ದೀಪ್ತಿ ಹೆಗಡೆ “ಹೌಟ್ ಮೊಂಡೆ ಮಿಸಸ್ ಇಂಡಿಯಾ” ಅಂತಿಮ ಸುತ್ತಿಗೆ

ಉಡುಪಿ ನಿವಾಸಿ ದೀಪ್ತಿ ಹೆಗಡೆಯವರು 2023ರ ಹೌಟ್ ಮೊಂಡೆ ಮಿಸಸ್ ಇಂಡಿಯಾ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.  ಆ ಮೂಲಕ ತುಳುನಾಡಿಗೆ ಹೊಸ ಗರಿ ಮುಡಿಸಿದಂತಾಗಿದೆ.  ಯುವತಿಯರಿಗೆ ಮಿಸ್ ಯೂನಿವರ್ಸ್ ಇದ್ದಂತೆ,  ಮಹಿಳೆಯರಿಗೆ ಮಿಸಸ್ ಯೂನಿವರ್ಸ್ ಇದ್ದು  ೬ ವರ್ಷದ ಮಗಳು ಸಂಸ್ಕೃತಿ ಹೆಗಡೆ ಮತ್ತು ಕಡ್ತಲ ಕಂಟೆಬೆಟ್ಟು ಸಂತೋಷ್ ಹೆಗ್ಡೆಯವರ ಪತ್ನಿ.
ಇವರು ಜೂನ್ ತಿಂಗಳಲ್ಲಿ ವಿದೇಶದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ದಕ್ಷಿಣ ಭಾರತ ವಲಯವನ್ನು ಪ್ರತಿನಿಧಿಸಲಿದ್ದಾರೆ.  ಇವರು ಮೂಲತಃ ಬೆಳುವಾಯಿ ಐತಮಜಲು ಪದ್ಮಯ ಹೆಗ್ಡೆ ಹಾಗೂ ಸಂಜೀವಿನಿ ಹಗ್ಡೆ ಇವರ ಮೊಮ್ಮಗಳು ಮತ್ತು ಕಾರ್ಕಳ ನುರ್ಲಬೈಲು ಶಂಕರ ಹೆಗ್ಡೆ  ಮತ್ತು ಸರೋಜಾ ಹೆಗ್ಡೆಯವರ ದ್ವಿತೀಯ ಪುತ್ರಿ.
ತಮ್ಮ ವಿದ್ಯಾಭ್ಯಾಸವನ್ನು ಉಡುಪಿಯಲ್ಲಿ ಪೂರ್ಣಗೊಳಿಸಿದ ದೀಪ್ತಿಯವರು, ದುಬೈಯಲ್ಲಿ ಕಳೆದ ಎಂಟು ವರ್ಷಗಳಿಂದ ತಮ್ಮ ಕುಟುಂಬದ ಜೊತೆ ವಾಸವಾಗಿದ್ದು, ಯೋಗ, ನೃತ್ಯ, ಧ್ಯಾನ ತರಬೇತುದಾರರಾಗಿದ್ದಾರೆ.  ಜೂನ್ ತಿಂಗಳಲ್ಲಿ ವಿದೇಶದಲ್ಲಿ ನಡೆಯಲಿರುವ ಫೈನಲ್ ನಲ್ಲಿ ಭಾಗಿಯಾಗುತ್ತಿದ್ದಾರೆ.
 
 
 
 
 
 
 
 
 
 
 

Leave a Reply