ್ಟು ಭಾಗವತೊಕ್ತ ಶ್ರೀಕೃಷ್ಣನ 40 ಗುಣಗಳು ಎಂಬ ವಿಚಾರದ ಉಪನ್ಯಾಸವನ್ನು ಶ್ರೀ ರಾಮನಾಥ ಆಚಾರ್ಯರು ನಡೆಸಿಕೊಟ್ಟರು.

ಪ್ರತಿಯೊಬ್ಬರಲ್ಲೂ ಕಂಸನಿದ್ದಾನೆ. ಕಂಸ ಎಂದರೆ ಹಿಂಸಕ ಎಂದರ್ಥ.ಕಂಸನನ್ನು ಕೊಂದ ಕೃಷ್ಣನ ಗುಣಗಳ ಉಪಾಸನೆಯಿಂದ ಪಸ್ತುತ ತಾಂಡವವಾಡುತ್ತಿರುವ ಹಿಂಸೆಯೇ ಮೊದಲಾದ ದುರ್ಗುಣ ಗಳು ನಾಶವಾಗುತ್ತವೆ ಎಂದು ಗುಣಚಿಂತನೆಯ ಮಹತ್ವವನ್ನು ತಿಳಿಸಿದರು.

ಹೊತ್ತಗೆಯ ಪ್ರಕಾಶನಕ್ಕೆ ಆರ್ಥಿಕವಾಗಿ ಸಹಕರಿಸಿದ ಶ್ರೀಗಣೇಶ್ ಪೈ ಮತ್ತು ಶ್ರೀಗೋಪಾಲಕೃಷ್ಣ ಪೈ ಇವರನ್ನು ಗೌರವಿಸಲಾಯಿತು. ಸಗ್ರಿ ರಾಘವೇಂದ್ರ ಉಪಾಧ್ಯಾಯ ರು ಪ್ರಸ್ತಾವನೆ ಗೈದರು.ಓಂಪ್ರಕಾಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಜಿಜ್ಞಾಸುಗಳಿಗೆ ಪ್ರಸಾದರೂಪದಲ್ಲಿ ಕೃತಿಯನ್ನು ನೀಡಲಾಯಿತು.

 
 
 
 
 
 
 
 
 
 
 

Leave a Reply