ಖ್ಯಾತ ಜಾನಪದ ಗಾಯಕ ಸಂಘಟಕ ಗಣೇಶ್ ಗಂಗೊಳ್ಳಿ ಅವರಿಗೆ ಗೌರವ ಡಾಕ್ಟರೇಟ್ ಪದವಿ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಯ ಗಣೇಶ್ ಗಂಗೊಳ್ಳಿ ಅವರಿಗೆ ಜಾನಪದ ಸಂಗೀತ / ಸಂಘಟನೆ/ ಸಂಘ ಸಂಸ್ಥೆಗಳಲ್ಲಿ ನ ವಿಶಿಷ್ಟ ಸೇವೆಯನ್ನು ಪರಿಗಣಿಸಿ. ತಮಿಳು ನಾಡಿನ  ಇಂಡಿಯನ್ ಎಂಪಯರ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ. 
ಶ್ರೀಯುತರು  ಜಾನಪದ ಗಾಯಕರಾಗಿ ಸುಮಾರು 32 ವರ್ಷ ದಿಂದ ನಮ್ಮ ನಾಡು ಅಲ್ಲದೆ ದೇಶದ ಹಲವಾರು ರಾಜ್ಯ ಗಳಲ್ಲಿ ಜನ ಮನ್ನಣೆ ಗಳಿಸಿರುವ ಗಣೇಶ್ ಗಂಗೊಳ್ಳಿ ಅವರು ಪ್ರತಿಷ್ಠಿತ ಕನ್ನಡ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರು ಆಗಿ ಮೂಲ ಜಾನಪದ ಹಿರಿಯ ಕಲಾವಿದ ರಿಗೆ ಪ್ರೋತ್ಸಾಹ ನೀಡುವಲ್ಲಿ ಮುತುವರ್ಜಿ ವಹಿಸಿದ್ದಾರೆ. ಹಾಗೂ ಪಿ.ಕಾಳಿಂಗ ರಾವ್ ಪಾಂಡೇಶ್ವರ ಪ್ರತಿಷ್ಠಾನ ಇದರ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
 ಬೀದರ್ ಜಿಲ್ಲೆಯ ಮಂದಾರ ಕಲಾವಿದರ ವೇದಿಕೆ ಹಾಗೂ ದೇಶಪಾಂಡೆ ಪ್ರತಿಷ್ಠಾನ ಬೀದರ ಕೊಡಮಾಡಿದ ಕರ್ನಾಟಕ ಜಾಪದ ಭೂಷಣ ರಾಜ್ಯ ಪ್ರಶಸ್ತಿ, ಕರುನಾಡ ಸೇವಾ ಟ್ರಸ್ಟ್ ಮಂಡ್ಯ ಜಿಲ್ಲೆ ಇವರು ನೀಡಿದ ಕರುನಾಡ ಸಾಧಕ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗುರುತಿಸಿದೆ. 
ಅಲ್ಲದೆ ನಾಡಿನ ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರುತಿಸಿ ಸನ್ಮಾನಿ ಸಿದೆ. ಹಾಗೂ ಕರ್ನಾಟಕ ಸರಕಾರ ಇಲಾಖೆಗಳ ಯೋಜನೆಗಳನ್ನು ಜಾನಪದ ಕಲಾ ಪ್ರಕಾರಗಳ ಮೂಲಕ ಗ್ರಾಮೀಣ ಜನರಿಗೆ  ತಿಳಿಸುವಲ್ಲಿ ಇಲಾಖೆಗಳಿಂದ ತರಬೇತಿ ಪಡೆದು ಮಾಹಿತಿ ನೀಡುತ್ತಿದ್ದಾರೆ.  
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಮ್ಯುನಿಕೇಟರ್ ಆಶಾ ಕಾರ್ಯಕ್ರಮದಲ್ಲಿ ತರಬೇತಿ ನೀಡಿದ್ದಾರೆ.
 
 
 
 
 
 
 
 
 
 
 

Leave a Reply