ಉಡುಪಿ ಗಾಂಧಿ ಆಸ್ಪತ್ರೆಯ ರಜತ ಮಹೋತ್ಸವದ ಸ್ಮರಣ ಸಂಚಿಕೆ “ಸಿಲ್ವರ್ ಸ್ಟೆತ್” ಬಿಡುಗಡೆ…..

ರಜತ ವರ್ಷಾಚರಣೆಯಲ್ಲಿರುವ ಗಾಂಧಿ ಆಸ್ಪತ್ರೆ ಉಡುಪಿ ಹೊರತಂದ “ಸಿಲ್ವರ್ ಸ್ಟೆತ್” ಸ್ಮರಣ ಸಂಚಿಕೆಯನ್ನು ಗೀತಾ ಜಯಂತಿಯ ಶುಕ್ರವಾರದಂದು, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕ್ಷೇತ್ರದಲ್ಲಿ ರಾಜರ್ಷಿ ಪದ್ಮವಿಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅನಾವರಣಗೊಳಿಸಿದರು.
ಕಳೆದ ಇಪ್ಪತೈದು ವರುಷಗಳಿಂದ ಖಾಯಿಲೆ ಬಿದ್ದವರ ಯೋಗಕ್ಷೇಮದ ಕಾಳಜಿ ಹೊತ್ತು ಆರೋಗ್ಯ ಕ್ಷೇತ್ರ ಮಾತ್ರ ವಲ್ಲದೆ ವಿವಿಧ ರೀತಿಯ ಸಮಾಜಮುಖಿ ಸೇವೆ ನಡೆಸಿಕೊಂಡು ಬರುವ ಗಾಂಧಿ ಆಸ್ಪತ್ರೆ ಮತ್ತು ಪಂಚಮಿ ಟ್ರಸ್ಟ್(ರಿ.) ಹಾಗೂ ಪಂಚಲಹರಿ ಫೌಂಡೇಶನ್(ರಿ.)ನ ವಿವಿಧ ಕಾರ್ಯಕ್ರಮಗಳ ವಿಶೇಷ ವಿವರಗಳನ್ನೊಳಗೊಂಡ ಸ್ಮರಣ ಸಂಚಿಕೆಯ ಪುಟ ಪುಟಗಳನ್ನು ವೀಕ್ಷಿಸಿ ಪೂಜ್ಯ ಖಾವಂದರು ಹರುಷ ವ್ಯಕ್ತಪಡಿಸಿ ಸಂಸ್ಥೆಗೆ ಉತ್ತರೋತ್ತರ ಅಭಿವೃದ್ಧಿ ಯೊಂದಿಗೆ ಶುಭ ಹಾರೈಸಿದರು. 
ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಪ್ರಸಾದ್ ರೈ ಬೆಳ್ಳಿಪಾಡಿ ಉಪಸ್ಥಿತರಿದ್ದರು. ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ಮತ್ತು ಲಕ್ಷ್ಮೀ ಹರಿಶ್ಚಂದ್ರ ಉಪಸ್ಥಿತರಿದ್ದರು.
ಸಿಲ್ವರ್ ಸ್ಟೆತ್” ಎನ್ನುವ ಈ ಪಂಚಾಕ್ಷರವನ್ನು ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ಈ ರೀತಿ ವಿಮರ್ಶಿಸಿಸುತ್ತಾರೆೆ: ಸಿಲ್ವರ್ ಎಂದರೆ ಬೆಳ್ಳಿಯಂತೆ ಶುಭ್ರವಾದದ್ದು, ಗ್ರೀಕ್ ಶಬ್ದ STETHO ಎಂದರೆchest  – ಹೃದಯದ ಭಾಗ. ಸಿಲ್ವರ್ ಸ್ಟೆತ್ ಎಂದರೆ ಶುಭ್ರವಾದ ಹೃದಯ. ಮಾನವೀಯತೆಯ ಸೇವೆಯಲ್ಲಿ ಶುಭ್ರವಾದ ಅಂತರಂಗವನ್ನು ಸ್ಮರಣ ಸಂಚಿಕೆಯ ಮೂಲಕ ತೆರೆದಿಟ್ಟಿರುವುದು.
 
 
 
 
 
 
 
 
 
 
 

Leave a Reply