Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಸಂಗೀತ ರತ್ನ ಪ್ರಶಸ್ತಿಗೆ ಖ್ಯಾತ ಗಾಯಕ ಡಾ.ಗಣೇಶ್ ಕುಮಾರ್ ಗಂಗೊಳ್ಳಿ ಆಯ್ಕೆ

ಸೃಷ್ಠಿ ಫೌಂಡೇಷನ್ (ರಿ.) ಉಡುಪಿ ಮತ್ತು ದಿಶಾ ಕಮ್ಯೂನಿಕೇಶನ್ಸ್ ಕಟಪಾಡಿ ವತಿಯಿಂದ ಕರ್ನಾಟಕ ರಾಜ್ಯೋತ್ಸವದಂಗವಾಗಿ ನೀಡಲಾಗುವ ಸಂಗೀತ ರತ್ನ ಪ್ರಶಸ್ತಿಗೆ ಖ್ಯಾತ ಗಾಯಕ ಡಾ.ಗಣೇಶ್ ಕುಮಾರ್ ಗಂಗೊಳ್ಳಿ ಆಯ್ಕೆ ಯಾಗಿದ್ದಾರೆ. ಕಡಲಕರೆಯ ಶ್ರೇಷ್ಟ ಗಾಯಕರಲ್ಲಿ ಒಬ್ಬರಾದ ಗಣೇಶ ರವರು ಗಂಗೊಳ್ಳಿ ಎಂದು ಪ್ರಸಿದ್ಧಿ ಪಡೆದವರು. ಜನಪದಸುಗಮ ಗಗನಸಂಗೀತದಲ್ಲಿ ತನ್ನ ಕಂಚಿನ ಸ್ವರ ಮಾದುರ್ಯದಿಂದ ತನ್ನದೆ ಆದ ಛಾಪನ್ನು ಮಾಡಿಸಿದ ಶ್ರೀಯುತರು ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾಗಿ ಪ್ರಸಿದ್ಧಿಯನ್ನು ಪಡೆದವರು. 32 ವರ್ಷದ ಜನಪದ ಸಂಗೀತ ಕ್ಷೇತ್ರದಲ್ಲಿ ಕಲಾಸೇವೆ ಸಲ್ಲಿಸಿದ ಶ್ರೀಯುತರಿಗೆ ಅರ್ಹವಾಗಿಯೇ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಕರ್ಣಾಟಕ ಜಾನಪದ ಕೋಗಿಲೆ ಪ್ರಶಸ್ತಿ ಕರುನಾಡ ರತ್ನ ರಾಜ್ಯ ಪ್ರಶಸ್ತಿ, ಕರ್ಣಾಟಕ ಜಾನಪದ ಭೂಷಣ ರಾಜ್ಯ ಪ್ರಶಸ್ತಿ ಉಡುಪಿ ಜಿಲ್ಲಾ ಸುವರ್ಣ ಕರ್ಣಟಕ ರಾಜ್ಯೋತ್ಸವ ಪ್ರಶಸ್ತಿ ಗಳೊಂದಿಗೆ ದೇಶದದ್ಯಾಂತ ಗೌರವ ಸನ್ಮಾನದೊಂದಿಗೆ, ತಮಿಳುನಾಡಿನ ವಿದ್ಯಾವಿದ್ಯಾನಿಲಯವೊಂದು ಗೌರವ ಡಾಕ್ಟ್ ರೇಟ್ ಕೊಟ್ಟು ಗೌರವಿಸಿದೆ. ಕರ್ಣಾಟಕ ಜನಪದ ಪರಿಷತ್, ಉಡುಪಿಯ ಕಾರ್ಯದ್ಯಕ್ಷರು 1 ಪಾಂಡೇಶ್ವರ ಕಾಳಿಂಗ ರಾವ್ ಪ್ರತಿಷ್ಠಾನ ಉಡುಪಿಯ ಅದ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರಿಂದ ಸಂಗೀತ ಲೋಕಕ್ಕೆ ಇನ್ನಷ್ಟು ಸೇವೆ ಲಭಿಸುವಂತಾಗಲಿ ಅವರ ಕೀರ್ತಿ ಅಜಾರ ಮರವಾಗಿ ಉಳಿಯಲಿ ಎಂದು ಹಾರೈಸುತ್ತ ನಮ್ಮ ಸಂಸ್ಥೆಯು ತುಂಬಾ ಅಭಿಮಾನ ಮತ್ತು ಗೌರವದಿಂದ ರಾಜೋತ್ಸವದ ಈ ಪರ್ವಕಾಲದಲ್ಲಿ SpB……. ಪ್ರಶಸ್ತಿಯನ್ನು ನೀಡುವುದರೊಂದಿಗೆ ತನ್ನನ್ನು ತಾನೇ ಗೌರವಿಸಿಕೊಂಡಿದೆ .ಅವರ ಮುಂದಿನ ಜೀವನ ಉಜ್ವಲವಾಗಲಿ. ಆಯಾರಾರೋಗ್ಯ ನೆಮ್ಮದಿಯ ಜೀವನವನ್ನು ಭಗವಂತ ನಿರಂತರ ಕರುಣೆಸಲಿ ಎಂದು ಈ ಶುಭ ಕಾಲದಲ್ಲಿ ಹಾರೈಸುತ್ತೇವೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!