Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

“ಅನ್ನ ಬರುವ ದಾರಿ ತಿಳಿಯದಿರುವುದೇ​ ವರ್ತಮಾನದ ದೊಡ್ಡ ದುರಂತ”-ಡಾ. ನರೇಂದ್ರ ರೈ ದೇರ್ಲ

ನಾವು ಏನನ್ನೂ ತಿಳಿಯದಿದ್ದರೂ ನಡೆಯುತ್ತದೆ.​ ಆದರೆ ಉಣ್ಣುವ ಅನ್ನ ಹೇಗೆ ಬರುತ್ತದೆಂದು​ ತಿಳಿಯದಿರುವುದೇ ವರ್ತಮಾನದ ದೊಡ್ಡ ದುರಂತ ​ಎಂದು ಖ್ಯಾತ ಕೃಷಿಕ ಲೇಖಕ ಡಾ. ನರೇಂದ್ರ ರೈ ದೇರ್ಲ​ ಅಭಿಪ್ರಾಯಪಟ್ಟರು. ಕೃಷಿಯ ಕುರಿತು ಒಲವು​ ಹೊಂದಿರುವ ಕೊನೆಯ ತಲೆಮಾರು ಈಗ ಬದುಕಿದ್ದು,​ ಮುಂದಿನ ತಲೆಮಾರುಗಳಿಗೆ ಕೃಷಿ ಬದುಕಿನ ಒಲವು​ ಪಸರಿಸದಿದ್ದರೆ, ತುತ್ತು ಅನ್ನಕ್ಕಾಗಿ​ ​ ಹಾಹಾಕಾರ ಪಡುವ ಸ್ಥಿತಿ ಮುಂದೆ ಬಂದೊಗಲಿದೆ ಎಂದರು.​ 

​ಅವರು ಡಾ. ಜಿ. ಶಂಕರ್ ಸರಕಾರಿ ಮಹಿಳಾ​ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ​ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಇದರ ಪ್ರಾಂಶುಪಾಲರಾದ ಡಾ. ಭಾಸ್ಕರ ಶೆಟ್ಟಿ ಸಲ್ವಾಡಿಯವರ​ ಚೊಚ್ಚಲ ಕೃತಿ “ಸೌತ್ ಕೆನರಾ ವಸಾಹತುಶಾಹಿ​ ಪ್ರಭುತ್ವದಲ್ಲಿ ಕೃಷಿ ಬದುಕು” ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ​ ಮಾತನಾಡಿದರು. 
 
ಖ್ಯಾತ ಇತಿಹಾಸಕಾರ ಡಾ. ಬಿ. ಜಗದೀಶ ಶೆಟ್ಟಿ​ ಕೃತಿ ಪರಿಚಯ ಮಾಡಿದರು. ಕಾರ್ಯಕ್ರಮದ​ ಅಧ್ಯಕ್ಷತೆ ವಹಿಸಿ ಕೃತಿಕಾರರಾದ ಡಾ. ಭಾಸ್ಕರ ಶೆಟ್ಟಿ ಸಲ್ವಾಡಿ​ ಇವರು ಕೋವಿಡ್ -19ರ ಈ ಪ್ರತಿಕೂಲಗಳ ನಡುವೆ ಒಂದುಸೃಜನಶೀಲ ಕೃತಿ ಹೊರತರಲು ಸಾಧ್ಯವಾದುದರ ಕುರಿತು​ ಸಂತಸ ವ್ಯಕ್ತಪಡಿಸಿ ಕೃತಿಯ ಹುಟ್ಟಿನ ಹಿಂದಿನ​ ನೆನಪುಗಳನ್ನು ಮೆಲುಕು ಹಾಕಿದರು. 
 
ಕಾಲೇಜಿನ​ ಇಂಗ್ಲೀಷ್ ವಿಭಾಗದ ಮುಖ್ಯಸ್ಥ​ ​ಸೋಜನ್ ಕೆ.ಜಿ​ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮಧುಶ್ರೀ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ​ ​ಡಾ. ರವಿರಾಜ ಶೆಟ್ಟಿ ಇವರು​ ನಿರೂಪಿಸಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!